Site icon Vistara News

Republic Day 2023: ಭಾರತವು ಬಲಿಷ್ಠ ಸಂವಿಧಾನವನ್ನು ಹೊಂದಿದೆ: ಪ್ರಸನ್ನನಾಥ ಸ್ವಾಮೀಜಿ

BGS School shivamogga rupublic day

ಶಿವಮೊಗ್ಗ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು ಎಂಬುದನ್ನು ತೋರಿಸಿಕೊಟ್ಟಂತಹ ಸಂವಿಧಾನ (Republic Day 2023) ನಮ್ಮ ದೇಶದ್ದು, ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಗುರುಪುರದಲ್ಲಿರುವ ಬಿಜಿಎಸ್ ಶಾಲಾ ಕಾಲೇಜಿನಲ್ಲಿ ನಡೆದ ೭೪ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಸ್ವಾತಂತ್ರ್ಯಾ ನಂತರ ಭಾರತದ ಪ್ರಜೆಗಳಾದ ನಾವು ಹೇಗೆ ಬದುಕಬೇಕು, ನಮ್ಮ ಆಡಳಿತ ವೈಖರಿ ಯಾವ ರೀತಿ ನಡೆಯಬೇಕು ಎಂಬುದನ್ನು ತೋರಿಸಿಕೊಡುವ ಸಲುವಾಗಿ ನಿಯಮಗಳನ್ನು ರೂಪಿಸಲಾಯಿತು. ಅದುವೇ ನಮ್ಮ ಸಂವಿಧಾನ ಎಂದರು.


ಈ ಸಂವಿಧಾನ ರಚಿಸಲು ಡಾ. ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಯಿತು. ಅವರು ನೀಡಿದಂತಹ ವರದಿಯ ಅನುಸಾರ ನಮ್ಮ ಸಂವಿಧಾನ ಜಾರಿಗೆ ಬಂದಿತು. ಅತ್ಯಂತ ಬಲಿಷ್ಠವಾದ ಮತ್ತು ಪ್ರಬುದ್ಧವಾದ ಸಂವಿಧಾನವನ್ನು ನಮ್ಮ ದೇಶ ಹೊಂದಿದೆ. ವಿಶ್ವದಲ್ಲಿಯೇ ಅತ್ಯಂತ ಉತ್ತಮವಾದ ಸಂವಿಧಾನವನ್ನು ಹೊಂದಿರುವ ದೇಶ ಭಾರತವಾಗಿದೆ ಎಂದರು.

ಇದನ್ನೂ ಓದಿ | Washington Sundar | ನಿಮ್ಮಿಷ್ಟದ ಬಿರಿಯಾನಿ ಸಿಗಲ್ಲ ಎಂದಾದರೆ ಹೋಟೆಲ್​ ಬದಲಿಸುತ್ತೀರಾ? ಸುಂದರ್ ಕೇಳಿದ್ದು ಯಾರಿಗೆ?

ಇದೇ ತಿಂಗಳು ನಾವು ಮತದಾರರ ದಿನಾಚರಣೆಯನ್ನು ಆಚರಿಸಿದ್ದೇವೆ, ನಮ್ಮ ಜನಪ್ರತಿನಿಧಿಯನ್ನು ಮತ್ತು ನಮ್ಮ ದೇಶವನ್ನು ಮುನ್ನಡೆಸುವಂತಹ ನಾಯಕರನ್ನು ಆರಿಸಿಕೊಳ್ಳುವಂತಹ ಅವಕಾಶ ಮತ್ತು ಹೊಣೆಗಾರಿಕೆ ನಮ್ಮ ಮೇಲೆಯೇ ಇದೆ. ದುರಂತವೆಂದರೆ ಮತದಾನದಲ್ಲಿ ಪಾಲ್ಗೊಳ್ಳದೇ ಇರುವುದು ನಮಗೆ ನಾವೇ ದ್ರೋಹ ಮಾಡಿಕೊಂಡಂತಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಮತವನ್ನು ಚಲಾಯಿಸುವ ಮೂಲಕ ಉತ್ತಮ ಜನನಾಯಕರನ್ನು ಆಯ್ಕೆ ಮಾಡಿ ದೇಶದ ಹಾಗೂ ರಾಜ್ಯದ ಭವಿಷ್ಯವನ್ನು ಭದ್ರಗೊಳಿಸುವಂತಹ ಗುರುತರ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದರು.

ಧ್ವಜಾರೋಹಣ ನೇರವೇರಿಸಿದ ನಿವೃತ್ತ ಪ್ರಾಧ್ಯಾಪಕ ಪ್ರೊ.ಗೌರಿಶಂಕರ್ ಮಾತನಾಡಿ, ಪ್ರತಿಯೊಂದು ಮಗುವಿನಲ್ಲಿಯೂ ಕೌಶಲ್ಯ ಮತ್ತು ಜ್ಞಾನ ಅಡಗಿರುತ್ತದೆ. ಇಂದು ವಿದ್ಯಾರ್ಥಿಗಳಾಗಿರುವ ನೀವು ಭವಿಷ್ಯದಲ್ಲಿ ಮಹಾತ್ಮ ಗಾಂಧಿ, ನೆಹರೂ, ಸುಭಾಷ್ ಚಂದ್ರಬೋಸ್, ಐನ್‌ಸ್ಟೀನ್ ಸೇರಿದಂತೆ ಮಹಾನ್ ವ್ಯಕ್ತಿಗಳಾಗಬಹುದಾಗಿದೆ ಎಂದರು.

ಪ್ರತಿಯೊಬ್ಬ ವಿದ್ಯಾರ್ಥಿಯೂ ನಿರಂತರ ಶ್ರಮವನ್ನು ನಡೆಸಿದ್ದೇ ಆದಲ್ಲಿ ನಿಮ್ಮ ಗುರಿಯನ್ನು ತಲುಪಬಹುದಾಗಿದೆ. ಇದರೊಂದಿಗೆ ಅದೃಷ್ಟವೂ ಬೇಕಾಗಿದೆ. ಇದರಲ್ಲಿ ಕೇವಲ ಒಂದನ್ನು ನಂಬಿ ಕೂರುವಂತಿಲ್ಲ. ನಿಮ್ಮಲ್ಲಿರುವ ಪ್ರತಿಭೆಯನ್ನು ಹೊರ ತೆಗೆಯುವಂತಹ ಕೆಲಸವನ್ನು ಪೋಷಕರು ಹಾಗೂ ಶಿಕ್ಷಕರು ಮಾಡಬೇಕಾಗಿದೆ ಎಂದರು.

ಇದನ್ನೂ ಓದಿ | Masaba Gupta: ಫ್ಯಾಮಿಲಿ ಗೆಟ್‌ ಟು ಗೆದರ್‌ನಲ್ಲಿ ಸಂಭ್ರಮಿಸಿದ ನವದಂಪತಿ ಮಸಾಬಾ-ಸತ್ಯದೀಪ್

ವೇದಿಕೆ ಭಯವನ್ನು ಬಿಟ್ಟರೆ ಪ್ರತಿಯೊಬ್ಬ ವಿದ್ಯಾರ್ಥಿಯೂ ಎಂತಹ ಸಮಾರಂಭವನ್ನು ಸಮರ್ಥವಾಗಿ ಎದುರಿಸುತ್ತೀರಿ ಎಂದು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ ಅವರು, ನಿಮ್ಮಲಿರುವ ಜ್ಞಾನವನ್ನು ಸದುಪಯೋಗಪಡಿಸಿಕೊಂಡು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ರಾಜ್ಯ ಹಾಗೂ ರಾಷ್ಟ್ರದ ಪ್ರಜೆಗಳಾಗಿ ಎಂದು ಹಾರೈಸಿದರು. ಸಮಾರಂಭದಲ್ಲಿ ಪ್ರಾಂಶುಪಾಲ ಎಸ್.ಎಚ್.ಸುರೇಶ್, ಉಪನ್ಯಾಸಕ ರಮೇಶ್, ಅಧ್ಯಾಪಕ ಹರೀಶ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು. ದೈಹಿಕ ಶಿಕ್ಷಕ ರಾ.ಹ.ತಿಮ್ಮೇನಹಳ್ಳಿ ಗಣರಾಜ್ಯೋತ್ಸವ ಕಾರ‍್ಯಕ್ರಮ ನಿರ್ವಹಿಸಿದರು.

Exit mobile version