Site icon Vistara News

Road accident: ಬೈಕ್‌ಗೆ ಕೆಕೆಆರ್‌ಟಿಸಿ ಬಸ್‌ ಡಿಕ್ಕಿ; ಬೈಕ್ ಸವಾರ ಸಾವು

Bike collided with KKRTC bus Bike rider dies at Kampli

ಕಂಪ್ಲಿ: ಬೈಕ್‌ಗೆ ಎದುರುಗಡೆ ಬಂದ ಕೆ.ಕೆ.ಆರ್‌.ಟಿ.ಸಿ ಬಸ್‌ (KKRTC bus) ಡಿಕ್ಕಿ (Collided) ಹೊಡೆದ ಪರಿಣಾಮ ಬೈಕ್ ಸವಾರ (Bike rider) ಸಾವನಪ್ಪಿರುವ ಘಟನೆ ಕಂಪ್ಲಿ (Kampli) ತಾಲೂಕು ಸಮೀಪದ ಹೊಸ ದರೋಜಿಯ ಕಂಪ್ಲಿ ರಸ್ತೆಯ ಬಳಿ ಮಂಗಳವಾರ ಜರುಗಿದೆ.

ಕಂಪ್ಲಿ ತಾಲೂಕಿನ ಜವುಕು ಗ್ರಾಮದ ಯುವಕ ಎನ್. ಬಸವರಾಜ (22ವರ್ಷ) ಮೃತ ಯುವಕ. ಎನ್.ಬಸವರಾಜ ಹಾಗೂ ತಮ್ಮ ಎನ್.ಯೋಗರಾಜ್ ಜಿಂದಾಲ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು ನಿತ್ಯ ಕೆಲಸಕ್ಕಾಗಿ ಬೈಕ್‌ನಲ್ಲಿ ಓಡಾಡುತ್ತಿದ್ದರು.

ಎಂದಿನಂತೆ ಮಂಗಳವಾರ ಕೆಲಸ ಮುಗಿಸಿಕೊಂಡು ತಮ್ಮ ಗ್ರಾಮಕ್ಕೆ ಮರಳುವ ವೇಳೆ ಕೆ.ಕೆ.ಆರ್.ಟಿ.ಸಿ. ಬಸ್‌ವೊಂದು ವೇಗವಾಗಿ ಬಂದು ಬೈಕ್‌ ಗೆ ಡಿಕ್ಕಿ ಹೊಡೆದ ಪರಿಣಾಮ ಎನ್.ಬಸವರಾಜ ಗೆ ಎರಡು ಕಾಲುಗಳು ಮುರಿದು ತೀವ್ರ ರಕ್ತಸ್ರಾವ ಉಂಟಾಗಿ ಗಂಭೀರ ಗಾಯಗಳಾಗಿದ್ದು, ಬೈಕ್ ನ ಹಿಂಬದಿಯಲ್ಲಿ ಕುಳಿತಿದ್ದ ಎನ್.ಯೋಗರಾಜ್ ಗೆ ಸಣ್ಣ ಪುಟ್ಟ ಗಾಯಗಳಾಗಿದ್ದವು. ಕೂಡಲೇ ಸ್ಥಳದಲ್ಲಿದ್ದ ಕೆಲವರು ಗಾಯಾಳುಗಳನ್ನು ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ ಗೆ ಕಳುಹಿಸಿದ್ದು ಬೈಕ್‌ ಸವಾರ ಎನ್.ಬಸವರಾಜ ಮೃತ ಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: Students death : 9ನೇ ಕ್ಲಾಸ್‌ ವಿದ್ಯಾರ್ಥಿ ನೇಣಿಗೆ ಶರಣು, ಹಾರಂಗಿ ನಾಲೆಗೆ ಏಡಿ ಹಿಡಿಯಲು ಹೋದ ಬಾಲಕ ಕಣ್ಮರೆ

ಈ ಕುರಿತು ಬೈಕ್‌ನ ಹಿಂಬದಿಯಲ್ಲಿದ್ದ ಎನ್.ಯೋಗರಾಜ್ ನೀಡಿದ ದೂರಿನ ಮೇರೆಗೆ ಕುಡುತಿನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version