Site icon Vistara News

Road Accident: ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿದ ಕಾರು; ಮೂವರು ಪ್ರಾಣಾಪಾಯದಿಂದ ಪಾರು

car fell into the lake after the driver lost control at ripponpet

ರಿಪ್ಪನ್‌ಪೇಟೆ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕೆರೆಗೆ ಉರುಳಿ ಬಿದ್ದಿರುವ ಘಟನೆ (Car jumps into lake) ಪಟ್ಟಣದ ಹೊಸನಗರ ರಸ್ತೆಯಲ್ಲಿರುವ ತಾವರೆ ಕೆರೆ ಬಳಿ ಜರುಗಿದೆ.

ಬೆಂಗಳೂರಿನಿಂದ ರಿಪ್ಪನ್‌ಪೇಟೆ ಮಾರ್ಗವಾಗಿ ಸೊನಲೆಗೆ ತೆರಳುತಿದ್ದಾಗ ಹೊಸನಗರ ರಸ್ತೆಯ ತಾವರೆ ಕೆರೆಯ ಸಮೀಪದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಕೆರೆಗೆ ಉರುಳಿ ಬಿದ್ದಿದೆ. ಕಾರಿನಲ್ಲಿ ಚಾಲಕ ಹಾಗೂ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಪ್ರಯಾಣಿಸುತ್ತಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳೀಯರು ಕೂಡಲೇ ಅಪಘಾತಗೊಂಡವರ ಸಹಾಯಕ್ಕೆ ತೆರಳಿದ ಹಿನ್ನಲೆಯಲ್ಲಿ ಭಾರಿ ಅನಾಹುತ ತಪ್ಪಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: KSOU Mysuru: ಕೆಎಸ್‌ಒಯುನಿಂದ ಕೆಎಎಸ್‌, ಐಎಎಸ್‌ ಪರೀಕ್ಷೆ ತರಬೇತಿಗೆ ಅರ್ಜಿ ಆಹ್ವಾನ

ಈ ಕುರಿತು ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version