Site icon Vistara News

Reels Accident : ಸಾಯೋ ಮುಂಚೆ ಸ್ಟ್ಯಾಚು ಆಗೋ ಆಸೆ; ಅಪಾಯಕಾರಿ ರೀಲ್ಸ್‌ ಮಾಡಿದವನ ಸ್ಥಿತಿ ಗಂಭೀರ

Reel with bike Stunt

ಧಾರವಾಡ: ಸೋಶಿಯಲ್ ಮೀಡಿಯಾ (Social media) ಹುಚ್ಚು ಸಾಕಷ್ಟು ಜನರ ಜೀವನಕ್ಕೆ ಮಾರಕವಾಗಿದೆ. ಈ ನಡುವೆ ರೀಲ್ಸ್ ಮಾಡಲು (bike Stunt) ಹೋಗಿ ರಿಯಲ್ ಆಗಿ ಜೀವಕ್ಕೆ ಕುತ್ತು ತಂದುಕೊಂಡಿರುವ (Reels Accident) ಘಟನೆಯೊಂದು ಧಾರವಾಡ ಜಿಲ್ಲೆಯ ಅಣ್ಣೀಗೆರಿ ರಸ್ತೆಯಲ್ಲಿ ನಡೆದಿದೆ.

ರೀಲ್ಸ್ ಮಾಡಲು ಬೈಕ್‌ನಲ್ಲಿ ಸ್ಟಂಟ್‌ ಮಾಡಲು ಹೋದ ಯುವಕ ಬೈಕ್‌ನಿಂದ ಎಗರಿ ರಸ್ತೆಗೆ ಬಿದ್ದಿದ್ದಾನೆ. ಗಂಭೀರ ಗಾಯಗೊಂಡಿದ್ದ ಯುವಕನನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಯುವಕ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.

ಗಾಯಾಳು ಗದಗ ಜಿಲ್ಲೆಯ ನರಗುಂದ ಪಟ್ಟಣದ ನಿವಾಸಿ ಸಮೀರ್ ಎಂದು ತಿಳಿದು ಬಂದಿದೆ. ಧಾರವಾಡ ಜಿಲ್ಲೆಯ ಅಣ್ಣಿಗೇರಿ ರಸ್ತೆಯಲ್ಲಿ ರೀಲ್ಸ್ ಮಾಡುತ್ತಿದ್ದ ಸಮೀರ್‌ ಎರಡು ಕೈಗಳನ್ನು ಮೇಲಕ್ಕೆ ಎತ್ತಿ, ಬೈಕ್ ಮೇಲೆ ಎದ್ದು ನಿಂತು ರೀಲ್ಸ್ ಮಾಡುತ್ತಿದ್ದ. ಈ ವೇಳೆ ಕಂಟ್ರೋಲ್‌ ತಪ್ಪಿ ಆಯತಪ್ಪಿ ಬಿದ್ದಿದ್ದಾನೆ. ಬೈಕ್‌ ಪೂರ್ತಿ ಜಖಂಗೊಂಡಿದ್ದರೆ, ಸಮೀರ್‌ ಸೊಂಟು ಮುರಿದುಕೊಂಡಿದ್ದಾನೆ.

ಜಖಂಗೊಂಡಿರುವ ಬೈಕ್‌

ಸದ್ಯ, ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿರುವ ಸಮೀರ್‌ಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version