Site icon Vistara News

Road Accident: ನವ ವಿವಾಹಿತರನ್ನು ಮಣ್ಣುಗೂಡಿಸಿದ ಅಪಘಾತ

new married couple death accident

ವಿಜಯಪುರ: ರಸ್ತೆ ಅಪಘಾತವೊಂದು (road accident) ನವ ವಿವಾಹಿತರನ್ನು ಬಲಿ ತೆಗೆದುಕೊಂಡಿದೆ. ಮದುವೆಯಾಗಿ ಒಂದು ತಿಂಗಳಾಗುವ ಮುನ್ನ ಇಬ್ಬರೂ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ವಿಜಯಪುರ ನಗರದ ಹೊರವಲಯದ ಸೋಲಾಪುರ ಬೈಪಾಸ್ ಬಳಿ ತಡರಾತ್ರಿ ಬೈಕ್ ಹಾಗೂ ಕ್ಯಾಂಟರ್ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿದ್ದು, ಅಪಘಾತದಲ್ಲಿ ಹೊನಮಲ್ಲ ತೆರದಾಳ (31) ಹಾಗೂ ಪತ್ನಿ ಗಾಯತ್ರಿ (24) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಹೊನಮಲ್ಲ ಹಾಗೂ ಗಾಯತ್ರಿ ಇಬ್ಬರ ನಡುವೆ ವಿವಾಹ ಕಳೆದ ಮೇ 22ರಂದು ಆಗಿತ್ತು.

ಸಂಬಂಧಿಕರ ಮಕ್ಕಳ ಹುಟ್ಟುಹಬ್ಬಕ್ಕೆ ಹೋಗಿ ವಾಪಸ್ ಬರುವಾಗ ಈ ದುರ್ಘಟನೆ ನಡೆದಿದ್ದು, ಮದುವೆಯಾಗಿ 24 ದಿನಗಳಲ್ಲಿ ಜೋಡಿ ಸಾವನ್ನಪ್ಪಿದೆ. ವಿಜಯಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಚಲಿಸುತ್ತಿದ್ದ ಆಟೋಗೆ ಹಿಂಬದಿಯಿಂದ ಕಾರು ಡಿಕ್ಕಿ, ಚಾಲಕ ಪರಾರಿ

ಬೆಂಗಳೂರು: ರಾಜಧಾನಿಯ ಜನನಿಬಿಡ ಕೆ.ಆರ್‌ ಮಾರ್ಕೆಟ್ ಫ್ಲೈ ಓವರ್ ಮೇಲೆ ತಡರಾತ್ರಿ ಆಟೋಗೆ ಹಿಂಬದಿಯಿಂದ ವೋಕ್ಸ್ ವ್ಯಾಗನ್ ಕಾರು ಡಿಕ್ಕಿಯಾಗಿದ್ದು, ಚಾಲಕ ಕಾರನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.

ಕಾರು ಡಿಕ್ಕಿಯಾದ ರಭಸಕ್ಕೆ ಆಟೋ ಪಲ್ಟಿ ಹೊಡೆದಿದೆ. ಅದೃಷ್ಟವಶಾತ್ ಆಟೋ ಚಾಲಕ ಹಾಗೂ ಇಬ್ಬರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಆಟೋ ಚಾಲಕ ಸೇರಿ ಮೂವರಿಗೆ ಗಂಭೀರ ಗಾಯಗಳಾಗಿದೆ. ಗಾಯಾಳುಗಳು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಘಾತದ ನಂತರ ಕಾರನ್ನು ಸ್ಥಳದಲ್ಲೆ ಬಿಟ್ಟು ಕಾರು ಚಾಲಕ ಎಸ್ಕೇಪ್ ಆಗಿದ್ದಾನೆ.

ಕ್ಯಾಂಟರ್‌ ಡಿಕ್ಕಿ, ಬೊಲೆರೋ ಪಲ್ಟಿ

ನೆಲಮಂಗಲ: ರಾಷ್ಟ್ರೀಯ ಹೆದ್ದಾರಿ 48ರ ಮಾದವಾರ ಬಳಿ ಕ್ಯಾಂಟರ್ ಹಾಗೂ ಬೊಲೆರೋ ನಡುವೆ ಅಪಘಾತ ಸಂಭವಿಸಿದೆ. ಬೆಂಗಳೂರು ಉತ್ತರ ತಾಲೂಕಿನ ಮಾದವಾರ ಬಳಿ ನೆಲಮಂಗಲದಿಂದ ಬೆಂಗಳೂರಿಗೆ ಹೋಗುತ್ತಿದ್ದ ಬುಲೆರೋ ಕ್ಯಾಂಟರ್‌ಗೆ ಡಿಕ್ಕಿಯಾಗಿ ಹೆದ್ದಾರಿಯಲ್ಲಿ ಮುಗುಚಿ ಬಿದ್ದಿದೆ. ಬೊಲೆರೋ ಚಾಲಕನಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Road Accident: ಕರಾಳ ಮಂಗಳವಾರ; ಮೂರು ಅಪಘಾತ, ಐದು ಸಾವು

Exit mobile version