Site icon Vistara News

Rain News : ಮಳೆ ಅಬ್ಬರಕ್ಕೆ ಜನರು ತತ್ತರ; ಹಲವೆಡೆ ಗೋಡೆ ಕುಸಿತ, ಸೇತುವೆ ಮುಳುಗಡೆ

Rain News

ಧಾರವಾಡ/ಕಲಬುರಗಿ: ಕಳೆದೊಂದು ವಾರದಿಂದ ರಾಜ್ಯದ ವಿವಿಧೆಡೆ ಮಳೆ (Weather report) ಅಬ್ಬರಿಸುತ್ತಿದೆ. ಧಾರವಾಡದಲ್ಲಿ ಕಳೆದ ನಾಲ್ಕು ದಿನಗಳಿಂದ ನಿರಂತರ (Rain News) ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ರಾತ್ರಿ ಪೂರ್ತಿ ಸುರಿದ ಭಾರಿ ಮಳೆಯಿಂದಾಗಿ (Rain Effected) ಗ್ರಾಮದಲ್ಲಿ ಮನೆಯ ಚಾವಣಿ ಕುಸಿದಿದ್ದು, ಅದೃಷ್ಟವಶಾತ್‌ ಮನೆಯ‌ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಧಾರವಾಡ ಜಿಲ್ಲೆಯ ಅಳ್ಳಾವಾರ ತಾಲೂಕಿನ ಕುಂಬಾರಕೊಪ್ಪ ಗ್ರಾಮದಲ್ಲಿ ಗಂಗಾರಾಮ ವಡ್ಡರವರಿಗೆ ಸೇರಿದ ಮನೆ ಕುಸಿದಿದೆ. ಮನೆಯಲ್ಲಿದ್ದವರು ಪವಾಡ ಸದೃಶ್ಯ ರೀತಿಯಲ್ಲಿ ಪಾರಾಗಿದ್ದಾರೆ. ನಿರಂತರ ಮಳೆಯಿಂದ ಮನೆಯ ಗೋಡೆಗಳು ನೀರು ಹಿಡಿದಿದ್ದು, ಕಳೆದ ತಡರಾತ್ರಿ ಮನೆಯ ಒಂದು ಗೋಡೆ ಕುಸಿತಗೊಂಡಿದೆ. ಬಳಿಕ ಮನೆಯ ಮೇಲ್ಚಾವಣಿ ಕುಸಿಯುತ್ತಿದಂತೆ ಕುಟುಂಬಸ್ಥರು ಹೊರಗೆ ಓಡಿದ್ದಾರೆ. ಮನೆ ಕಳೆದಕೊಂಡಿರುವ ಗಂಗಾರಾಮ ಕುಟುಂಬ ಬೀದಿಪಾಲಾಗಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೆರೆಯಂತಾದ ರಸ್ತೆಗಳು

ಸೇತುವೆ ಮುಳುಗಡೆ, ರಸ್ತೆ ಸಂಪರ್ಕ ಕಡಿತ

ಕಲಬುರಗಿಯಲ್ಲಿ ವರುಣಾರ್ಭಟ ಮುಂದುವರಿದಿದ್ದು, ಕಾಳಗಿ‌ ಕಲಬುರಗಿ ರಸ್ತೆ ಸಂಪರ್ಕ‌ ಕಡಿತಗೊಂಡಿದೆ. ಕಾಳಗಿ ತಾಲೂಕಿನ ಕೋರವಾರ ಬಳಿ ಸೇತುವೆ ಮೇಲಿಂದ ನೀರು ಹರಿಯುತ್ತಿದೆ. ಹೀಗಾಗಿ ಕಲಬುರಗಿ ಕಾಳಗಿ ರಾಜ್ಯ ಹೆದ್ದಾರಿ ಸಂಪರ್ಕ ಕಡಿತಗೊಂಡಿದೆ.

ಇತ್ತ ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಕೃಷ್ಣಾ ನದಿಯ ಒಳ ಹರಿವು‌ ಗಣನೀಯ ಏರಿಕೆ ಕಂಡಿದೆ. ಕೃಷ್ಣಾ ನದಿ ಉಪ ನದಿಗಳಾದ ವೇದಗಂಗಾ, ದೂದಗಂಗಾ ಪಂಚಗಂಗಾ ನದಿ ಒಳ ಹರಿವಿನಲ್ಲಿ ಹೆಚ್ಚಳವಾಗಿದೆ. ಪರಿಣಾಮ ನಿಪ್ಪಾಣಿ ತಾಲೂಕಿನ ಎರಡು ಸೇತುವೆಗಳು ಜಲಾವೃತವಾಗಿದೆ. ನದಿ ಪಾತ್ರದ ಜನರಿಗೆ ಧ್ವನಿವರ್ಧಕ ಮೂಲಕ ನಿಪ್ಪಾಣಿ ಪೊಲೀಸರು ಎಚ್ಚರಿಕೆ ನೀಡುತ್ತಿದ್ದಾರೆ.

ಮಳೆಯ ಅವಾಂತರಕ್ಕೆ ಜನರು ತತ್ತರ

ಇದನ್ನೂ ಓದಿ: Rain News : ಮಳೆ ರಗಳೆ; ಜ್ಞಾನ ದೇಗುಲವಿದು ಬಕೆಟ್‌ ಹಿಡಿದು ಒಳಗೆ ಬಾ

ಕೆರೆಯಂತಾದ ರಸ್ತೆಗಳು

ಕಲಬುರಗಿಯ ಬೆನಕನಹಳ್ಳಿ ಗ್ರಾಮಕ್ಕೆ ಪಕ್ಕದ ನಾಲಾ ನೀರು ನುಗ್ಗಿದ್ದು, ರಸ್ತೆಗಳೆಲ್ಲವೂ ಕೆರೆಯಂತಾಗಿದೆ. ಭಾರೀ ಮಳೆಯಿಂದ ನಾಲಾದಲ್ಲಿ ನೀರು ಉಕ್ಕಿ ಹರಿಯುತ್ತಿದ್ದು, ಹತ್ತಾರು ಮನೆಗಳಿಗೆ ನೀರು ನುಗ್ಗಿದೆ. ಪರಿಣಾಮ ದಿನಸಿ, ಅಗತ್ಯ ವಸ್ತುಗಳೆಲ್ಲವೂ ನೀರುಪಾಲಾಗಿದೆ. ಮನೆಯಿಂದ ಹೊರ ಬಾರಲು ಜನರಿಗೆ ಜಲ ದಿಗ್ಬಂಧನ ಹಾಕಿದಂತಾಗಿದೆ. ಕುಡಿಯುವ ನೀರಿಗೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಮನೆಯೊಳಗೆ ನುಗ್ಗಿದ ನೀರು

ಇತ್ತ ಚಿಂಚೋಳಿ ತಾಲೂಕಿನಲ್ಲೂ ಅಬ್ಬರದ ಮಳೆಗೆ ಹಳ್ಳ- ಕೊಳ್ಳಗಳು ಉಕ್ಕಿ ಹರಿಯುತ್ತಿದೆ. ಮೇಘಾರ್ಭಟಕ್ಕೆ ಕಲಬುರಗಿ ಮಂದಿ ಹೈರಾಣಾಗಿದ್ದಾರೆ. ಕಲಬುರಗಿ ಜಿಲ್ಲೆ ಚಿತ್ತಾಪುರ ಪಟ್ಟಣದಲ್ಲಿ ನಿರಂತರ ಮಳೆಯಿಂದ ತೇವಾಂಶಗೊಂಡು ಎರಡು ಮನೆಗಳ ಗೋಡೆ ಕುಸಿದಿದೆ. ಯಾವುದೇ ಪ್ರಾಣಹಾನಿ ಆಗಿಲ್ಲ. ಸ್ಥಳಕ್ಕೆ ಪುರಸಭೆ ಅಧಿಕಾರಿಗಳ ಭೇಟಿ ಪರಿಶೀಲನೆ ನಡೆಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version