Site icon Vistara News

Rakshit Shetty: ಶಿವಪಾಡಿ ಉಮಾಮಹೇಶ್ವರ ದೇಗುಲದಲ್ಲಿ ಪುಂಗನೂರು ತಳಿ ಗೋವನ್ನು ಮುದ್ದಾಡಿದ ರಕ್ಷಿತ್ ಶೆಟ್ಟಿ

rakshit Shetty cuddles punganur breed of cow at Shivapadi Umamaheswara temple

ಉಡುಪಿ: ಚಾರ್ಲಿ ಸಿನಿಮಾದಲ್ಲಿ ಶ್ವಾನ ಪ್ರೇಮ ಮೆರೆದಿದ್ದ ಸಿಂಪಲ್ ಸ್ಟಾರ್ ನಟ ರಕ್ಷಿತ್ ಶೆಟ್ಟಿ ಅವರು ತಮ್ಮ ಹುಟ್ಟೂರು ಉಡುಪಿಯ ಶಿವಪಾಡಿಯಲ್ಲಿ ಪುಂಗನೂರು ತಳಿಯ ಗೋವುಗಳನ್ನು ಮುದ್ದಾಡಿ ಸಂತಸಪಟ್ಟಿದ್ದಾರೆ.

ಉಡುಪಿಯ ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 22ರಿಂದ ಮಾರ್ಚ್ 05ರವರೆಗೆ ‘ಅತಿರುದ್ರ ಮಹಾಯಾಗ’ ನಡೆಯಲಿದೆ. ಸುಮಾರು 4 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯುವ ಯಾಗಕ್ಕಾಗಿ ಭರದ ಸಿದ್ಧತೆ ನಡೆಯುತ್ತಿದೆ.

ಈ ಸಂದರ್ಭ ನಟ ರಶಿತ್ ಶೆಟ್ಟಿ ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಬಳಿಕ ದೇಗುಲದಲ್ಲಿ ನಡೆಯುತ್ತಿರುವ ಯಾಗದ ಸಿದ್ಧತೆಗಳನ್ನು ಹಾಗೂ ತಯಾರಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನೂ ಓದಿ: Sindhuri Vs Roopa: ರೋಹಿಣಿ-ರೂಪಾ ಇಬ್ಬರಿಗೂ ಜಾಗ ತೋರಿಸದೇ ಎತ್ತಂಗಡಿ: ರೂಪಾ ಪತಿ ಮೌನೀಶ್‌ ಮೌದ್ಗಿಲ್‌ ಸಹ ವರ್ಗಾವಣೆ

ದೇವಸ್ಥಾನದಲ್ಲಿ ಆವರಣದಲ್ಲಿ ಪುಂಗನೂರು ತಳಿಯ ಗೋವುಗಳನ್ನು ಮುದ್ದಾಡಿದ ರಕ್ಷಿತ್‌ ಶೆಟ್ಟಿ, ಅವುಗಳಿಗೆ ಮೇವು ಹಾಕಿ ಸಂಭ್ರಮಿಸಿದರು. ಪುಂಗನೂರು ತಳಿ ಅಳಿವಿನಂಚಿನ ಗೋ ತಳಿಯಾಗಿದ್ದು, ಶಿವಪಾಡಿಯ ಶಿವ ಭಕ್ತರಿಗೆ ಪುಂಗನೂರು ತಳಿಯನ್ನು ಪರಿಚಯಿಸುವ ಸದುದ್ದೇಶದಿಂದ ಇಲ್ಲಿ ಈ ತಳಿಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೇಳಲಾಗಿದೆ.

Exit mobile version