Site icon Vistara News

Ripponpet News: ದೇಶದಲ್ಲಿ ಆಹಾರದ ಸಮಸ್ಯೆ ಇಲ್ಲ, ಆದರೆ ವಸತಿ ಸಮಸ್ಯೆ ಇದೆ: ಶಾಸಕ ಹಾಲಪ್ಪ

Boys Hostel MLA Halappa ripponpet

#image_title

ರಿಪ್ಪನ್‌ಪೇಟೆ: “ಭಾರತ ದೇಶದ ಜನಸಂಖ್ಯೆ 140 ಕೋಟಿಯಾಗಿದ್ದರೂ ಆಹಾರದ ಸಮಸ್ಯೆ ಇಲ್ಲ. ಕಾರಣ ನಮ್ಮ ದೇಶದಲ್ಲಿ ಉತ್ಪಾದನೆಯಾಗುವ ಆಹಾರವನ್ನು ವಿದೇಶಗಳಿಗೆ ರ‌ಫ್ತು ಮಾಡುತ್ತಿದ್ದು, ದೇಶದ ಜನಸಾಮಾನ್ಯರು ಹಸಿವಿನಿಂದ ಬಳಲದಂತೆ ಪಡಿತರ ನೀಡಲಾಗುತ್ತಿದೆ. ಆದರೆ, ವಸತಿಯ ಸಮಸ್ಯೆ ಕಾಡುತ್ತಿದೆ” ಎಂದು ಶಾಸಕ, ಎಂ.ಎಸ್.ಐ.ಎಲ್. ಅಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು.

ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಪಟ್ಟಣದ ಬರುವೆ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆಯವರು 4.86 ಕೋಟಿ ರೂ. ವೆಚ್ಚದ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, “ಅನ್ನಕ್ಕೆ ಕಷ್ಟವಿದ್ದ ದಿನಗಳು ಕಳೆದು ಈಗ ಆಹಾರ ವಸ್ತು ವಿಷಯಗಳಲ್ಲಿ ಆಮೂಲಾಗ್ರ ಬದಲಾವಣೆಯೊಂದಿಗೆ ಅಭಿವೃದ್ಧಿಯನ್ನು ಸಾಧಿಸಲಾಗಿದೆ. ಗ್ರಾಮೀಣ ಮಕ್ಕಳ ಕಲಿಕೆಗೆ ವಸತಿಯ ಅಗತ್ಯವಿದ್ದು ಇವೆಲ್ಲವನ್ನೂ ಅಭಿವೃದ್ಧಿಗೊಳಿಸಿ ಸಮಾಜ ಕಲ್ಯಾಣ ಕಾರ್ಯದಲ್ಲಿ ತೊಡಗುವುದು ನಮ್ಮ ಆದ್ಯ ಕರ್ತವ್ಯವಾಗಿದೆ” ಎಂದರು.

ಶಿವಮೊಗ್ಗ ಸಂಪರ್ಕ ರಸ್ತೆಯ ಮುಡುಬ-ಬೈರಾಪುರ ಬರುವೆ ರಸ್ತೆ ಅಭಿವೃದ್ಧಿಗೆ ಒಂದು ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ಹಾಗೂ ಬೈರಾಪುರ –ಮುಡುಬ ಈಶ್ವರ ದೇವಸ್ಥಾನದ ಬಳಿ 25 ಲಕ್ಷ ರೂ ವೆಚ್ಚದ ಸಭಾಭವನ ಕಾಮಗಾರಿ ಉದ್ಘಾಟನೆ, ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಮ್ಮಡಿಕೊಪ್ಪ ಸೇತುವೆ ಬಳಿ 1 ಕೋಟಿ ರೂ. ವೆಚ್ಚದ ಸೈಡ್‌ವಾಲ್ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.

ಇದನ್ನೂ ಓದಿ: Teacher Transfer : ಶಿಕ್ಷಕರ ವರ್ಗಾವಣೆಗೆ ಅನುಮತಿ ನೀಡುವಂತೆ ಚುನಾವಣಾ ಆಯೋಗಕ್ಕೆ ಶಿಕ್ಷಣ ಇಲಾಖೆ ಮನವಿ

ಅಂಬೇಡ್ಕರ್ ಅಭಿವೃದ್ಧಿ ನಿಗಮದ ನಿರ್ದೇಶಕ ಎನ್.ಆರ್. ದೇವಾನಂದ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಕೆ. ರಾವ್, ತಾಲೂಕು ಬಿಜೆಪಿ ಅಧ್ಯಕ್ಷ ಗಣಪತಿ ಬೀಳಗೋಡು, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಂ.ಬಿ.ಮಂಜುನಾಥ್, ಆರ್.ಟಿ.ಗೋಪಾಲ, ಎನ್. ಸತೀಶ್, ಪಿ. ರಮೇಶ್, ಮೆಣಸೆ ಆನಂದ, ಉಪ ತಹಶೀಲ್ದಾರ್‌ ಹುಚ್ಚರಾಯಪ್ಪ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಎಂ.ಮಹೇಶ, ಮೇಲ್ವಿಚಾರಕ ರಾಘವೇಂದ್ರ, ಪಿಡಿಒ ಜಿ. ಚಂದ್ರಶೇಖರ್ ಇನ್ನಿತರರು ಹಾಜರಿದ್ದರು.

Exit mobile version