ನವದೆಹಲಿ: ಸಾಮಾನ್ಯವಾಗಿ ಒಂದು ಪಕ್ಷದ ನಾಯಕರನ್ನು ಮತ್ತೊಂದು ಪಕ್ಷದ ನಾಯಕರು ಹೊಗಳುವುದಿಲ್ಲ. ಅದರಲ್ಲೂ, ಆಡಳಿತ ಪಕ್ಷವನ್ನು ತೆಗಳುವುದೇ ಪ್ರತಿಪಕ್ಷದ ಕಾಯಕವಾಗಿರುತ್ತದೆ. ಆದರೆ, ಈ ಮಾತಿಗೆ ವ್ಯತಿರಿಕ್ತ ಎಂಬಂತೆ, ರಾಜಸ್ಥಾನದ ವಿದ್ಯುತ್ ಸಮಸ್ಯೆ ಬಗೆಹರಿಸಲು ಸಕಾರಾತ್ಮಕವಾಗಿ ಸ್ಪಂದಿಸಿದ ಹಿನ್ನೆಲೆಯಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಹೊಗಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗೆಹ್ಲೋಟ್, “ರಾಜಸ್ಥಾನದ ವಿದ್ಯುತ್ ಸಮಸ್ಯೆ ಬಗೆಹರಿಸಲು ಪ್ರಲ್ಹಾದ್ ಜೋಶಿ ಅವರು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ಛತ್ತೀಸ್‌ಗಢದಲ್ಲಿರುವ ಅಧಿಕಾರಿಗಳು ಸಹ ನಮಗೆ ನೆರವು ನೀಡಿದ್ದಾರೆ. ಅದರಲ್ಲೂ, ಕಲ್ಲಿದ್ದಲು ಆಮದು ಮಾಡಿಕೊಳ್ಳುವ ಕುರಿತು ಕೇಂದ್ರ ಸರ್ಕಾರ ನಿರ್ಬಂಧ ಹಿಂಪಡೆದಿರುವುದು ಉತ್ತಮವಾಗಿದೆ. ಜೋಶಿ ಅವರಂತಹ ನಾಯಕರ ಧನಾತ್ಮಕ ಸ್ಪಂದನೆಯು ಶ್ಲಾಘನೀಯ” ಎಂದಿದ್ದಾರೆ.
ಇದನ್ನೂ ಓದಿ | ಗುಜರಾತ್ ಪಿಎಂಕೆಕೆಕೆವೈನಲ್ಲಿ ₹1209 ಕೋಟಿ ಸಂಗ್ರಹಣೆ, ₹13.9 ಕೋಟಿ ಖರ್ಚು: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ