Site icon Vistara News

passenger train: ಹಳಿ ಮೇಲೆ ಬಿದ್ದ ಬಂಡೆ ಕಲ್ಲು; 2 ಗಂಟೆ ನಿಂತಲ್ಲೇ ನಿಂತ ಬೀದರ್- ಕಲಬುರಗಿ ಪ್ಯಾಸೆಂಜರ್ ರೈಲು

Bidar-Kalaburagi passenger train

ಕಲಬುರಗಿ: ಇಲ್ಲಿನ ಕಮಲಾಪುರ ತಾಲೂಕಿನ ಮರಗುತ್ತಿ ಟನಲ್ ಬಳಿ ಹಳಿ ಮೇಲೆ ಬಂಡೆ ಕಲ್ಲು ಬಿದ್ದಿದ್ದರಿಂದ ಬೀದರ್- ಕಲಬುರಗಿ ಪ್ಯಾಸೆಂಜರ್ ರೈಲು (passenger train) ಎರಡು ಗಂಟೆ ನಿಂತಲ್ಲೇ ನಿಂತಿತ್ತು. ಇದರಿಂದಾಗಿ ಪ್ರಯಾಣಿಕರು ಪರದಾಡುವಂತಾಯಿತು.

ಟನಲ್ ಮೇಲಿನ ಗುಡ್ಡದಿಂದ ರೈಲ್ವೆ ಹಳಿ ಮೇಲೆ ಕಲ್ಲು ಬಿದ್ದಿತ್ತು. ಪರಿಣಾಮ ರೈಲು ಮುಂದೆ ಹೋಗಲು ಆಗದೆ ಮಾರ್ಗ ಮಧ್ಯೆ ನಿಲ್ಲುವಂತಾಗಿತ್ತು. ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ರೈಲ್ವೆ ಸಿಬ್ಬಂದಿ ಆಗಮಿಸಿ ಕಲ್ಲಿನ ಬಂಡೆಯನ್ನು ತೆಗೆದು ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಎರಡು ಗಂಟೆ ತಡವಾಗಿ ಪ್ಯಾಸೆಂಜರ್ ರೈಲು ಬೀದರ್‌ನಿಂದ ಕಲಬುರಗಿಗೆ ತಲುಪಿದೆ.

ಹಳಿಗೆ ಅಡ್ಡಲಾಗಿ ಬಿದ್ದ ಬಂಡೆಕಲ್ಲು

ಡೋರನಹಳ್ಳಿ ನಿಲ್ದಾಣಗೆ ತಾತ್ಕಾಲಿಕ ನಿಲುಗಡೆ

ಜೂನ್‌ 11 ರಿಂದ 14ರವರೆಗೆ ಸೇಂಟ್ ಆಂಟೋನಿಸ್‌ ಬೆಸಿಲಿಕಾ ಉತ್ಸವದ ಪ್ರಯುಕ್ತ ಹಾಸನದ ಡೋರನಹಳ್ಳಿ ಹಾಲ್ಟ್‌ ನಿಲ್ದಾಣದಲ್ಲಿ ಮೂರು ಜೋಡಿ ರೈಲುಗಳಿಗೆ ಒಂದು ನಿಮಿಷ ತಾತ್ಕಾಲಿಕ ನಿಲುಗಡೆ ನೀಡಲು ನೈರುತ್ಯ ರೈಲ್ವೆಯು ನಿರ್ಧರಿಸಿದೆ.ರೈಲು ಸಂಖ್ಯೆ 16585/16586 ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮತ್ತು ಮಂಗಳೂರು ಸೆಂಟ್ರಲ್ ನಿಲ್ದಾಣಗಳ ನಡುವೆ ಸಂಚರಿಸುವ ದೈನಂದಿನ ಎಕ್ಸ್‌ಪ್ರೆಸ್ ರೈಲುಗಳಿಗೆ ಡೋರನಹಳ್ಳಿ ಹಾಲ್ಟ್‌ ನಿಲ್ದಾಣದಲ್ಲಿ ಜೂನ್ 10 ರಿಂದ 13 ರವರೆಗೆ ಎರಡೂ ದಿಕ್ಕಿನಲ್ಲಿ ಒಂದು ನಿಮಿಷ ತಾತ್ಕಾಲಿಕ ನಿಲುಗಡೆ ಕಲ್ಪಿಸಲಾಗಿದೆ.ರೈಲು ಸಂಖ್ಯೆ 16585 12:11/12:12AM ಗಂಟೆಗೆ ಡೋರನಹಳ್ಳಿಗೆ ಆಗಮಿಸಿ,ನಿರ್ಗಮಿಸಲಿದೆ.ರೈಲು ಸಂಖ್ಯೆ 16586 2:15/2:16AM ಗಂಟೆಗೆ ಡೋರನಹಳ್ಳಿಗೆ ಆಗಮಿಸಿ,ನಿರ್ಗಮಿಸಲಿದೆ.

ರೈಲು ಸಂಖ್ಯೆ 16225/16226 ಮೈಸೂರು ಮತ್ತು ಶಿವಮೊಗ್ಗ ಟೌನ್ ನಿಲ್ದಾಣಗಳ ನಡುವೆ ಸಂಚರಿಸುವ ದೈನಂದಿನ ಎಕ್ಸ್‌ಪ್ರೆಸ್ ರೈಲುಗಳಿಗೆ ಡೋರನಹಳ್ಳಿ ಹಾಲ್ಟ್‌ ನಿಲ್ದಾಣದಲ್ಲಿ ಜೂನ್ 11 ರಿಂದ 14 ರವರೆಗೆ ಎರಡೂ ದಿಕ್ಕಿನಲ್ಲಿ ಒಂದು ನಿಮಿಷ ತಾತ್ಕಾಲಿಕ ನಿಲುಗಡೆ ಕಲ್ಪಿಸಲಾಗಿದೆ. ರೈಲು ಸಂಖ್ಯೆ 16225 (10:41/10:42AM) ಗಂಟೆಗೆ ಡೋರನಹಳ್ಳಿಗೆ ಆಗಮಿಸಿ/ನಿರ್ಗಮಿಸಲಿದೆ. ರೈಲು ಸಂಖ್ಯೆ 16226 (03:50/03:51PM) ಗಂಟೆಗೆ ಡೋರನಹಳ್ಳಿಗೆ ಆಗಮಿಸಿ/ನಿರ್ಗಮಿಸಲಿದೆ.

ರೈಲು ಸಂಖ್ಯೆ 16222/16221 ಮೈಸೂರು ಮತ್ತು ತಾಳಗುಪ್ಪ ನಿಲ್ದಾಣಗಳ ನಡುವೆ ಸಂಚರಿಸುವ ಕುವೆಂಪು ಎಕ್ಸ್‌ಪ್ರೆಸ್ ರೈಲುಗಳಿಗೆ ಡೋರನಹಳ್ಳಿ ಹಾಲ್ಟ್‌ ನಿಲ್ದಾಣದಲ್ಲಿ ಜೂನ್ 11 ರಿಂದ 14 ರವರೆಗೆ ಎರಡೂ ದಿಕ್ಕಿನಲ್ಲಿ ಒಂದು ನಿಮಿಷ ತಾತ್ಕಾಲಿಕ ನಿಲುಗಡೆ ಕಲ್ಪಿಸಲಾಗಿದೆ. ರೈಲು ಸಂಖ್ಯೆ 16226 03:50/03:51PM ಗಂಟೆಗೆ ಡೋರನಹಳ್ಳಿಗೆ ಆಗಮಿಸಿ, ನಿರ್ಗಮಿಸಲಿದೆ. ರೈಲು ಸಂಖ್ಯೆ 16221 (02:20/02:21PM) ಗಂಟೆಗೆ ಡೋರನಹಳ್ಳಿಗೆ ಆಗಮಿಸಿ/ನಿರ್ಗಮಿಸಲಿದೆ. ರೈಲು ಸಂಖ್ಯೆ 16222 (02:35/02:36PM) ಗಂಟೆಗೆ ಡೋರನಹಳ್ಳಿಗೆ ಆಗಮಿಸಿ/ನಿರ್ಗಮಿಸಲಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version