Site icon Vistara News

Ripponpete News | ಸಾಲಬಾಧೆಯಿಂದ ಕಾರಕ್ಕಿಯಲ್ಲಿ ರೈತ ಆತ್ಮಹತ್ಯೆ

Farmer Suicide @ Maharashtra

ರಿಪ್ಪನ್ ಪೇಟೆ : ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ (Ripponpete News) ಸಮೀಪದ ಕೋಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರಕ್ಕಿ ಗ್ರಾಮದ ರಾಜಪ್ಪ ಬಿನ್ ಮಂಜ ನಾಯ್ಕ್ ಸಾಲಭಾದೆಯಿಂದ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೋಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರಕ್ಕಿ ಗ್ರಾಮದಲ್ಲಿ ಒಂದೂವರೆ ಎಕರೆ ಹೊಲವನ್ನು ಹೊಂದಿದ್ದ ರಾಜಪ್ಪ, ಕೋಡೂರಿನ ಕೆನರಾ ಬ್ಯಾಂಕ್, ಧರ್ಮಸ್ಥಳ ಸಂಘ, ಪತ್ತಿನ ಸೇವಾ ಸಹಕಾರ ಸಂಘ ಮತ್ತು ಸ್ವಸಹಾಯ ಸೇವಾ ಸಂಘಗಳಿಂದ ಸಾಲ ಪಡೆದುಕೊಂಡಿದ್ದರು. ರಾಜಪ್ಪ ಅವರಿಗೆ ಪತ್ನಿ, ಮಗ ಹಾಗೂ ಎರಡು ಹೆಣ್ಣು ಮಕ್ಕಳಿದ್ದಾರೆ.

ರಿಪ್ಪನ್ ಪೇಟೆ ನಾಡ ಕಚೇರಿಯ ಉಪ ತಹಸೀಲ್ದಾರ್ ಹುಚ್ಚರಾಯಪ್ಪ, ಪ್ರಭಾರಿ ಕಂದಾಯ ನಿರೀಕ್ಷಕ ರೇಣುಕಾರಾಧ್ಯ, ಗ್ರಾಮ ಆಡಳಿತ ಅಧಿಕಾರಿ ಶ್ವೇತಾ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Miss Queen of India | ಕನ್ನಡತಿ ಸಮೃದ್ಧಿ ವಿ ಶೆಟ್ಟಿ ಮುಡಿಗೇರಿತು ‘ಮಿಸ್ ಕ್ವೀನ್ ಆಫ್ ಇಂಡಿಯಾ’ ಕಿರೀಟ

Exit mobile version