Site icon Vistara News

Ram Mandir: Selfie With ರಾಮೋತ್ಸವದಲ್ಲಿ ಮಿಂಚಿದ ಬಾಲರಾಮರು; ಮದುವೆ ಮನೆಯಲ್ಲೂ ರಾಮಜಪ

Selfie With Ramotsava

ದೇಶಾದ್ಯಂತ ರಾಮೋತ್ಸವದ ಸಂಭ್ರಮ ಸಡಗರ ಮನೆ ಮಾಡಿದೆ. ಈ ಐತಿಹಾಸಿಕ ದಿನವನ್ನು ಕರುನಾಡಿನ ಗಲ್ಲಿ ಗಲ್ಲಿಯಲ್ಲೂ ಅದ್ಧೂರಿಯಾಗಿ (Ram Mandir) ಆಚರಿಸಲಾಗುತ್ತಿದೆ. ಕೋಟ್ಯಂತರ ಭಕ್ತ ಸಮೂಹ, ಭಕ್ತಿ ಭಾವದಲ್ಲಿ ಭಾವೈಕ್ಯತೆಯೊಂದಿಗೆ ಮಿಂದೇಳುತ್ತಿದೆ. ವಿಶಿಷ್ಟ, ವಿಭಿನ್ನ ಸೇವೆ ಮೂಲಕ ರಾಮನ (Ayodhya Mandir) ಕೃಪೆಗೆ ಪಾತ್ರರಾಗುತ್ತಿದ್ದಾರೆ. ದೇಶದ ಮೂಲೆ-ಮೂಲೆಯಲ್ಲೂ ರಾಮಜಪವೇ ಝೇಂಕರಿಸುತ್ತಿದೆ. ಈ ವೇಳೆ ವಿಸ್ತಾರ ನ್ಯೂಸ್‌ ಸಹ ಜನರ ಸಂಭ್ರಮದಲ್ಲಿ ಭಾಗಿಯಾಗಿದ್ದು, ಸೆಲ್ಫಿ ವಿತ್‌ ರಾಮೋತ್ಸವಕ್ಕೆ (Selfie With Ramotsava) ಕರೆ ನೀಡಿತ್ತು. ಇದಕ್ಕೆ ಸಾರ್ವಜನಿಕರಿಂದ ವ್ಯಾಪಕ ಪ್ರತಿಕ್ರಿಯೆ ಲಭ್ಯವಾಗಿದ್ದು, ಫೋಟೋಗಳನ್ನು ಕಳಿಸಿ ಸಂಭ್ರಮವನ್ನು ಹಂಚಿಕೊಳ್ಳುತ್ತಿದ್ದಾರೆ. ಈ ರಾಮೋತ್ಸವದ ಸಂತಸವು ಹೇಗಿತ್ತು? ಇಲ್ಲಿದೆ ನೋಡಿ ಫೋಟೊ ಗ್ಯಾಲರಿ.

ಖ್ಯಾತ ಜ್ಯೋತಿಷ್ಯ ಅಂಕಣ ಬರಹಗಾರರಾದ ವಿದ್ವಾನ್ ನವೀನಶಾಸ್ತ್ರಿ ರಾ ಪುರಾಣಿಕ ಅವರ ಮಗಳು ಶ್ರೀವೇದಾ ನವೀನಶಾಸ್ತ್ರಿ ಪುರಾಣಿಕ ಬಾಲ ರಾಮನ ವೇಷ ತೊಟ್ಟು ಸಂಭ್ರಮಿಸಿದ್ದು ಹೀಗೆ
ಮದುವೆ ಮನೆಯಲ್ಲೂ ರಾಮ ನಾಮ ಜಪ.. ಶ್ರೀ ರಾಮನ ಕಟೌಟ್ ಮುಂದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಾವಣಗೆರೆಯ ರೋಹಿತ್, ಅರ್ಪಿತಾ
ಸೆಲ್ಫಿ ವಿತ್‌ ರಾಮೋತ್ಸವ ಸಂಭ್ರಮದಲ್ಲಿ ಬೆಂಗಳೂರಿನ ಜಯನಗರದ ಗುಲ್ಬರ್ಗಾ ಕಾಲೋನಿಯ ಪ್ರದೀಪ್ ಮತ್ತು ತಂಡ

ರಾಮ ಲಕ್ಷ್ಮಣ, ಸೀತಾ ಹಾಗೂ ಹನುಮನ ವೇಷದಲ್ಲಿ ಬೆಳಗಾವಿಯ ಋಷಿ, ಸೌಂದತ್ತಿಯ ಕಾರ್ತಿಕ್, ಹರಳಕಟ್ಟಿಯ ಅಮ್ಮು, ಈಶ್ವರಿ

ಶಿರಸಿಯ ಮರಾಠಿ ಕೊಪ್ಪದ ಶ್ರೀ ನಾಗಶ್ವಥ್ ದೇವಸ್ಥಾನ ದಲ್ಲಿ ನಡೆದ ರಾಮ ತಾರಕ ಹೋಮದಲ್ಲಿ ಪಾಲ್ಗೊಂಡ ಸುಂದರ ಕ್ಷಣ

ಬಳ್ಳಾರಿಯ ಕಂಪ್ಲಿ ಕೋಟೆಯಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು ಶ್ರೀರಾಮ, ಸೀತದೇವಿ, ಲಕ್ಷ್ಮಣ, ಹನುಮಂತ ವೇಷಭೂಷಣದೊಂದಿಗೆ ಶ್ರೀರಾಮ ಸ್ಮರಣೆ ಮಾಡಿದರು.
ರಾಮನ ರೂಪದಲ್ಲಿ ವಿಜಯನಗರದ ಹೊಸಪೇಟೆಯ ಮಾನ್ವಿತಾ
ಚಿಕ್ಕಬಳ್ಳಾಪುರದ ಪಟ್ರೇನಹಳ್ಳಿಯಲ್ಲಿ ಶ್ರೀರಾಮನ ಹೆಸರಿನಲ್ಲಿ ರಕ್ತದಾನ ಮಾಡಿದ ಯುವಕರು
ಗಿಡ ನೆಟ್ಟು ರಾಮೋತ್ಸವವನ್ನು ವಿಶೇಷವಾಗಿ ಆಚರಿಸಿದ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕೊಗೋಡು ಗ್ರಾಮ ಲಕ್ಷ್ಮಿ ನಾಗರಾಜು ಕುಟುಂಬಸ್ಥರು
ಗಿಡ ನೆಟ್ಟು ರಾಮೋತ್ಸವವನ್ನು ವಿಶೇಷವಾಗಿ ಆಚರಿಸಿದ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕೊಗೋಡು ಗ್ರಾಮ ಲಕ್ಷ್ಮಿ ನಾಗರಾಜು ಕುಟುಂಬಸ್ಥರು
ದಕ್ಷಿಣ ಕನ್ನಡದ ವಿಠ್ಠಲ ಪದವಿ ಪೂರ್ವ ಕಾಲೇಜಿನಲ್ಲಿ ಸವಿತಾ ಕೊಡಂದೂರು ಮತ್ತು ಬಳಗದಿಂದ ಭಕ್ತಿ ಗಾಯನ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version