Site icon Vistara News

Pralhad joshi: ನವೀಕರಿಸಬಹುದಾದ ಇಂಧನ ಉತ್ಪಾದನೆ; ವಿಶ್ವದಲ್ಲೇ 4ನೇ ಸ್ಥಾನದಲ್ಲಿ ಭಾರತ

renewable energy production India 4th place in the world says Minister Pralhad Joshi

ನವದೆಹಲಿ: ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲೇ 4ನೇ ಸ್ಥಾನದಲ್ಲಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ಸಚಿವ ಪ್ರಲ್ಹಾದ್‌ ಜೋಶಿ (Pralhad joshi) ತಿಳಿಸಿದರು. ನವದೆಹಲಿಯ ತಮ್ಮ ನಿವಾಸದಲ್ಲಿ ರಾಜಸ್ಥಾನ ಸಿಎಂ ಭೇಟಿ ವೇಳೆ ಮಾತನಾಡಿ, ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ ಪ್ರಗತಿ ಸಾಧಿಸುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ: Assembly session: ಪರಿಷತ್‌ನಲ್ಲೂ ಸಿನಿ, ಸಾಂಸ್ಕೃತಿಕ ಕಾರ್ಯಕರ್ತರ ಮಸೂದೆ ಪಾಸ್; ಹೆಚ್ಚಲಿದೆ ಸಿನಿಮಾ ಟಿಕೆಟ್ ದರ, ಒಟಿಟಿ ಶುಲ್ಕ!

ಪ್ರಧಾನಿ ನರೇಂದ್ರ ಮೋದಿ ಅವರ ಆಕಾಂಕ್ಷೆಯಂತೆ 2030ರ ವೇಳೆಗೆ ನವೀಕರಿಸಬಹುದಾದ ಇಂಧನದ ಮೂಲಕ 500GW ಸಾಮರ್ಥ್ಯ ಸಾಧಿಸುವ ಗುರಿಯಿದ್ದು, ಆ ನಿಟ್ಟಿನಲ್ಲಿ ಯೋಜನೆ ಹಾಕಿಕೊಳ್ಳಲಾಗುತ್ತಿದೆ ಎಂದರು.

ಇಂಧನ ಭದ್ರತೆಗೆ ಬದ್ಧ

ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ರಾಜಸ್ಥಾನ ಸೇರಿದಂತೆ ಇಡೀ ದೇಶಕ್ಕೆ ಇಂಧನ ಭದ್ರತೆ ಖಾತರಿಪಡಿಸಲು ಬದ್ಧವಾಗಿದೆ ಎಂದು ತಿಳಿಸಿದರು. ರಾಜಸ್ಥಾನ ಸಹ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಪ್ರಮುಖ ಅಭಿವೃದ್ಧಿ ಸಾಧಿಸುತ್ತಿದ್ದು, PM ಕುಸುಮ ಮತ್ತು PM ಸೂರ್ಯಘರ್ ಯೋಜನೆಗಳ ಅಡಿಯಲ್ಲಿ ರಾಜಸ್ಥಾನದಲ್ಲಿ ಸೌರಶಕ್ತಿ ಯೋಜನೆಗಳ ಪ್ರಗತಿ ಬಗ್ಗೆ ರಾಜಸ್ಥಾನ ಸಿಎಂ ಭಜನ್ ಲಾಲ್ ಅವರೊಂದಿಗೆ ಸಚಿವ ಜೋಶಿ ಚರ್ಚಿಸಿದರಲ್ಲದೆ, ಕೇಂದ್ರ ಸರ್ಕಾರದಿಂದ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.

ಈ ಹಿಂದೆ ಗಣಿ ಮತ್ತು ಖನಿಜ ಸಚಿವರಾಗಿದ್ದಾಗ ಪ್ರಮುಖ ನಿರ್ಣಾಯಕ ಖನಿಜ ನೀತಿ ಮತ್ತು ಸುಧಾರಣೆ ಮಾಡಲಾಗಿದೆ. ಅಲ್ಲದೇ, ಈ ಬಜೆಟ್‌ನಲ್ಲಿ, ವಿದೇಶದಿಂದ ನಿರ್ಣಾಯಕ ಖನಿಜಗಳನ್ನು ಪಡೆಯಲು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವಕಾಶ ಕಲ್ಪಿಸಿದ್ದಾರೆ. ಇದು ಇಂಧನ ಸಂಗ್ರಹಕ್ಕೆ ಹೆಚ್ಚಿನ ಉತ್ತೇಜನ ನೀಡಲಿದೆ ಎಂದು ಸಚಿವ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: SkyDeck: ಕೃಷಿ ಮತ್ತಿತರ ಕ್ಷೇತ್ರಗಳಿಗೆ ನೆರವಾಗುವ ʼಸ್ಕೈಡೆಕ್ʼ ಪ್ಲಾಟ್‌ಫಾರ್ಮ್! ಏನಿದು?

ಆಹಾರೋತ್ಪನ್ನ ಬೆಲೆ ನಿಯಂತ್ರಣದಲ್ಲಿ

ವಿದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಆಹಾರೋತ್ಪನ್ನಗಳ ಬೆಲೆ ನಿಯಂತ್ರಣದಲ್ಲಿದೆ ಎಂದು ತಿಳಿಸಿದ ಅವರು, ಭಾರತ್ ಬೇಳೆಗಳು, ಭಾರತ್ ಅಕ್ಕಿ, ಭಾರತ್ ಹಿಟ್ಟು ಹೀಗೆ ಬಹುತೇಕ ಎಲ್ಲದರ ಬೆಲೆಗಳನ್ನು ಜಗತ್ತಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ನಿಯಂತ್ರಣದಲ್ಲಿಟ್ಟಿದ್ದೇವೆ ಎಂದು ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದರು.

Exit mobile version