Site icon Vistara News

Road Accident: ಮಾಜಿ ಶಾಸಕ ವಿ.ಎಸ್.ಪಾಟೀಲ್ ಕಾರಿಗೆ ಟ್ರ್ಯಾಕ್ಟರ್ ಡಿಕ್ಕಿ; ಅಪಾಯದಿಂದ ಪಾರು

Former MLA V S Patil car acccident mundagoda

ಶಿರಸಿ (ಮುಂಡಗೋಡ): ಮಾಜಿ ಶಾಸಕ ವಿ.ಎಸ್.ಪಾಟೀಲ್ ಅವರ ಕಾರಿಗೆ ಹಿಂಬದಿಯಿಂದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ (Road Accident) ಘಟನೆ ಉ.ಕ. ಜಿಲ್ಲೆ ಮುಂಡಗೋಡಿನ ಬನ್ನಿಕಟ್ಟಿ ಬಳಿ ಶನಿವಾರ (ಜ.೨೮) ಮಧ್ಯಾಹ್ನ ನಡೆದಿದೆ.

ಮುಂಡಗೋಡಿನಿಂದ ಯಲ್ಲಾಪುರಕ್ಕೆ ತೆರಳುವಾಗ ಈ ಘಟನೆ ಸಂಭವಿಸಿದ್ದು, ಕಾರಿನ ಹಿಂಬದಿ ಜಖಂಗೊಂಡಿದೆ. ಅದೃಷ್ಟವಶಾತ್ ಮಾಜಿ ಶಾಸಕ ವಿ.ಎಸ್.ಪಾಟೀಲ್ ಯಾವುದೇ ಅಪಾಯ ಆಗಿಲ್ಲ.

ವಿ.ಎಸ್. ಪಾಟೀಲ್ ಅವರು ಇದೀಗ ಯಲ್ಲಾಪುರ-ಮುಂಡಗೋಡ ವಿಧಾನಸಭೆ ಚುನಾವಣೆಯ ಕಾಂಗ್ರೆಸ್ ಸಂಭವನೀಯ ಅಭ್ಯರ್ಥಿಯಾಗಿದ್ದಾರೆ. ಯಲ್ಲಾಪುರ ಕಡೆಗೆ ಹೊರಟಿದ್ದಾಗ ಹಿಂಬದಿಯಿಂದ ಬಂದ ಕಬ್ಬು ಸಾಗಿಸುವ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿದೆ. ಟ್ರ್ಯಾಕ್ಟರ್ ಚಾಲಕನನ್ನು ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ್ದು, ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Leopard Attack: ನಿಲ್ಲದ ಚಿರತೆ ಹಾವಳಿ; ದಾವಣಗೆರೆ, ರಾಮನಗರದಲ್ಲಿ ಚಿರತೆ ಪ್ರತ್ಯಕ್ಷ

Exit mobile version