Site icon Vistara News

Ram Mandir: Selfie With ರಾಮೋತ್ಸವದಲ್ಲಿ ಮುಂದುವರಿದ ರಾಮಲಲ್ಲಾ ಸಂಭ್ರಮ

Selfie With Ramostva

ದೇಶಾದ್ಯಂತ ರಾಮೋತ್ಸವದ ಸಂಭ್ರಮ ಸಡಗರ ಮನೆ ಮಾಡಿತ್ತು. ಈ ಐತಿಹಾಸಿಕ ದಿನವನ್ನು ಕರುನಾಡಿನ ಗಲ್ಲಿ ಗಲ್ಲಿಯಲ್ಲೂ ಅದ್ಧೂರಿಯಾಗಿ (Ram Mandir) ಆಚರಿಸಲಾಗಿತ್ತು. ಕೋಟ್ಯಂತರ ಭಕ್ತ ಸಮೂಹ, ಭಕ್ತಿ ಭಾವದಲ್ಲಿ ಭಾವೈಕ್ಯತೆಯೊಂದಿಗೆ ಮಿಂದಿದ್ದರು. ವಿಶಿಷ್ಟ, ವಿಭಿನ್ನ ಸೇವೆ ಮೂಲಕ ರಾಮನ (Ayodhya Mandir) ಕೃಪೆಗೆ ಪಾತ್ರರಾಗಿದ್ದರು. ದೇಶದ ಮೂಲೆ-ಮೂಲೆಯಲ್ಲೂ ರಾಮಜಪ ಮುಂದುವರಿದಿದೆ. ವಿಸ್ತಾರ ನ್ಯೂಸ್‌ ಸಹ ಜನರ ಸಂಭ್ರಮದಲ್ಲಿ ಭಾಗಿಯಾಗಿದ್ದು, ಸೆಲ್ಫಿ ವಿತ್‌ ರಾಮೋತ್ಸವಕ್ಕೆ (Selfie With Ramotsava) ಎರಡನೇ ದಿನವೂ ಸಾರ್ವಜನಿಕರಿಂದ ವ್ಯಾಪಕ ಪ್ರತಿಕ್ರಿಯೆ ಲಭ್ಯವಾಗಿದೆ. ಫೋಟೋಗಳನ್ನು ಕಳಿಸಿ ಸಂಭ್ರಮವನ್ನು ಹಂಚಿಕೊಳ್ಳುತ್ತಿದ್ದಾರೆ. ಈ ರಾಮೋತ್ಸವದ ಸಂತಸವು ಹೇಗಿತ್ತು? ಇಲ್ಲಿದೆ ನೋಡಿ ಫೋಟೊ ಗ್ಯಾಲರಿ.

ಮಳವಳ್ಳಿ ತಾಲೂಕು ಕಿರುಗವಾಲು ಗ್ರಾಮದಲ್ಲಿ ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತರಾಗಿ ಮುಚ್ಚಿ ರಾಮೋತ್ಸವದಲ್ಲಿ ಭಾಗಿಯಾದ ಕ್ಷಣ
ಗೋಕಾಕ್‌ನ ತುಕ್ಕನಟ್ಟಿಯಲ್ಲಿ ಆಂಜನೇಯ ಮೂರ್ತಿ ಪ್ರತಿಷ್ಠಾಪನೆ ಮಾಡಿ ಸಂತಸ ಹಂಚಿಕೊಂಡ ಕ್ಷಣ
ಶ್ರೀ ರಾಮಲಲ್ಲಾ ಪ್ರಾಣಪ್ರತಿಷ್ಟಾಪನಾ ಪ್ರಯುಕ್ತ ದೀಪಾರಾಧನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸೆಲ್ಫಿ ಫೋಟೊ ಕಳಿಸಿದ ಮೈಸೂರಿನ ದೇವರಾಜ್ ಎಚ್ ಜಿ
ಸೆಲ್ಫಿ ವಿತ್‌ ರಾಮೋತ್ಸವ
ಗೋಕಾಕ್‌ನ ತುಕ್ಕನಟ್ಟಿಯಲ್ಲಿ ಆಂಜನೇಯ ಮೂರ್ತಿ ಪ್ರತಿಷ್ಠಾಪನೆ ಮಾಡಿ ಸಂತಸ ಹಂಚಿಕೊಂಡ ಕ್ಷಣ
ಭಾಲ್ಕಿ ತಾಲೂಕಿನ ಹೊನ್ನಳ್ಳಿ ಗ್ರಾಮದ ಯುವಕರು ಹಾಗೂ ಗ್ರಾಮಸ್ಥರ ಸಂಭ್ರಮ

ಶ್ರೀ ರಾಮೋತ್ಸವದ ಸಂಭ್ರಮದಲ್ಲಿ ಹಾನಗಲ್ ತಾಲೂಕಿನ ತಿಳುವಳ್ಳಿಯ ಅಕ್ಷರ ಶಾಲೆಯ ಮಕ್ಕಳ ಸಂಭ್ರಮಾಚರಣೆ

ಶ್ರೀ ರಾಮೋತ್ಸವದ ಸಂಭ್ರಮದಲ್ಲಿ ಹಾನಗಲ್ ತಾಲೂಕಿನ ತಿಳುವಳ್ಳಿಯ ಅಕ್ಷರ ಶಾಲೆಯ ಮಕ್ಕಳ ಸಂಭ್ರಮಾಚರಣೆ

ಎನ್‌ಆರ್‌ಎಸ್‌ ಬಿಚ್‌ಕನ್ಸಲ್ಟ್ರ್‌ ಪ್ರೈವೇಟ್‌ ಲಿಮಿಟೆಡ್‌ನ ಸಿಬ್ಬಂದಿಯ ಸೆಲ್ಫಿ ವಿತ್‌ ರಾಮೋತ್ಸವ
ಧಾರವಾಡದ ವಿದ್ಯಾಶ್ರೀ ವಿಜಯ ಶಿಂಧೆ ಅವರ ಕೈಯಲ್ಲಿ ಅರಳಿದ ಪ್ರಭು ಶ್ರೀರಾಮ
ಧಾರವಾಡದ ಡಾ.ವಿನಯ ಹಾಗೂ ಡಾ.ಲತಾ ಕುಲಕರ್ಣಿ ಅವರ ಪುತ್ರಿ ವೇದಿಕಾ ವಿನಯ ಕುಲಕರ್ಣಿ ರಾಮನಾಗಿ ಸಂಭ್ರಮಿಸಿದ್ದು ಹೀಗೆ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version