Site icon Vistara News

Ripponpet News: ಶಿಕ್ಷಕರ ವಿರುದ್ಧ ಸುಳ್ಳು ದೂರು ವಿರೋಧಿಸಿ ವಿದ್ಯಾರ್ಥಿ, ಪೋಷಕರಿಂದ ಪ್ರತಿಭಟನೆ

students protest ripponpet

#image_title

ರಿಪ್ಪನ್‌ಪೇಟೆ: (Ripponpet News) ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಲ್ಲೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಶಿಕ್ಷಕರಿಬ್ಬರ ಮೇಲೆ ದುರುದ್ದೇಶದಿಂದ ಪೋಕ್ಸೊ ಕಾಯಿದೆಯ ಸುಳ್ಳು ಪ್ರಕರಣ ದಾಖಲಿಸಿರುವ ಕ್ರಮ ವಿರೋಧಿಸಿ ಶಾಲಾಭಿವೃದ್ಧಿ ಸಮಿತಿಯವರು, ಪೋಷಕರು ಹಾಗೂ ಸಾರ್ವಜನಿಕರು ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಸೇರಿ ಸೋಮವಾರ (ಫೆ.೬) ಧರಣಿ ನಡೆಸಿದರು.

ನಮ್ಮ ಶಿಕ್ಷಕರು ಬರುವವರೆಗೂ ನಾವು ತರಗತಿಗೆ ಹೋಗುವುದಿಲ್ಲ ಎಂದು ಹಠ ಹಿಡಿದು ವಿದ್ಯಾರ್ಥಿಗಳು, ತಮ್ಮ ಪೋಷಕರೊಂದಿಗೆ ರಾಜ್ಯ ಹೆದ್ದಾರಿಯ ಶಾಲಾ ಮುಂಭಾಗ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ತೀರ್ಥಹಳ್ಳಿ ಡಿವೈಎಸ್‌ಪಿ ಗಜಾನನ ವಾಮನ ಸುತಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.‌ ಆರ್.ಕೃಷ್ಣಮೂರ್ತಿ ಭೇಟಿ ನೀಡಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಬಳಿ ಅಹವಾಲು ಅಲಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗೆ ತಬ್ಬಿಬ್ಬಾದ ಅಧಿಕಾರಿಗಳು ಇಂತಹ ವಿಚಾರವನ್ನು ಮಕ್ಕಳ ಎದುರು ಹೇಳಲು ಸಾಧ್ಯವಿಲ್ಲ. ಪೋಷಕರೊಂದಿಗೆ ಸಮಾಲೋಚನೆ ನಡೆಸಿ ನ್ಯಾಯ ಕೊಡಿಸುವ ಭರವಸೆಯನ್ನು ನೀಡಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಸಮಾಧಾನಚಿತ್ತರಾಗಿ ಪೋಷಕರ ಹಾಗೂ ಅಧಿಕಾರಿಗಳ ಸಮಲೋಚನೆಗೆ ಸಹಮತ ವ್ಯಕ್ತಪಡಿಸಿದರು. ಪಾರದರ್ಶಕ ತನಿಖೆಯಿಂದ ಶಾಲಾ ಶಿಕ್ಷಕರನ್ನು ಮತ್ತು ವಿದ್ಯಾರ್ಥಿ ಸಮೂಹದೊಂದಿಗೆ ಪ್ರತ್ಯೇಕ ಮಾಹಿತಿ ಪಡೆದು ನ್ಯಾಯಾಲಯಕ್ಕೆ ವರದಿ ಸಲ್ಲಿಸುವುದಾಗಿ ಹೇಳಿ ಪ್ರತಿಭಟನಾಕಾರರ ಮನವೊಲಿಸುವಲ್ಲಿ ಯಶಸ್ವಿಯಾದರು.

ಇದನ್ನೂ ಓದಿ: Modi In Karnataka: ವಿದ್ಯುತ್‌ ವಾಹನ ಉತ್ಪಾದನೆಯಲ್ಲಿ ಕರ್ನಾಟಕ ನಂ.1 ಆಗಲಿದೆ: ಸಿಎಂ ಬಸವರಾಜ ಬೊಮ್ಮಾಯಿ

ಪ್ರತಿಭಟನೆ ನೇತೃತ್ವವನ್ನು ಎಸ್.ಡಿ.ಎಂ.ಸಿ.ಅಧ್ಯಕ್ಷ ಮಂಜುನಾಥ, ನಾಗಭೂಷಣ, ಗಣೇಶ್ ಬಿಲ್ಲೇಶ್ವರ, ಸತೀಶ್ ಎಸ್, ರಾಜು ಗರ್ತಿಕೆರೆ, ಅಭಿಷೇಕ, ಕಿರಣಕುಮಾರ್, ರಾಮಪ್ಪ, ಎಚ್.ಎನ್. ಗುರುರಾಜ ಭಂಡಾರಿ, ಸಚಿನ್, ಎನ್.ರಾಘವೇಂದ್ರ, ಸತೀಶ್ ಈರನಬೈಲು, ಕೆ.ವೈ.ಮಂಜುನಾಥ, ಕೆ.ಇ.ಗಣೇಶ್, ಕಿರಣ ಮತ್ತಿತರ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ನಂತರ ಹುಂಚ ನಾಡ ಕಚೇರಿಯವರೆಗೆ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗೆ ಉಪ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಿದರು. ಇದೇ ವೇಳೆ ತೀರ್ಥಹಳ್ಳಿ ಡಿವೈಎಸ್‌ಪಿ ಅವರಿಗೂ ಮನವಿ ಸಲ್ಲಿಸಲಾಯಿತು.

ಇದನ್ನೂ ಓದಿ: Modi In Karnataka: ರಾಗಿ ಮುದ್ದೆ, ರಾಗಿ ರೊಟ್ಟಿ ಸ್ವಾದಕ್ಕೆ ಮನಸೋತ ನರೇಂದ್ರ ಮೋದಿ!

Exit mobile version