Site icon Vistara News

Religious Conversion: ಶಿವಮೊಗ್ಗದಲ್ಲಿ ಆಮಿಷವೊಡ್ಡಿ ಮತಾಂತರಕ್ಕೆ ಯತ್ನ; ಪಾದ್ರಿ ಸೇರಿ ಹಲವರು ಪೊಲೀಸ್‌ ವಶಕ್ಕೆ

Attempt to convert in Shimoga,Police detain several people, including a priest

Attempt to convert in Shimoga,Police detain several people, including a priest

ಶಿವಮೊಗ್ಗ: ಇಲ್ಲಿನ ತುಂಗಾ ನಗರ ಪೊಲೀಸ್‌ (Tunganagar police) ಠಾಣಾ ವ್ಯಾಪ್ತಿಯಲ್ಲಿ ಪ್ರಾರ್ಥನೆ ಮಾಡುತ್ತಿದ್ದ ಮನೆಯೊಂದಕ್ಕೆ ಬಜರಂಗದಳ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ. ಗೋಪಿಶೆಟ್ಟಿಕೊಪ್ಪದಲ್ಲಿರುವ ಮನೆಯೊಂದರಲ್ಲಿ ಹಿಂದುಗಳನ್ನು ಕರೆಸಿಕೊಂಡು ಪ್ರಾರ್ಥನೆ ನಡೆಸಲಾಗುತ್ತಿತ್ತು ಎಂಬ ಆರೋಪ ಕೇಳಿ ಬಂದಿದೆ.

ಪ್ರಾರ್ಥನಾ ಸ್ಥಳಕ್ಕೆ ದಾಳಿ ಮಾಡಿದ ಬಜರಂಗದಳ

ಪಾದ್ರಿ ಮಣಿಕಂಠ ಮತ್ತವರ ತಂಡದವರು ಪ್ರತಿ ಭಾನುವಾರ ಸಾಮೂಹಿಕ ಪ್ರಾರ್ಥನೆಯನ್ನು ಆಯೋಜನೆ ಮಾಡುತ್ತಿದ್ದರು. ಹಿಂದು ಧರ್ಮೀಯರಿಗೆ ಆಮಿಷವೊಡ್ಡಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹಿಂದುಗಳಿಗೆ ಬೈಬಲ್ ನೀಡಿ ಪ್ರಾರ್ಥನೆ ಮಾಡಿಸಲಾಗುತ್ತಿತ್ತು. ಹೀಗಾಗಿ ಖಚಿತ ಮಾಹಿತಿ ಮೇರೆಗೆ ಬಜರಂಗದಳದವರು ದಾಳಿ ಮಾಡಿ ಆಕ್ರೋಶವನ್ನು ಹೊರಹಾಕಿದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತುಂಗಾ ನಗರ ಪೊಲೀಸರು ಪಾದ್ರಿ ಮಣಿಕಂಠ ಮತ್ತು ಸಂಗಡಿಗರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮನೆಯೊಂದರಲ್ಲಿ ಹಿಂದುಗಳನ್ನು ಕರೆಸಿ ಸಾಮೂಹಿಕ ಪ್ರಾರ್ಥನೆ

ಇದನ್ನೂ ಓದಿ: Road Accident: ಟೋಲ್‌ ತಪ್ಪಿಸಲು ಹೋಗಿ ಬೈಕ್‌ಗೆ ಗುದ್ದಿದ ಕೆಎಸ್‌ಆರ್‌ಟಿಸಿ ಬಸ್‌; ಒಬ್ಬ ಸಾವು, ಮತ್ತೊಬ್ಬ ಗಂಭೀರ

ರಾಜ್ಯದ ವಿವಿಧೆಡೆ ಮತಾಂತರದ ಕೂಗು

ಈ ಹಿಂದೆ ಕಾರವಾರದಲ್ಲೂ ರೋಗ ಗುಣಪಡಿಸುವ ನೆಪದಲ್ಲಿ ಹಿಂದು ಜನರನ್ನು ಮತಾಂತರ ಮಾಡಲು ಯತ್ನಿಸಿದ್ದು ಕಂಡು ಬಂದಿತ್ತು. ರಾಮನಗರದಲ್ಲಿ ಅನಧಿಕೃತ ಪ್ರಾರ್ಥನಾಲಯ ನಿರ್ಮಿಸಿ ಮತಾಂತರಕ್ಕೆ ಯತ್ನಿಸಿದ್ದಕ್ಕೆ ಹಿಂದು ಕಾರ್ಯಕರ್ತರು ಮುತ್ತಿಗೆ ಹಾಕಿದ್ದರು. ಕೊಪ್ಪಳದಲ್ಲಿ ಬಲವಂತದ ಮತಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ವಿರುದ್ಧ ದೂರು ಕೂಡ ದಾಖಲಾಗಿತ್ತು. ತುಮಕೂರಿನಲ್ಲಿ ಆಮಿಷ ಒಡ್ಡಿ ಮತಾಂತರ ಆರೋಪ ಹಿನ್ನೆಲೆ ಮೂವರು ಕ್ರೈಸ್ತ ಧರ್ಮದ ಪ್ರಚಾರಕರನ್ನು ಬಂಧಿಸಲಾಗಿತ್ತು. ಈಗ ಶಿವಮೊಗ್ಗದಲ್ಲಿ ಈ ಪ್ರಕರಣ ಕಂಡುಬಂದಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್‌ ಮಾಡಿ

Exit mobile version