Site icon Vistara News

Ripponpet News: ರೈತರ ಬದುಕಿಗೆ ಸಹಕಾರ ಸಂಘಗಳು ಆಸರೆ: ಶಾಸಕ ಹಾಲಪ್ಪ

MLA Halappa ripponpet

#image_title

ರಿಪ್ಪನ್‌ಪೇಟೆ: “ಸಹಕಾರ ಸಂಘಗಳು ನಾಡಿನ ರೈತರ ಬಾಳಿನಲ್ಲಿ ಮಂದಹಾಸ ಮೂಡಿಸಬಹುದು. ದೇಶದ ಬೆನ್ನೆಲುಬಾದ ರೈತರ ಬಾಳಿಗೆ ಈ ಸಹಕಾರ ಸಂಸ್ಥೆಗಳು (Co-operative societies ) ಆಸರೆಯಾಗಿವೆ” ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.

ಭೂಪಾಳಮ್ ಚಂದ್ರಶೇಖರಯ್ಯ ಸಭಾಂಗಣದಲ್ಲಿ ಭಾನುವಾರ (ಮಾ.19) ನಡೆದ ರಿಪ್ಪನ್‌ಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಂಘದ ಆಡಳಿತ ಸಂಕೀರ್ಣ ಹಾಗೂ ವಾಣಿಜ್ಯ ಗೋದಾಮುಗಳನ್ನು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಜತೆಗೂಡಿ ಉದ್ಘಾಟಿಸಿ ಮಾತನಾಡಿದರು.

ಇದನ್ನೂ ಓದಿ: Ramadan 2023 : ರಮ್ಜಾನ್ ಹಬ್ಬಕ್ಕೆ ದಿನಗಣನೆ: ಏನಿದರ ವಿಶೇಷತೆ? ಏಕಾಗಿ ಈ ಉಪವಾಸ?

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಸಹಕಾರ ಸಂಘಗಳ ಬಗ್ಗೆ ಹೆಚ್ಚು ಗಮನ ಹರಿಸಿದೆ. ನೌಕರರ ನಿಯತ್ತಿನಿಂದ ಸಹಕಾರ ಸಂಸ್ಥೆಯು ರೈತರ, ಸಾರ್ವಜನಿಕರ ಬದುಕಿಗೆ ಆಸರೆಯಾಗಿದೆ. ಮಲೆನಾಡಿನ ಜನರು ಅರಣ್ಯ ಇಲಾಖೆಯ ಕಾನೂನಿನ ಕಪಿ ಮುಷ್ಠಿಗೆ ಸಿಲುಕಿದ್ದು, ಇದಕ್ಕೆ ಸರ್ಕಾರಗಳು ಸಹ ಕಾರಣವಾಗಿದೆ. ರೈತರ ಸಂಕಷ್ಟಗಳು ಸಹ ಜಟಿಲವಾಗಿದೆ. ಈ ನಾಡಿನಲ್ಲಿ ಕಾಡುಗಳನ್ನು ಉಳಿಸಿ ಬೆಳೆಸಿದ ರೈತರು ಅನೇಕ ಕಾನೂನುಗಳಿಂದ ಸಂಕಷ್ಟದಲ್ಲಿದ್ದಾರೆ. ಇವೆಲ್ಲವೂ ಸಹಕಾರಿ ಕ್ಷೇತ್ರದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತವೆ” ಎಂದು ವಿಷಾದ ವ್ಯಕ್ತಪಡಿಸಿದರು.

ಈ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಜಾನಪದ ಕಲಾವಿದರು ಹಾಗೂ ಸಹಕಾರಿ ಕ್ಷೇತ್ರದ ಗಣ್ಯರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಮೊದಲಿಗೆ ಪ್ರಾ,ಕೃ,ಪ,ಸ,ನೀ ದ ಉಪಾಧ್ಯಕ್ಷ ಎನ್. ಪಿ .ರಾಜು ಸ್ವಾಗತಿಸಿದರು. ಬ್ಯಾಂಕಿನ ಅಧ್ಯಕ್ಷ ಎಂ.ಎಂ. ಪರಮೇಶ್ ಪ್ರಾಸ್ತವಿಕ ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ. ಮಂಜುನಾಥ್ ಆಶಯ ನುಡಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ, ಸಹಕಾರಿ ಧುರೀಣ ಆರ್.ಎಂ. ಮಂಜುನಾಥ್ ಗೌಡ, ಗ್ರಾ.ಪಂ. ಉಪಾಧ್ಯಕ್ಷೆ ಮಹಾಲಕ್ಮ್ಷೀ, ಜಿಲ್ಲಾ ಡಿಸಿಸಿ ಬ್ಯಾಂಕ್‌ನ ಉಪಾಧ್ಯಕ್ಷ ಷಡಕ್ಷರಿ, ನಿರ್ದೇಶಕ ಸುದೀರ್, ಜಿಲ್ಲಾ ಸಹಕಾರಿ ಯೂನಿಯನ್‌ನ ಸುರೇಶ್ ವಾಟಗೋಡು, ನಬಾರ್ಡ್ ಅಧಿಕಾರಿ ರವಿ, ಜನಪದ ಕಲಾವಿದ ಆಂಜನೇಯ ಜೋಗಿ ಇನ್ನಿತರರಿದ್ದರು.

ಇದನ್ನೂ ಓದಿ: PM Modi status : ವಾಟ್ಸ್ ಆ್ಯಪ್ ಸ್ಟೇಟಸ್‌ನಲ್ಲಿ ಮೋದಿ ಫೋಟೊ ಹಾಕಿದ್ದ ಬಿಜೆಪಿ ಕಾರ್ಯಕರ್ತನ ಮನೆಗೆ ನುಗ್ಗಿ ಹಲ್ಲೆ

ಉದ್ಘಾಟನೆಗಾಗಿ 3 ಗಂಟೆ ಕಾದ ಸಭಿಕರು

ಶಾಸಕ ಹಾಗೂ ಎಂಎಸ್ಎಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಈ ಉದ್ಘಾಟನಾ ಕಾರ್ಯಕ್ರಮಕ್ಕೆ ಶಾಸಕ ಹರತಾಳು ಹಾಲಪ್ಪ ಅವರು ಮೂರು ಗಂಟೆ ತಡವಾಗಿ ಆಗಮಿಸಿದ್ದು, ಅವರ ಬರುವಿಕೆಗಾಗಿ ಸಭೆಯನ್ನು ಉದ್ಘಾಟನೆ ಮಾಡದೆ ಕಾರ್ಯಕ್ರಮವನ್ನು ಮುಂದುವರಿಸಿದ್ದು ಸಭಿಕರಲ್ಲಿ ಬೇಸರ ಮೂಡಿಸಿತ್ತು. ಹೊಸನಗರ ತಾಲೂಕಿನ ಬೇರೊಂದು ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿದ್ದುದೇ ವಿಳಂಬಕ್ಕೆ ಕಾರಣವಾಗಿತ್ತು.

Exit mobile version