ಚಿಕ್ಕಮಗಳೂರು/ ಧಾರವಾಡ : ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಅಬ್ಬರ (rain News) ಮುಂದುವರಿದಿದೆ. ಮಳೆಯಿಂದಾಗಿ ರಸ್ತೆ ತಿರುವು ಗೋಚರಿಸದೆ ಒಂದೇ ಸ್ಥಳದಲ್ಲಿ ಎರಡು ವಾಹನಗಳು (road accident) ಪಲ್ಟಿಯಾಗಿವೆ. ಚಾಲಕರ ನಿಯಂತ್ರಣ ತಪ್ಪಿ ಎರಡು ಕಾರುಗಳು (Car accident) ಮೂಡಿಗೆರೆ ತಾಲೂಕಿನ ಬಣಕಲ್ ಬಳಿ ಪಲ್ಟಿಯಾಗಿವೆ.
ಇನೋವಾ ಕಾರು ಪುತ್ತೂರಿನಿಂದ ಚಿಕ್ಕಮಗಳೂರಿಗೆ ಹೋಗುತ್ತಿತ್ತು. ಈ ವೇಳೆ ಕಾರು ಸ್ಕಿಡ್ ಆಗಿ ಮುಖ್ಯ ರಸ್ತೆಯಿಂದ ನೇರವಾಗಿ ಪಕ್ಕದ ಕಂದಕಕ್ಕೆ ನುಗ್ಗಿ ಪಲ್ಟಿಯಾಗಿದೆ. ಎರಡು ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಗಾಯಾಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಯಲ್ಲಿ ಕಾರಿನ ಮುಂಭಾಗ ಪೂರ್ತಿ ಜಖಂಗೊಂಡಿದೆ. ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳೀಯರು ಕಾರನ್ನು ಮೇಲೆ ಎತ್ತಿದ್ದಾರೆ.
ನಿರಂತರ ಮಳೆಗೆ ರಸ್ತೆ ಕುಸಿತ
ಧಾರವಾಡ ಜಿಲ್ಲೆಯಲ್ಲಿ ಕಳೆದ ಆರು ದಿನದಿಂದ ಎಡಬಿಡದೆ ಮಳೆ ಸುರಿಯುತ್ತಿದೆ. ಇಲ್ಲಿನ ಕಲಘಟಗಿ ತಾಲೂಕಿನ ಮಲಕನಕೊಪ್ಪ ಬಳಿ ನಿರಂತರ ಮಳೆಗೆ ರಸ್ತೆ ಕುಸಿದಿದೆ. ರಸ್ತೆ ಕುಸಿದ ಕಾರಣದಿಂದಾಗಿ ಲಾರಿಯೊಂದು ಸಿಲುಕಿದೆ. ಮರದ ನಾಟುಗಳನ್ನು ತುಂಬಿಕೊಂಡು ಕಲಘಟಗಿಯಿಂದ ಹಳಿಯಾಳ ಕಡೆ ಹೊರಟಿದ್ದಾಗ, ಏಕಾಏಕಿ ರಸ್ತೆ ಕುಸಿತವಾದ ಕಾರಣ ರಸ್ತೆಯಲ್ಲಿ ಲಾರಿ ಸಿಲುಕಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ