Site icon Vistara News

Republic Day 2023 : ಹಿಂಸಾ ಪ್ರವೃತ್ತಿ ತೊಲಗಿಸುವುದು ಶಿಕ್ಷಣದಿಂದ ಸಾಧ್ಯ ಎಂದರು ಪ್ರೊ. ಬಿ.ಪಿ. ವೀರಭದ್ರಪ್ಪ

Kuvempu University Flag hoisting shivamogga

ಶಿವಮೊಗ್ಗ: ದೇಶದಲ್ಲಿ ಹೆಚ್ಚುತ್ತಿರುವ ಹಿಂಸಾ ಪ್ರವೃತ್ತಿಗಳನ್ನು ನಿಯಂತ್ರಿಸಲು (Republic Day 2023) ಎಲ್ಲರಿಗೂ ಉನ್ನತ ಶಿಕ್ಷಣ ನೀಡುವುದೇ ಪರಿಹಾರ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ಅಭಿಪ್ರಾಯಪಟ್ಟರು.

ಕುವೆಂಪು ವಿವಿಯ ಪರೀಕ್ಷಾಂಗ ಭವನದ ಮುಂಭಾಗದಲ್ಲಿ ಗಣರಾಜ್ಯೋತ್ಸವ ಆಚರಣೆ ಭಾಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ದೇಶಾದ್ಯಂತ ದಲಿತರು, ಅಲ್ಪಸಂಖ್ಯಾತರು ಮತ್ತು ಮಹಿಳೆಯರ ಮೇಲೆ ವಿವಿಧ ರೀತಿಯ ದೌರ್ಜನ್ಯ, ದೈಹಿಕವಾಗಿ ಪೀಡಿಸುವ ಅಹಿತಕರ ಘಟನೆಗಳು ಹೆಚ್ಚುತ್ತಿವೆ. ಇಂತಹ ಪ್ರವೃತ್ತಿಗಳನ್ನು ಕಡಿತಗೊಳಿಸಲು ಸಮಾಜದೊಳಗೆ ಉನ್ನತ ಶಿಕ್ಷಣವನ್ನು ಹೆಚ್ಚಿಸುವುದೇ ಪರಿಹಾರೋಪಾಯ ಎಂದರು.

ಕಸ್ತೂರಿ ರಂಗನ್ ವರದಿಯ ಪ್ರಕಾರ ದೇಶದ ಉನ್ನತ ಶಿಕ್ಷಣ ಪ್ರವೇಶಾತಿಯು ಶೇ. 26 ಇದೆ. ಇದನ್ನು ಶೇ. 50ಕ್ಕಿಂತ ಅಧಿಕಗೊಳಿಸಲು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಪ್ರಯತ್ನಿಸಲಿದೆ. ವಿದ್ಯಾರ್ಥಿಗಳು ಮತ್ತು ಯುವ ಜನಾಂಗವು ಹೆಚ್ಚು ಹೆಚ್ಚು ಉನ್ನತ ಶಿಕ್ಷಣ ಪಡೆದಲ್ಲಿ ಸಾಮಾಜಿಕ ಅಗತ್ಯಗಳು, ಉನ್ನತಿ, ಸಮಸ್ಯೆಗಳ ಕುರಿತು ಚಿಂತನಾ ಕ್ರಮ ರೂಢಿಸಿಕೊಂಡು ಪರಿಹಾರೋಪಾಯಗಳನ್ನು ಕಂಡುಹಿಡಿಯುವುದು ಸಾಧ್ಯವಿದೆ. ಶಿಕ್ಷಣಕ್ಕೆ ಜ್ಞಾನ, ಪ್ರೀತಿ, ಭ್ರಾತೃತ್ವ, ಮಾನವೀಯತೆ, ಸಹಬಾಳ್ವೆಗಳನ್ನು ಕಲಿಸುವ ಶಕ್ತಿಯಿದೆ. ಈ ನಿಟ್ಟಿನಲ್ಲಿ ಡಾ. ಅಂಬೇಡ್ಕರ್ ಅವರ ವ್ಯಾಪಕ ಓದು, ಶಿಕ್ಷಣಗಳು ಭಾರತಕ್ಕೆ ಬಲಿಷ್ಠವಾದ ಸಂವಿಧಾನ ನೀಡಿತು ಎಂದರು.

ಇದನ್ನೂ ಓದಿ | Mountains Losing Snow : ಕರಗಿ ನೀರಾಗುತ್ತಿವೆ ಹಿಮ ಪರ್ವತಗಳು! ಎಚ್ಚರಿಕೆ ನೀಡಿದ ವರದಿ

ಇಂದಿನ ಯುವ ಸಮೂಹ ಉನ್ನತ ಶಿಕ್ಷಣದ ಜೊತೆಗೆ ಸಾಹಿತ್ಯ ಓದು, ವೃತ್ತಿಪರ ಕೌಶಲ್ಯಗಳ ಕಲಿಕೆ, ಮೂಲಭೂತ ಕರ್ತವ್ಯಗಳ ಅರಿವಿನೊಂದಿಗೆ ತಮ್ಮ ತಮ್ಮ ಕ್ಷೇತ್ರದಲ್ಲಿ ಸಂವೇದನಾಶೀಲರಾಗಿ ಕಾರ್ಯನಿರ್ವಹಿಸಬೇಕು. ಇದು ಅಹಿಂಸಾ ಪ್ರವೃತ್ತಿ ಹೆಚ್ಚಿಸುತ್ತದೆ ಮತ್ತು ಮಾನವ ಅಭ್ಯುದಯಕ್ಕೆ ದುಡಿದಂತೆ ಆಗುತ್ತದೆ. ಇದುವೇ ಲಕ್ಷಾಂತರ ಹೋರಾಟಗಾರರು ಅಹಿಂಸಾ ಮಾರ್ಗದ ಮೂಲಕ ಪಡೆದ ಸ್ವಾತಂತ್ರ್ಯವನ್ನು ಗೌರವಿಸುವ ಪರಿಯಾಗಬೇಕು ಎಂದು ತಿಳಿಸಿದರು.

ಇದನ್ನೂ ಓದಿ | BBC Documentary on Modi: ಬಿಬಿಸಿಯ ಗುಜರಾತ್ ದಂಗೆ ಡಾಕ್ಯುಮೆಂಟರಿ ವಿವಾದ, ಮುಕ್ತ ಪತ್ರಿಕಾ ಸ್ವಾತಂತ್ರ್ಯಕ್ಕೆ ಬೆಂಬಲ ಎಂದ ಅಮೆರಿಕ!

ಈ ಸಂದರ್ಭದಲ್ಲಿ ವಿವಿಯ ಪರೀಕ್ಷಾಂಗ ಕುಲಸಚಿವ ಪ್ರೊ. ನವೀನ್ ಕುಮಾರ್ ಎಸ್.ಕೆ., ದೈಹಿಕ ಶಿಕ್ಷಣ ವಿಭಾಗದ ಡಾ. ಎನ್.ಡಿ. ವಿರೂಪಾಕ್ಷ ಮತ್ತು ವಿಭಾಗದ ವಿದ್ಯಾರ್ಥಿಗಳು, ವಿವಿಧ ವಿಭಾಗಗಳ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ, ಸಂಶೋಧನಾರ್ಥಿಗಳು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

ಇದನ್ನೂ ಓದಿ | Sunny Deol: ಒಂದೇ ದಿನ ರಿಲೀಸ್‌ ಆಗಲಿದೆ ಗದರ್‌ 2, ಅನಿಮಲ್‌ ಸಿನಿಮಾ : ಸನ್ನಿ ಡಿಯೋಲ್ ಪೋಸ್ಟರ್‌ ಔಟ್‌!

Exit mobile version