ತುಮಕೂರು: ತುಮಕೂರಲ್ಲಿ ಸಾಲು ಸಾಲು ರಸ್ತೆ ಅಪಘಾತಗಳು (Road Accident) ನಡೆಯುತ್ತಲೇ ಇದ್ದು, ಸಾವು ನೋವಿಗೆ ಕಾರಣವಾಗಿದೆ. ತುಮಕೂರು ನಗರದ ಶಿರಾ ಗೇಟ್ ಬಳಿ ಎಸ್ ಮಾಲ್ ಬಳಿ ಸೋಮವಾರ ಬೆಳಗ್ಗೆ ಲಾರಿ ಮತ್ತು ಸ್ಕೂಟರ್ ನಡುವೆ ಡಿಕ್ಕಿಯಾಗಿ ಸವಾರ (Road Accident) ಸ್ಥಳದಲ್ಲಿಯೇ ದಾರುಣವಾಗಿ ಮೃತಪಟ್ಟಿದ್ದರು. ಈ ಘಟನೆ ಮಾಸುವೇ ಮುನ್ನವೇ ತುಮಕೂರಿನ ಪಾವಗಡ ತಾಲೂಕಿನ ಆರ್ಲಹಳ್ಳಿ ಬಳಿ ಬೈಕ್ – ಬೊಲೆರೋ ನಡುವೆ ಡಿಕ್ಕಿಯಾಗಿದೆ. ಪರಿಣಾಮ ಸವಾರ ಸ್ಥಳದಲ್ಲೇ ಮೃತ್ಯುವಾಗಿದ್ದರೆ, ಮತ್ತೊಬ್ಬ ಹಿಂಬದಿ ಸವಾರ ಕಾಲು ಮುರಿದುಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.
ದೇವರಬೆಟ್ಟ ಗ್ರಾಮದ ನವೀನ್ ಕುಮಾರ್ (20) ಮೃತ ವಿದ್ಯಾರ್ಥಿಯಾಗಿದ್ದಾನೆ. ದ್ವಿತೀಯ ವರ್ಷದ ಬಿ.ಕಾಂ ಓದುತ್ತಿದ್ದ ನವೀನ್ ಕುಮಾರ್ ಮತ್ತು ಸ್ನೇಹಿತ ಪ್ರಶಾಂತ್ ಇಬ್ಬರು ಪಾವಗಡ ಪಟ್ಟಣಕ್ಕೆ ಕಾಲೇಜಿಗೆ ಬೈಕ್‌ನಲ್ಲಿ ಬರುತ್ತಿದ್ದರು. ಈ ವೇಳೆ ಬೊಲೆರೋ ವಾಹನಕ್ಕೆ ಬೈಕ್ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ನವೀನ್ ತಲೆಗೆ ಗಂಭೀರ ಗಾಯವಾಗಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಇದನ್ನೂ ಓದಿ: Drowned in Water : ಸಮುದ್ರದಲ್ಲಿ ಮಗುಚಿ ಬಿದ್ದ ದೋಣಿ; ಇಬ್ಬರು ಮೀನುಗಾರರು ಸಾವು
ಹಿಂಬದಿ ಕುಳಿತಿದ್ದ ಪ್ರಶಾಂತ್‌ಗೆ ಗಂಭೀರ ಗಾಯಗೊಂಡಿದ್ದು ಕಾಲು ಮುರಿದುಕೊಂಡಿದ್ದಾನೆ. ಸ್ಥಳೀಯರು ಪಾವಗಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತ ನವೀನ್ ಕುಮಾರ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಪಾವಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿಯಲ್ಲಿ ಶಾಲಾ ಬಸ್ ಪಲ್ಟಿ; ಪಾರಾದ ಮಕ್ಕಳು
ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶೇಗುಣಸಿ ಗ್ರಾಮದಲ್ಲಿ ಮಕ್ಕಳನ್ನು ಶಾಲೆಗೆ ಕರೆ ತರುವಾಗ ಖಾಸಗಿ ಶಾಲಾ ಬಸ್‌ವೊಂದು ಪಲ್ಟಿಯಾಗಿದೆ. ಓವರ್ ಟೆಕ್ ಮಾಡುವಾಗ ರಸ್ತೆ ಪಕ್ಕದ ತಗ್ಗಿಗೆ ಶಾಲಾ ಬಸ್ ವಾಲಿ ಪಲ್ಟಿಯಾಗಿದೆ. ಕೂಡಲೆ ಸ್ಥಳೀಯರು ಮಕ್ಕಳನ್ನು ಹಾಗೂ ಡ್ರೈವರ್‌ನನ್ನು ರಕ್ಷಣೆ ಮಾಡಿದ್ದಾರೆ.
ಶಾಲಾ ಮಕ್ಕಳಿಗೆ ಸಣ್ಣ- ಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಥಣಿ ತಾಲೂಕಿನ ಹಲವು ಬಾರಿ ಬಸ್ ಬಿದ್ದಿರುವ ಘಟನೆ ನಡೆದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಕಿಡಿಕಾರಿದ್ದಾರೆ. ಮಕ್ಕಳ ಸುರಕ್ಷತೆ ಆದ್ಯತೆ ಮರೆತು ನಿಯಮ ಪಾಲಿಸದೆ ಬೇಕಾಬಿಟ್ಟಿ ವಾಹನ ಚಲಾಯಿಸುವ ಚಾಲಕರ ಕ್ರಮಕ್ಕೆ ಆಗ್ರಹಿಸಿದ್ದಾರೆ. ಕಳೆದ 5 ತಿಂಗಳಲ್ಲಿ ಮೂರನೇ ಪ್ರಕರಣ ಇದು ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: Road Accident : ತುಮಕೂರಲ್ಲಿ ಭೀಕರ ಅಪಘಾತ; ಲಾರಿ ಡಿಕ್ಕಿ, ಸವಾರನ ತಲೆ ಛಿದ್ರ
ರಾಯಚೂರಲ್ಲಿ ಟ್ರಾಕ್ಟರ್ ಪಲ್ಟಿ
ರಾಯಚೂರಲ್ಲಿ ಹತ್ತಿ ತುಂಬಿದ್ದ ಟ್ರಾಕ್ಟರ್ ಪಲ್ಟಿಯಾಗಿದೆ. ಚಲಿಸುತ್ತಿದ್ದ ಟ್ರಾಕ್ಟರ್ ಟ್ರೈಲರ್‌ಗೆ ಹಗ್ಗ ಸಿಲುಕಿ ಪಲ್ಟಿಯಾಗಿದೆ. ನಗರದ ಬಸವೇಶ್ವರ ಸರ್ಕಲ್‌ನಲ್ಲಿ ಈ ಘಟನೆ ನಡೆದಿದೆ. ಮಂತ್ರಾಲಯ ಮಾರ್ಗವಾಗಿ ರಾಯಚೂರು ಮಾರ್ಕೆಟ್‌ನತ್ತ ಟ್ರಾಕ್ಟರ್ ಪಲ್ಟಿಯಾಗಿದೆ. ಟ್ರಾಕ್ಟರ್ ಪಲ್ಟಿಯಿಂದ ರಸ್ತೆಗೆ ಬಿಳಿ ಹತ್ತಿ ಚಲ್ಲಿದೆ. ಟ್ರಾಕ್ಟರ್ ಪಲ್ಟಿಯಿಂದ ಕೆಲಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು. ರಾಯಚೂರು ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಲಿಂಕ್ ಕ್ಲಿಕ್ ಮಾಡಿ