Site icon Vistara News

Reliance Foundation: ವಯನಾಡಿನ ಭೂಕುಸಿತ ಸಂತ್ರಸ್ತರಿಗೆ ರಿಲಯನ್ಸ್ ಫೌಂಡೇಷನ್ ನೆರವು

Reliance Foundation

ವಯನಾಡ್: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂ ಕುಸಿತದಿಂದ ಸಂತ್ರಸ್ತರಾದವರಿಗೆ ಸಹಾಯ ಮಾಡಲು ರಿಲಯನ್ಸ್ ಫೌಂಡೇಷನ್ (Reliance Foundation) ಮುಂದಾಗಿದೆ. ದುರಂತವನ್ನು ಎದುರಿಸುತ್ತಿರುವ ಜನರಿಗೆ ದೀರ್ಘಾವಧಿಯ ಪರಿಹಾರವನ್ನು ಒದಗಿಸುವುದಕ್ಕೆ ಸ್ಥಳೀಯ ಆಡಳಿತದ ಸಹಯೋಗದೊಂದಿಗೆ ರಿಲಯನ್ಸ್ ಫೌಂಡೇಷನ್ ಯೋಜನೆಯನ್ನು ಮಾಡಿದೆ. ಫೌಂಡೇಷನ್ ನಿಂದ ಸಂತ್ರಸ್ತರಿಗೆ ತಕ್ಷಣದ ಪರಿಹಾರವಾಗಿ ಆಹಾರ ಪದಾರ್ಥಗಳು, ಒಣಹಣ್ಣುಗಳು, ಹಾಲು, ಪಡಿತರ, ಅಡುಗೆ ಪಾತ್ರೆಗಳು, ಕುಡಿಯುವ ನೀರು, ಮೂಲಭೂತ ನೈರ್ಮಲ್ಯ ವಸ್ತುಗಳು, ಟೆಂಟ್‌ಗಳು, ಹಾಸಿಗೆಗಳು, ಸೋಲಾರ್ ಚಾಲಿತ ಸಾಧನಗಳು ಮತ್ತು ಟಾರ್ಚ್‌ಗಳಂತಹ ವಸ್ತುಗಳನ್ನು ಒದಗಿಸುತ್ತಿದೆ.

ಸಂತ್ರಸ್ತ ಕುಟುಂಬಗಳಿಗೆ ಬೀಜಗಳು, ಮೇವು, ಉಪಕರಣಗಳು ಮತ್ತು ವೃತ್ತಿಪರ ತರಬೇತಿಯನ್ನು ನೀಡಲಾಗುವುದು, ಇದರಿಂದ ಅವರ ಜೀವನವು ಮತ್ತೆ ಹಳಿಗೆ ಮರಳುತ್ತದೆ. ಮಕ್ಕಳ ಶಿಕ್ಷಣಕ್ಕೆ ಯಾವುದೇ ಅಡೆತಡೆಗಳು ಆಗದಿರುವಂತೆ ರಿಲಯನ್ಸ್ ಫೌಂಡೇಷನ್‌ನಿಂದ ಪುಸ್ತಕಗಳು ಮತ್ತು ಕ್ರೀಡಾ ಸಾಮಗ್ರಿಗಳನ್ನು ಒಳಗೊಂಡಂತೆ ಶಿಕ್ಷಣಕ್ಕೆ ಬೇಕಾದ ಬೆಂಬಲವನ್ನು ನೀಡುತ್ತದೆ.

ಇದನ್ನೂ ಓದಿ: Fortis Hospital: ಅಪಘಾತದಲ್ಲಿ ತಲೆಗೆ ತೀವ್ರ ಏಟು; ಕ್ಲಿಷ್ಟ ಶಸ್ತ್ರಚಿಕಿತ್ಸೆಯಿಂದ ಯುವಕನಿಗೆ ಜೀವ ದಾನ

ರಕ್ಷಣಾ ಕಾರ್ಯಕರ್ತರು ಮತ್ತು ವಿಪತ್ತು ನಿರ್ವಹಣಾ ತಂಡಗಳ ಸುಗಮ ಕಾರ್ಯನಿರ್ವಹಣೆಗಾಗಿ ರಿಲಯನ್ಸ್ ಜಿಯೋ ವಿಶೇಷ ಟವರ್‌ಗಳನ್ನು ಸ್ಥಾಪಿಸಿದೆ. ಇದರಿಂದ ಸಂವಹನವನ್ನು ಸುಧಾರಿಸಬಹುದು ಮತ್ತು ವಿಪತ್ತು ನಿರ್ವಹಣೆಯನ್ನು ಸುವ್ಯವಸ್ಥಿತಗೊಳಿಸಬಹುದು. ಮಾನಸಿಕ-ಸಾಮಾಜಿಕ ಆಘಾತದಿಂದ ಪೀಡಿತ ವ್ಯಕ್ತಿಗಳಿಗೆ ರಿಲಯನ್ಸ್ ಫೌಂಡೇಷನ್ ತಜ್ಞರ ಸಹಾಯವನ್ನು ಸಹ ಒದಗಿಸುತ್ತಿದೆ.

ಕೇರಳದಲ್ಲಿ ನಡೆದ ಈ ದುರಂತ ಘಟನೆಯ ಕುರಿತು ರಿಲಯನ್ಸ್ ಫೌಂಡೇಷನ್ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಅಂಬಾನಿ ಮಾತನಾಡಿ, “ವಯನಾಡಿನ ಜನರ ನೋವು ಮತ್ತು ಭೂಕುಸಿತದಿಂದ ಉಂಟಾದ ಅಪಾರ ನಷ್ಟದಿಂದ ನಾವೂ ದುಃಖಿತರಾಗಿದ್ದೇವೆ. ಈ ದುಃಖದ ಸಮಯದಲ್ಲಿ, ಘಟನೆಯಿಂದ ಬಾಧಿತರಾದ ಪ್ರತಿ ವ್ಯಕ್ತಿ ಮತ್ತು ಕುಟುಂಬದೊಂದಿಗೆ ನಾವಿದ್ದೇವೆ.” ಎಂದು ತಿಳಿಸಿರುವ ಅವರು, ನಮ್ಮ ರಿಲಯನ್ಸ್ ಫೌಂಡೇಷನ್ ತಂಡಗಳು ಹಗಲು- ರಾತ್ರಿ ಕೆಲಸ ಮಾಡುತ್ತಿವೆ. ಈ ಕಷ್ಟದ ಸಮಯದಲ್ಲಿ ನಾವು ಕೇರಳದ ಜನರೊಂದಿಗೆ ನಿಲ್ಲುತ್ತೇವೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: DCET 2024: ಡಿಸಿಇಟಿ 2ನೇ ಸುತ್ತಿನ ಸೀಟು ಹಂಚಿಕೆ ಸದ್ಯಕ್ಕೆ ಸ್ಥಗಿತ; ಚಾಯ್ಸ್ ಆಯ್ಕೆಗೆ ಆ.8ರವರೆಗೆ ಅವಕಾಶ

ಪರಿಹಾರ ಸಾಮಗ್ರಿಗಳೊಂದಿಗೆ ಸಮಸ್ಯೆ ಆದ ಸ್ಥಳದಲ್ಲಿ ರಿಲಯನ್ಸ್ ಫೌಂಡೇಷನ್ ತಂಡಗಳಿವೆ. ರಾಜ್ಯದ ಅಧಿಕಾರಿಗಳು ಮತ್ತು ಸ್ಥಳೀಯ ಆಡಳಿತದೊಂದಿಗೆ ನಿರಂತರ ಚರ್ಚೆ ನಡೆಸಲಾಗುತ್ತಿದೆ. ಪ್ರತಿಯೊಂದು ಕಾರ್ಯವನ್ನು ರಾಜ್ಯ ಸರ್ಕಾರ ಮತ್ತು ಇತರ ವಿಪತ್ತು ನಿರ್ವಹಣಾ ಸಂಸ್ಥೆಗಳ ಸಮನ್ವಯದಲ್ಲಿ ಕಾರ್ಯಗತಗೊಳಿಸಲಾಗುತ್ತಿದೆ. ಇದರಿಂದ ಸಹಾಯವು ಸಮಯಕ್ಕೆ ತಲುಪುತ್ತದೆ. ರಿಲಯನ್ಸ್ ಫೌಂಡೇಷನ್ ದೀರ್ಘಾವಧಿಯಲ್ಲಿ ವಯನಾಡಿನ ಜನರನ್ನು ಬೆಂಬಲಿಸಲು ಬದ್ಧವಾಗಿದೆ ಎಂದು ತಿಳಿಸಿದೆ.

Exit mobile version