Site icon Vistara News

Rama Mandir : ರಾಮ ನಗರದಲ್ಲಿ ರಾಮ ಮಂದಿರ ಕಟ್ಟಿಯೇ ಸಿದ್ಧ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ

Rama mandir will be built in Ramanagar says Bommai

#image_title

ಹಾವೇರಿ (ಶಿಗ್ಗಾವಿ): ರಾಮನಗರದ ರಾಮ ದೇವರ ಬೆಟ್ಟದಲ್ಲಿ ರಾಮ ಮಂದಿರ (Rama Mandir) ನಿರ್ಮಾಣ ಆಗೇ ಆಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಸೋಮವಾರ ಶಿಗ್ಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಮುಖ್ಯಮಂತ್ರಿ ಬೊಮ್ಮಾಯಿಯವರಯ ಶಿಗ್ಗಾಂವಿಯಲ್ಲಿ ನಿರ್ಮಾಣವಾಗುತ್ತಿರುವ ಪಂಚಮಸಾಲಿ ಭವನದ ಕಾಮಗಾರಿಯ ಪ್ರಗತಿಪರಿಶೀಲನೆ ನಡೆಸಿದರು.

ʻʻರಾಮದೇವರ ಬೆಟ್ಟ ಐತಿಹಾಸಿಕವಾದುದು. ಹೊಸ ರಾಮಮಂದಿರ ನಿರ್ಮಾಣ ಮಾಡಬೇಕೆಂದು ಹಲವಾರು ಜನರ ಇಚ್ಛೆಯಾಗಿತ್ತು. ನನ್ನ ಪ್ರಕಾರ ಯಾರೂ ಇದಕ್ಕೆ ವಿರೋಧ ಮಾಡುವುದಿಲ್ಲ. ವಿರೋಧ ಮಾಡುವವರು ವಿರೋಧಿಸಲಿ. ನನ್ನ ತಕರಾರಿಲ್ಲʼʼ ಎಂದರು.

ರಾಮನಗರದಲ್ಲಿ ರಾಮ ಮಂದಿರ ಕಟ್ಟುವ ಬಗ್ಗೆ ಬಜೆಟ್‌ನಲ್ಲೇ ಸಿಎಂ ಬೊಮ್ಮಾಯಿ ಅವರು ಪ್ರಸ್ತಾಪಿಸಿದ್ದರು. ಇದರ ಬಗ್ಗೆ ಕಟಕಿಯಾಡಿದ ಕಾಂಗ್ರೆಸ್‌ ನಾಯಕ ಡಿ.ಕೆ. ಶಿವಕುಮಾರ್‌ ಅವರು, ರಾಮ ಮಂದಿರವಾದರೂ ಕಟ್ಟಲಿ, ಬೊಮ್ಮಾಯಿ ಮಂದಿರವಾದರೂ ಕಟ್ಟಲಿ, ಅಶ್ವತ್ಥನಾರಾಯಣ ಮಂದಿರವಾದರೂ ಕಟ್ಟಲಿ, ಅದಕ್ಕಿಂತ ಮೊದಲು ರಾಮ ನಗರದಲ್ಲೊಂದು ಬಿಜೆಪಿ ಕಚೇರಿ ಕಟ್ಟಲಿ ಎಂದು ಲೇವಡಿ ಮಾಡಿದ್ದರು. ಅದರ ನಡುವೆ, ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಅವರು, ಬಜೆಟ್‌ನಲ್ಲಿ ಸರ್ಕಾರ ರಾಮ ಮಂದಿರ ಕಟ್ಟುತ್ತೇವೆ ಎಂದು ಹೇಳಿದ್ದರೂ ಕಟ್ಟಬೇಕಾದವನು ನಾನು ತಾನೇ ಎಂದು ವ್ಯಂಗ್ಯವಾಡಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರ ಹೇಳಿಕೆ ಮಹತ್ವ ಪಡೆದಿದೆ.

ಮಾತಿಗೆ ತಪ್ಪಿದ ಮಗ

ಬಜೆಟ್‌ ಮಂಡನೆಯ ದಿನ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ನ ಇದರ ಸದಸ್ಯರು ಕಿವಿಗೆ ಹೂವಿಟ್ಟುಕೊಂಡು ಬಂದಿದ್ದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ʻʻಕಾಂಗ್ರೆಸ್ ಅವರು ಇಷ್ಟು ದಿನ ಜನರ ಕಿವಿಗೆ ಹೂವಿಟ್ಟಿದ್ದರು. ಸಿದ್ದರಾಮಯ್ಯ ಅವರು ಮಾತಿಗೆ ತಪ್ಪಿದ ಮಗ. ಬಜೆಟ್ ನಲ್ಲಿ ಹೇಳಿದ್ದ ಯಾವುದನ್ನೂ ಅನುಷ್ಠಾನ ಮಾಡಿಲ್ಲ. ಮೊದಲು 10 ಕೆಜಿ ಅಕ್ಕಿ ಕೊಡುತ್ತೇವೆ ಎಂದರು. ಆಮೇಲೆ ಅದನ್ನು 4 ಕೆಜಿಗೆ ಇಳಿಸಿದರು. ಚುನಾವಣೆ ಸಮಯದಲ್ಲಿ 7 ಕೆಜಿಗೆ ಏರಿಸಿದರು. ಹೀಗೆ ಜನರನ್ನು ಯಾಮಾರಿಸಿದ್ದಾರೆ. ಅವರಿಗೆ ಜನ ಶಾಶ್ವತವಾಗಿ ಹೂವಿಡುವ ಕೆಲಸವಾಗುತ್ತದೆ” ಎಂದರು.

ಇದನ್ನೂ ಓದಿ : Siddaramaiah: ಮಗುವಿಗೆ ತಮ್ಮ ಹೆಸರನ್ನೇ ನಾಮಕರಣ ಮಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

Exit mobile version