Site icon Vistara News

Road Accident: ಸುಣ್ಣ ತುಂಬಿದ್ದ ಲಾರಿ ಬ್ರೇಕ್‌ ಫೇಲ್‌; ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

lorry accident in kodagu

ಮಡಿಕೇರಿ: ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮೇಕೇರಿ ಬಳಿ ಸೋಮವಾರ ಬೆಳಗ್ಗೆ ಲಾರಿಯೊಂದರ ಬ್ರೇಕ್‌ಫೇಲ್ ಆಗಿ ರಸ್ತೆ ಬದಿ ಗುಡ್ಡಕ್ಕೆ ಅಪ್ಪಳಿಸಿ ಪಲ್ಟಿ (Road Accident) ಹೊಡೆದಿದೆ. ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿದೆ.

ಮಡಿಕೇರಿ ವಿರಾಜಪೇಟೆ ರಾಜ್ಯ ಹೆದ್ದಾರಿಯ ಮೇಕೇರಿ ಮಸೀದಿ ಬಳಿ ಅಪಘಾತ ಸಂಭವಿಸಿದೆ. ಸುಣ್ಣ ತುಂಬಿದ್ದ ಲಾರಿ ಇದಾಗಿದೆ. ಲಾರಿ ಚಾಲಕ ಹಾಗೂ ಮಾಲೀಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ವೇಳೆ ಎದುರಿಗೆ ವಿದ್ಯಾರ್ಥಿಗಳು ಬರುತ್ತಿದ್ದರು. ಅಲ್ಲದೆ, ಇತರ ವಾಹನಗಳ ಸಂಚಾರವಿದ್ದರಿಂದ ಚಾಲಕ ಲಾರಿಯನ್ನು ನೇರವಾಗಿ ರಸ್ತೆ ಬದಿಯ ಗುಡ್ಡಕ್ಕೆ ಅಪ್ಪಳಿಸಿದ್ದಾರೆ. ಈ ವೇಳೆ ಕಲ್ಲಿನ ಮೇಲೆ ಚಕ್ರಗಳು ಹತ್ತಿದ್ದರಿಂದ ಲಾರಿ ಪಲ್ಟಿಯಾಗಿದೆ.

ಮೂರ್ನಾಡು ಗ್ರಾಮದ ಖಾಸಗಿ ತೋಟಕ್ಕೆ ಲಾರಿ ಮೂಲಕ ಸುಣ್ಣವನ್ನು ಸಾಗಿಸುತ್ತಿತ್ತು. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | PM Narendra Modi | ಸಿನಿಮಾಗಳ ವಿರುದ್ಧ ಅನಗತ್ಯ ಟೀಕೆ ಬೇಡ: ಬಿಜೆಪಿ ಕಾರ್ಯಕರ್ತರು, ನಾಯಕರಿಗೆ ಮೋದಿ ಕಿವಿಮಾತು

Exit mobile version