Site icon Vistara News

Ripponpet News: ಮನಸ್ಸುಗಳ ಕಟ್ಟುವ ಪ್ರಕ್ರಿಯೆಯೇ ರಂಗಭೂಮಿ: ಡಾ. ರತ್ನಾಕರ ಕುನುಗೋಡು

Theatre Day ripponpet

#image_title

ರಿಪ್ಪನ್‌ಪೇಟೆ: “ಎಲ್ಲ ಭೇದಗಳನ್ನು ಅಳಿಸಿ ಸಮತೆಯ ಕಣ್ಣಲ್ಲಿ ಒಡೆದ ಮನಸ್ಸುಗಳನ್ನು ಕಟ್ಟುವ ಸಮರ್ಥ ಮಾಧ್ಯಮ ರಂಗಭೂಮಿ. ರಂಗಭೂಮಿಯ ಮುಖಾಂತರ ಆರೋಗ್ಯಕರ ಮನಸ್ಸುಳ್ಳ ಯುವ ಜನತೆಯನ್ನು ರೂಪಿಸುವ ತುರ್ತು ಇದೆ” ಎಂದು ರಿಪ್ಪನ್‌ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ (Govt First Grade College) ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ. ರತ್ನಾಕರ ಸಿ. ಕುನುಗೋಡು ಹೇಳಿದರು.

ದಿ. ರೇಣುಕಪ್ಪ ಗೌಡ ಪ್ರತಿಷ್ಠಾನ, ಮಲೆನಾಡು ಕಲಾ ತಂಡ ಮಸರೂರು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಪಟ್ಟಣದ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶ್ವ ರಂಗಭೂಮಿ ದಿನಾಚರಣೆಯಲ್ಲಿ “ರಂಗಭೂಮಿ ಅಂದು ಮತ್ತು ಇಂದು” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, “ಆದಿಮ ರಂಗ ಕ್ರಿಯೆಗಳು ಹಸಿವು, ಫಲವತ್ತತೆ, ಚರಿತ್ರೆಯ ಪ್ರಸರಣ , ಆರಾಧನೆ ಹಾಗೂ ಆಧ್ಯಾತ್ಮಿಕತೆಯ ಅಂಶಗಳನ್ನು ಒಳಗೊಂಡ ಪ್ರಕ್ರಿಯೆಯಾಗಿ ಮನುಕುಲದ ಅವಿಭಾಜ್ಯ ಅಂಗವಾಗಿ ಬೆಳೆದುಬಂದಿವೆ. ರಂಗಭೂಮಿಯ ಪರಿಕಲ್ಪನೆ ವಿಶಾಲವಾಗಿದ್ದು, ಇಂದು ನಾನಾ ರೂಪಾಂತರಗಳ ಮೂಲಕ ತನ್ನ ಜೀವಂತಿಕೆಯನ್ನು ಕಾಪಿಟ್ಟುಕೊಂಡಿದೆ” ಎಂದರು.

ಇದನ್ನೂ ಓದಿ: Actor Ramcharan: RC15 ಟೈಟಲ್‌ ರಿವೀಲ್‌: ಜನುಮದಿನದಂದೇ ಗುಡ್‌ನ್ಯೂಸ್‌ ಕೊಟ್ಟ ರಾಮ್‌ಚರಣ್‌

ರಂಗಕರ್ಮಿ ಗಣೇಶ ಕೆಂಚನಾಲ ಪ್ರಾಸ್ತಾವಿಕವಾಗಿ ಮಾತನಾಡಿ, “ಮಕ್ಕಳ ಬೇಸಿಗೆ ಶಿಬಿರವನ್ನು ಹಮ್ಮಿಕೊಂಡಿದ್ದು ಪೋಷಕರು ತಮ್ಮ ಮಕ್ಕಳನ್ನು ಶಿಬಿರಕ್ಕೆ ಸೇರಿಸುವ ಮೂಲಕ ರಂಗಭೂಮಿಯ ಜೀವಂತಿಕೆಗೆ ಸಹಕರಿಸಬೇಕು” ಎಂದು ಮನವಿ ಮಾಡಿದರು.

ಹಿರಿಯ ಸಾಹಿತಿ ಅ.ಹ. ಪಾಟೀಲ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕು. ಸಂಗೀತಾ ಅವರು ರಂಗ ಗೀತೆಗಳನ್ನು ಪ್ರಸ್ತುತಪಡಿಸಿದರು. ಲಕ್ಷ್ಮೀ ಭದ್ರಾವತಿ ಅವರು ಕಲ್ಯಾಣ ಕ್ರಾಂತಿಯ ತುಣುಕನ್ನು ಏಕವ್ಯಕ್ತಿ ಪ್ರದರ್ಶನ ನೀಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ, ಹರೀಶ್ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ: Amit Shah: ಬೆಂಗಳೂರಿನಲ್ಲಿ ಅಮಿತ್‌ ಶಾ ಕಾನ್‌ವೇಯಲ್ಲಿ ಭದ್ರತಾ ವೈಫಲ್ಯ; ಇಬ್ಬರು ವಿದ್ಯಾರ್ಥಿಗಳ ವಿಚಾರಣೆ

Exit mobile version