Site icon Vistara News

Rain News: ಬೆಂಗಳೂರಲ್ಲಿ ಸಂಜೆಗೆ ಮಳೆ ದಾಳಿ; ಚಾಮರಾಜನಗರದಲ್ಲಿ ಧರೆಗುರುಳಿದ ಬೃಹತ್‌ ಮರ

Rain News

Rain News

ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಸೋಮವಾರವೂ ವರುಣ (Bangalore Rain) ಅಬ್ಬರಿಸಿದ್ದಾನೆ. ಕಚೇರಿ ಮುಗಿಸಿ ಮನೆಗೆ ಸೇರಿಕೊಳ್ಳಬೇಕಾದವರು ರೋಡಿನಲ್ಲಿ ನಿಲ್ಲುವಂತಾಯ್ತು. ಧಾರಾಕಾರ ಮಳೆಯಿಂದಾಗಿ (Rain News) ಉಂಟಾದ ಟ್ರಾಫಿಕ್ ಜಾಮ್‌ನಿಂದಾಗಿ ಮಳೆಯಲ್ಲೇ ದ್ವಿಚಕ್ರ ವಾಹನ ಸವಾರರು ನೆನೆಯುವಂತಾದರೆ, ಇತ್ತ ಆಟೋ, ಓಲಾ ಉಬರ್ ಕ್ಯಾಬ್, ಕಾರುಗಳು, ಬಸ್ಸುಗಳು ನಿಂತಲ್ಲೇ ನಿಂತು ನಿಧಾನಗತಿಯಲ್ಲಿ ಸಂಚರಿಸುತ್ತಿದ್ದವು.

ಮಳೆಗೆ ಅಂಡರ್‌ಪಾಸ್‌ ಆಶ್ರಯ ಪಡೆದ ಸವಾರರು

ಮೆಜೆಸ್ಟಿಕ್, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ರಾಜಾಜಿನಗರ ಸೇರಿದಂತೆ ಭಾಗಶಃ ಎಲ್ಲ ಭಾಗದಲ್ಲೂ ವ್ಯಾಪಕ ಮಳೆಯಾಗಿದೆ. ಮಳೆಯಿಂದ ವಾಹನ ಸವಾರರ ಪರದಾಟ ಒಂದು ಕಡೆಯಾದರೆ ಮತ್ತೊಂದು ಕಡೆ ದಾರಿಹೋಕರು ಪೆಟ್ರೋಲ್‌ ಬಂಕ್‌, ಅಂಗಡಿ ಮುಂಗಟ್ಟು, ಸ್ಕೈವಾಕ್‌ ಬಳಿ ಆಶ್ರಯ ಪಡೆದುಕೊಂಡರು.

ಮನೆ ಮೇಲೆ ಬಿದ್ದ ಮರ, ಹಾರಿದ ಹಂಚು

ಬಿರುಗಾಳಿ ಸಹಿತ ಮಳೆಗೆ ಹಾರಿ ಹೋದ ಹಂಚು

ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಅಂಕಹಳ್ಳಿ ಹಾಗೂ ಬಾಚಹಳ್ಳಿ ಗ್ರಾಮದಲ್ಲಿ ಹಲವು ಮನೆಗಳಿಗೆ ಹಾನಿಯಾಗಿವೆ. ಮಳೆಗೆ ಮರವೊಂದು ಮನೆ ಮೇಲೆ ಬಿದ್ದಿದ್ದರೆ ಮತ್ತೊಂದು ಕಡೆ ಬಿರುಗಾಳಿಗೆ ಹಂಚುಗಳೆಲ್ಲವೂ ಹಾರಿ ಹೋಗಿವೆ.

ಧರೆಗುರಳಿದ ಬೃಹತ್‌ ಮರಗಳು

ಚಲಿಸುತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಹಿಂದೆ ಮುಂದೆ ಮರಗಳು ಧರೆಗುರಳಿವೆ. ಕೂದಲೆಳೆ ಅಂತರದಲ್ಲಿ ಬಸ್‌ನಲ್ಲಿದ್ದವರು ಪಾರಾಗಿದ್ದಾರೆ.

ಬಸ್‌ ಹಿಂದೆ-ಮುಂದೆ ಬಿದ್ದ ಮರಗಳು, ಪ್ರಯಾಣಿಕರು ವಾಪಸ್‌ ಬರುತ್ತಿರುವ ಚಿತ್ರ

ಇದನ್ನೂ ಓದಿ: Bangalore Rain: ಬೆಂಗಳೂರಲ್ಲಿ ಅಸುರಕ್ಷಿತ ಅಂಡರ್‌ಪಾಸ್‌ ಬಂದ್‌; ಮಳೆಗಾಲ ಮುಗಿಯುವವರೆಗೆ ಕ್ರಮ

Exit mobile version