Site icon Vistara News

Republic Day 2023: ಯಲಹಂಕದ ಕೆವಿಆರ್‌ಡಬ್ಲ್ಯುಎಫ್ ಶಾಲೆಯಲ್ಲಿ ವಿಜೃಂಭಣೆಯ ಗಣರಾಜ್ಯ ದಿನಾಚರಣೆ

Republic Day 2023

ಬೆಂಗಳೂರು: ಯಲಹಂಕದ ರೈಲ್ವೆ ಗಾಲಿ ಕಾರ್ಖಾನೆಯ ಕೇಂದ್ರೀಯ ವಿದ್ಯಾಲಯದಲ್ಲಿ (ಕೆವಿಆರ್‌ಡಬ್ಲ್ಯುಎಫ್) ಗುರುವಾರ 74ನೇ ಗಣರಾಜ್ಯೋತ್ಸವವನ್ನು (Republic Day 2023) ವಿಜೃಂಭಣೆಯಿಂದ ಆಚರಿಸಲಾಯಿತು. ಮುಖ್ಯ ಅತಿಥಿಯಾದ ರೈಲ್ವೆ ಗಾಲಿ ಕಾರ್ಖಾನೆಯ(ಆರ್‌ಡಬ್ಲ್ಯುಎಫ್) ಪಿಸಿಪಿಓ ಹಾಗೂ ಕೆವಿಆರ್‌ಡಬ್ಲ್ಯುಎಫ್ ವಿಎಂಸಿ ಚೇರ್ಮನ್ ಸುವರ್ಣ ದೇಶಪಾಂಡೆ ದಾಸ್ ಅವರು ಧ್ವಜಾರೋಹಣ ಮಾಡಿದರು.

ಪ್ರಾಂಶುಪಾಲೆ ಡಾ.ಪುಷ್ಪರಾಣಿ ಯಾದವ್‌ ಅವರು ಸ್ವಾಗತ ಭಾಷಣ ಮಾಡಿದರು. ಪ್ರಾಥಮಿಕ ಮತ್ತು ಪ್ರೌಢ ಶಾಲೆ ವಿದ್ಯಾರ್ಥಿಗಳು ದೇಶ ಭಕ್ತಿ ಗೀತೆಗಳ ಗಾಯನ, ಭಾಷಣ, ಯೋಗ ಹಾಗೂ ನೃತ್ಯ ಪ್ರದರ್ಶನ ಮಾಡಿದರು. ತದನಂತರ ಕಳೆದ ವರ್ಷ ಅತಿ ಹೆಚ್ಚು ಅಂಕ ಪಡೆದಂತಹ 10ನೇ ಮತ್ತು 12ನೇ ತರಗತಿ ಮಕ್ಕಳಿಗೆ ಪ್ರಮಾಣ ಪತ್ರ ನೀಡಲಾಯಿತು.

ಕಾರ್ಯಕ್ರಮದ ಕೊನೆಯ ಹಂತದಲ್ಲಿ ಸುವರ್ಣ ದೇಶಪಾಂಡೆ ದಾಸ್ ಅವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಕ್ಕಳ ಬಗ್ಗೆ ಮಾತನಾಡಿ, ಮಕ್ಕಳಿಗೆಲ್ಲ ಸಿಹಿ ಹಂಚಿದರು. ನಂತರ ಎಲ್ಲಾ ಮಕ್ಕಳು, ಪೋಷಕರು ಮತ್ತು ಶಿಕ್ಷಕರು ಶಾಲೆ ಎದುರಲ್ಲೇ ಇರುವ ಆರ್‌ಡಬ್ಲ್ಯುಎಫ್ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ತೆರಳಿದರು. ಅಲ್ಲಿ ಮಕ್ಕಳು ಮಾಡಿದ ನೃತ್ಯ ಪ್ರದರ್ಶನ ನೋಡುಗರ ಗಮನ ಸೆಳೆಯಿತು.

ಇದನ್ನೂ ಓದಿ | Republic Day Tableau: ಕರ್ತವ್ಯ ಪಥದಲ್ಲಿ ಸ್ತಬ್ಧಚಿತ್ರಗಳ ಕಲರವ; ಇಲ್ಲಿವೆ ವರ್ಣರಂಜಿತ ಫೋಟೋಗಳು

Exit mobile version