ಕೊಡಗು : ಜಿಲ್ಲೆಯಲ್ಲಿ ಮತ್ತೆ ಮಳೆ (Rain News) ಮುಂದುವರಿದಿದ್ದು ಮಡಿಕೇರಿ ತಾಲೂಕಿನ ಭಾಗಮಂಡಲದ ಶಾರದ ಎಂಬುವರಿಗೆ ಸೇರಿದ ಮನೆ ಒಂದು ಬದಿ ಕುಸಿತಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಪಂಚಾಯತ್‌ನ ಸತೀಶ್ ಹಾಗೂ ನಾಗೇಶ್ ಭೇಟಿ ನೀಡಿದ್ದಾರೆ. ಇದೀಗ ಕುಟುಂಬಸ್ಥರನ್ನು ಬಾಡಿಗೆ ಮನೆಗೆ ಸ್ಥಳಾಂತರಿಸಲಾಗಿದೆ.
ಇದನ್ನೂ ಓದಿ | Rain News | ಕೃಷಿ ಜಮೀನಿಗೆ ನುಗ್ಗಿದ ನೀರು; ಕೈಗೆ ಬಂದ ಬೆಳೆ ಬಾಯಿಗೆ ಬಾರದಂತೆ ಮಾಡಿದ ಮಳೆ
ಕುಶಾಲನಗರದಲ್ಲಿ ಕೊಂಚ ಮಳೆ ಕಡಿಮೆ ಆಗಿದ್ದು,ಕಾವೇರಿ ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ.ಸಾಯಿ ಬಡಾವಣೆಯಲ್ಲಿ ನೀರು ಇನ್ನೂ ಇಳಿಮುಖವಾಗಿಲ್ಲ.ಹಾರಂಗಿಯಿಂದ 16 ಕ್ಯೂಸೆಕ್ ನೀರು ಹೊರಕ್ಕೆ ಬಿಡಲಾಗಿದೆ.ಮತ್ತೆ ಹೆಚ್ಚಾದಲ್ಲಿ ಸಾಯಿ ಬಡಾವಣೆಗೆ ನೀರು ನುಗ್ಗುವ ಆತಂಕ ಸೃಷ್ಟಿಯಾಗಿದೆ. ಬ್ರಹ್ಮಗಿರಿ ತಪ್ಪಲಿನಲ್ಲಿ ವರುಣನ ಅಬ್ಬರ ಹೆಚ್ಚಾಗಿದೆ. ಭಾಗಮಂಡಲದ ತ್ರಿವೇಣಿ ಸಂಗಮ ಜಲಾವೃತಗೊಂಡಿದೆ.ನಾಪೋಕ್ಲು ಭಾಗಮಂಡಲ ರಸ್ತೆ ಮೇಲೆ 2 ಅಡಿ ನೀರು ನಿಂತಿದೆ.
ಇದನ್ನೂ ಓದಿ | Rain News | ಕೃಷಿ ಜಮೀನಿಗೆ ನುಗ್ಗಿದ ನೀರು; ಕೈಗೆ ಬಂದ ಬೆಳೆ ಬಾಯಿಗೆ ಬಾರದಂತೆ ಮಾಡಿದ ಮಳೆ