ಬೆಂಗಳೂರು: ಯಾಜಿ ಪ್ರಕಾಶನದಿಂದ ಬೆಂಗಳೂರಿನ ಗಿರಿನಗರದ ಸಂಸ್ಕೃತ ಭಾರತ ಅಕ್ಷರಂನಲ್ಲಿ ಇದೇ ಆಗಸ್ಟ್ 4ರಂದು ಭಾನುವಾರ ಬೆಳಗ್ಗೆ 10 ಗಂಟೆಗೆ “ರಣಧುರಂಧರ” (ಛತ್ರಪತಿ ಶಿವಾಜಿ ಮಹಾರಾಜರ ಹತ್ತು ನಿರ್ಣಾಯಕ ಯುದ್ಧಗಳು ಮತ್ತು ಅವರ ಕಟ್ಟಕಡೆಯ ಯುದ್ಧ- ಒಂದು ವಿಶ್ಲೇಷಣೆ) ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ (Book Release) ಏರ್ಪಡಿಸಲಾಗಿದೆ.
ಇದನ್ನೂ ಓದಿ: Pralhad Joshi: ಪ್ರಸಕ್ತ ಸಕ್ಕರೆ ಋತುವಿನಲ್ಲಿ 1 ಲಕ್ಷ ಕೋಟಿ ರೂ. ರೈತರ ಬಾಕಿ ಪಾವತಿ
ಹೊಸಪೇಟೆಯ ಯಾಜಿ ಪ್ರಕಾಶನದ ಪ್ರಕಾಶಕಿ ಸವಿತಾ ಯಾಜಿ ಹಾಗೂ ಲೇಖಕ ಗುರುಪ್ರಸಾದ್ ಭಟ್ ಅವರ “ರಣಧುರಂಧರ” ಗ್ರಂಥದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂಸದ ತೇಜಸ್ವಿ ಸೂರ್ಯ ಪಾಲ್ಗೊಳ್ಳುವರು. ನವದೆಹಲಿಯ ಸಂಸ್ಕೃತ ಭಾರತಿ ಅಖಿಲ ಭಾರತ ಸಂಘಟನ ಮಂತ್ರಿ ದಿನೇಶ ಕಾಮತ್ ಅಧ್ಯಕ್ಷತೆ ವಹಿಸುವರು. ಲೇಖಕ ಸತ್ಯೇಶ್ ಬೆಳ್ಳೂರ್ ಪುಸ್ತಕ ಪರಿಚಯಿಸುವರು.
ಇದನ್ನೂ ಓದಿ: KSET 2024: ಕೆಸೆಟ್ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಆ.22 ಕೊನೆ ದಿನ; ವೇಳಾಪಟ್ಟಿ ಹೀಗಿದೆ
ಪೂರ್ಣಪ್ರಮತಿ ಶಾಲೆಯ ಮಕ್ಕಳಿಂದ “ಮಹಾನ್ ರಾಜಾ ಶಿವಾಜಿ” ಕುರಿತಾಗಿ ಕಿರು ನಾಟಕ ಏರ್ಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.