ಯಾದಗಿರಿ: ಅಪರಿಚಿತ ವಾಹನವೊಂದು (Unknown vehicle) ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನ (Bike rider) ಕಣ್ಣು ಗುಡ್ಡೆಯೇ (Eyeball) ಹೊರಬಿದ್ದು, ಆತನು ತೀವ್ರವಾಗಿ ಗಾಯಗೊಂಡಿರುವ ಘಟನೆ ಯಾದಗಿರಿಯ ಲಕ್ಷ್ಮಿ ನಗರದಲ್ಲಿ ಜರುಗಿದೆ. ಯಾದಗಿರಿ ತಾಲೂಕಿನ ಯಡ್ಡಳ್ಳಿ ಗ್ರಾಮದ ಚನ್ನಾರೆಡ್ಡಿ ಮಾಲಿಪಾಟೀಲ ಎನ್ನುವವರು ಮೊಹರಂ ಹಿನ್ನಲೆಯಲ್ಲಿ ನಸುಕಿನ ಜಾವ ದ್ವಿಚಕ್ರ ವಾಹನದಲ್ಲಿ ಊರಿಗೆ ತೆರಳುತ್ತಿದ್ದ ವೇಳೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಕಣ್ಣುಗುಡ್ಡೆಯೇ ಕಿತ್ತುಕೊಂಡು ರಸ್ತೆ ಮೇಲೆ ಬಿದ್ದಿತ್ತು.
ಇದನ್ನೂ ಓದಿ: Gold Rate Today: ಬಂಗಾರದ ಬೆಲೆಯಲ್ಲಿ ಇಂದು ಯಾವುದೇ ಬದಲಾವಣೆ ಇಲ್ಲ; ಇಷ್ಟಿದೆ ನೋಡಿ ರೇಟ್
ಅಪಘಾತದಿಂದ ಬೈಕ್ ಸವಾರ ತೀವ್ರ ಗಾಯಗೊಂಡು ಸಹಾಯಕ್ಕಾಗಿ ಅಂಗಲಾಚಿದರೂ ಯಾರೂ ಸಹಾಯಕ್ಕೆ ಬರಲಿಲ್ಲ ಎನ್ನಲಾಗಿದೆ, ಬಳಿಕ ಅದೇ ಮಾರ್ಗವಾಗಿ ಹೊರಟಿದ್ದ ಕಿಲ್ಲನಕೇರಾ ಗ್ರಾಮದ ಬೀರಲಿಂಗಪ್ಪ ಎಂಬ ಯುವಕ ಮಾನವೀಯತೆ ಮೆರೆದು ಸಹಾಯ ಮಾಡಲು ನೆರವಾಗಿದ್ದಾನೆ.
ಕೂಡಲೇ 108, 112 ನಂಬರ್‌ಗೆ ಕರೆ ಮಾಡಿದ್ದಾನೆ. ಸ್ಥಳಕ್ಕೆ ಪೊಲೀಸರು ಆಗಮಿಸಿ, ನಂತರ ಅಂಬುಲೆನ್ಸ್ ನಲ್ಲಿ ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಅಗತ್ಯ ಚಿಕಿತ್ಸೆ ನೀಡಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಯ ಖಾಸಗಿ ಆಸ್ಪತ್ರೆ ದಾಖಲಿಸಲಾಗಿದೆ.
ಈ ಬಗ್ಗೆ ಬೀರಲಿಂಗಪ್ಪ ಬಿಜೆಪಿ ಮುಖಂಡ ವೆಂಕಟರೆಡ್ಡಿ ಅಬ್ಬೆತುಮಕೂರ ಅವರ ಗಮನಕ್ಕೆ ತಂದಾಗ ವೆಂಕಟರೆಡ್ಡಿ ಅವರು, ಗಾಯಗೊಂಡ ಕುಟುಂಬಸ್ಥರನ್ನು ಸಂಪರ್ಕಿಸಿ, ಕಿತ್ತು ಹೋದ ಕಣ್ಣು ಗುಡ್ಡೆಯನ್ನು ಕುಟುಂಬಸ್ಥರಿಗೆ ನೀಡಿ, ಮಾನವೀಯತೆ ತೋರಿದ್ದಾರೆ.
ಇದನ್ನೂ ಓದಿ: ICC World Cup: ಏಕದಿನ ವಿಶ್ವಕಪ್ನಲ್ಲಿ ಸಿಗಲಿದೆ ಕೋಕಾ-ಕೋಲಾ ಜ್ಯೂಸ್
ಕಣ್ಣು ಗುಡ್ಡೆಯನ್ನು ಅಳವಡಿಕೆ ಮಾಡಲು ಸಾಧ್ಯವಿಲ್ಲ, ಆದರೆ ಕಣ್ಣಿನ ಪೊರೆಯನ್ನು ಬೇರೆಯವರಿಗೆ ಅಳವಡಿಕೆ ಮಾಡಬಹುದು ಎಂದು ವೈದ್ಯರು ತಿಳಿಸಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.