Site icon Vistara News

Tiger Dance | ಹುಲಿ ವೇಷಧಾರಿಗಳೊಂದಿಗೆ ಹೆಜ್ಜೆ ಹಾಕಿದ ರಿಷಬ್ ಶೆಟ್ಟಿ

Tiger Dance

ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಇಲ್ಲಿನ ಕೊರಂಗ್ರಪಾಡಿಯ ನೀಲಕಂಠ ಬಬ್ಬುಸ್ವಾಮಿ, ಕೊರಗಜ್ಜ ಸನ್ನಿಧಾನದಲ್ಲಿ ನಿರ್ದೇಶಕ, ನಟ ರಿಷಬ್ ಶೆಟ್ಟಿ ಅಷ್ಟಮಿಯ ಹುಲಿ ವೇಷ ತಂಡದೊಂದಿಗೆ (Tiger Dance) ಹೆಜ್ಜೆ ಹಾಕಿರುವುದು ಗಮನ ಸೆಳೆದಿದೆ.

ಉಡುಪಿಯಲ್ಲಿ ಶುಕ್ರವಾರ ವಿಜೃಂಭಣೆಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಉಳಿದವರು ಕಂಡಂತೆ ಚಿತ್ರದ ಖ್ಯಾತಿಯ ಜೂನಿಯರ್ ಫ್ರೆಂಡ್ಸ್ ಹುಲಿ ಕುಣಿತ ತಂಡದ ಜತೆ ರಿಷಬ್ ಶೆಟ್ಟಿ ಸಖತ್‌ ಸ್ಟೆಪ್ಸ್‌ ಹಾಕಿದ್ದಾರೆ.

ಕೊರಗಜ್ಜ ದೈವದ ಭಕ್ತರಾಗಿರುವ ರಿಷಬ್‌ ಶೆಟ್ಟಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ದೇವಾಲಯಕ್ಕೆ ಭೇಟಿ ದರ್ಶನ ಪಡೆದು, ಹುಲಿ ಕುಣಿತ ತಂಡದೊಂದಿಗೆ ಭರ್ಜರಿಯಾಗಿ ಕುಣಿದು ಸಂಭ್ರಮಿಸಿದ್ದಾರೆ.

ಇದನ್ನೂ ಓದಿ | Krishna Janmashtami Special | ಶ್ರೀ ಕೃಷ್ಣ ಪರಮಾತ್ಮನೇ ಕರೆದುಕೊಟ್ಟ ಪವಿತ್ರ ಕ್ಷೀರ – ಗೀತಾಮೃತ

Exit mobile version