Site icon Vistara News

Roller Hockey Skating: 60ನೇ ರಾಷ್ಟ್ರೀಯ ರೋಲರ್ ಹಾಕಿ ಸ್ಕೇಟಿಂಗ್‌: ಉತ್ತರ ಕನ್ನಡ ಜಿಲ್ಲೆಯ ಕ್ರೀಡಾಪಟುಗಳಿಗೆ 4 ಪದಕ

Roller Hockey Skating

ಕಾರವಾರ: ಬೆಂಗಳೂರಿನಲ್ಲಿ ನಡೆದ 60ನೇ ರಾಷ್ಟ್ರೀಯ ರೋಲರ್ ಹಾಕಿ ಸ್ಕೇಟಿಂಗ್‌ನಲ್ಲಿ (Roller Hockey Skating) ಕರ್ನಾಟಕ ತಂಡದಿಂದ ಸ್ಪರ್ಧಿಸಿದ್ದ ಉತ್ತರ ಕನ್ನಡ ಜಿಲ್ಲೆಯ ಕ್ರೀಡಾಪಟುಗಳು 4 ಪದಕ ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ. 22 ರಾಜ್ಯಗಳಿಂದ ಹತ್ತು ಸಾವಿರ ಮಂದಿ ಸ್ಕೇಟ್ ಪಟುಗಳು ಭಾಗವಹಿಸಿದ್ದರು. ರೋಲರ್ ಸ್ಕೇಟಿಂಗ್ ಹಾಕಿಯಲ್ಲಿ ಕರ್ನಾಟಕ ತಂಡ 1 ಬೆಳ್ಳಿ ಮತ್ತು 3 ಕಂಚಿನ ಪದಕಗಳನ್ನು ಗಳಿಸಿದೆ.

ಕರ್ನಾಟಕದ ರೋಲರ್ ಸ್ಕೇಟಿಂಗ್ ಹಾಕಿಯ ವಿವಿಧ ವಯೋಮಾನದವರ ತಂಡದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಕೈಗಾ, ಶಿರಸಿ, ಯಲ್ಲಾಪುರ ಮತ್ತು ಮುಂಡಗೋಡಿನ 20 ಮಂದಿ ಸ್ಕೇಟ್ ಪಟುಗಳು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಜಿಲ್ಲೆಯ ಕ್ರೀಡಾಪಟುಗಳಿಗೆ ನಗರದ ಎನ್‌ಜಿಒ ಸಭಾ ಭವನದಲ್ಲಿ ಸನ್ಮಾನಿಸುವ ಮೂಲಕ ಅಭಿನಂದನೆ ಸಲ್ಲಿಸಲಾಯಿತು.

ಇದನ್ನೂ ಓದಿ | Go First Airlines: ಏರ್​ ಇಂಡಿಯಾ ಬೆನ್ನಲ್ಲೇ ಗೋ ಫಸ್ಟ್​ ಸಂಸ್ಥೆಗೂ10 ಲಕ್ಷ ರೂಪಾಯಿ ದಂಡ ವಿಧಿಸಿದ ಡಿಜಿಸಿಎ

ಈ ಅಭಿನಂದನಾ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸತೀಶ ಸೈಲ್ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಅವರು, ಕಾರವಾರದ ಸ್ಕೇಟಿಂಗ್ ಪಟುಗಳಿಗೆ ಉತ್ತಮ ಅಭ್ಯಾಸ ಮಾಡುವ ನಿಟ್ಟಿನಲ್ಲಿ ಸೂಕ್ತ ಕ್ರೀಡಾಂಗಣದ ಅವಶ್ಯಕತೆ ಇದೆ. ಅಂದಾಗ ಮಾತ್ರ ಕ್ರೀಡಾಪಟುಗಳು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊರಹೊಮ್ಮಲು ಸಾಧ್ಯವಾಗಲಿದೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಎಲ್ಲರ ಪ್ರೋತ್ಸಾಹ ಅಗತ್ಯವಿದ್ದು, ಮಕ್ಕಳ ತರಬೇತಿಗೆ ಅನುಕೂಲವಾಗಲು ಕಡಲ ತೀರದ ಪಕ್ಕದಲ್ಲಿ ಮೈದಾನ ಕಲ್ಪಿಸಲು ಅವಕಾಶ ನೀಡಬೇಕಿದೆ ಎಂದರು.

ಇದನ್ನೂ ಓದಿ | Backbone Health : ಬೆನ್ನು ಮೂಳೆಯ ಆರೋಗ್ಯ ಪಾಕಾಡಿಕೊಳ್ಳುವುದು ಹೇಗೆ?

ಮುಖ್ಯ ಅತಿಥಿ ನಗರಸಭಾ ಉಪಾಧ್ಯಕ್ಷ ಪ್ರಕಾಶ ನಾಯ್ಕ ಮಾತನಾಡಿ, ಇಂದಿನ ಮಕ್ಕಳ ಬೆನ್ನು ತಟ್ಟಿದರೆ ಮುಂದೆ ಜಗತ್ತನ್ನೇ ಆಳಬಹುದು. ಮುಂದಿನ ದಿನಗಳಲ್ಲಿ ಕಾರವಾರದ ಮಕ್ಕಳು ರಾಷ್ಟ್ರ ಮಟ್ಟದಲ್ಲಿ ಕಂಗೊಳಿಸಲಿ. ನಗರಸಭೆ ವತಿಯಿಂದ ಮಕ್ಕಳಿಗೆ ಸ್ಕೇಟಿಂಗ್ ತರಬೇತಿಗೆ ಅನುಕೂಲವಾಗುವಂತೆ ಅವಕಾಶ ಮಾಡಿಕೊಡುವ ಪ್ರಯತ್ನವನ್ನು ಮಾಡುತ್ತೇವೆ ಎಂದು ಭರವಸೆ ನೀಡಿದರು.

ವೇದಿಕೆಯಲ್ಲಿ ಸೀಮಾ ಪಾಟೀಲ್, ಪೋಷಕರಾದ ಸವಿತಾ ನಾಯ್ಕ, ಸ್ಟಾರ್ ಚಾಯ್ಸ್ ಡ್ಯಾನ್ಸ್ ಕ್ಲಾಸ್ ಸಂಸ್ಥಾಪಕ ರಾಜನ್ ಬಾನಾವಳಿಕರ್, ತರಬೇತುದಾರರಾದ ಮಂಜುನಾಥ, ಸಚಿನ್ ದೇಸಾಯಿ, ರೋಹಿದಾಸ ಬಾನಾವಳಿಕರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಹಿರಿಯ ಸ್ಕೇಟಿಂಗ್ ತರಬೇತುದಾರರಾದ ದಿಲೀಪ ಹಣಬರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರವಾರ, ಶಿರಸಿಯ ಸ್ಕೇಟ್ ಪಟುಗಳಿಗೆ ಈ ಸಂದರ್ಭದಲ್ಲಿ ಸನ್ಮಾನಿಸಿ ಪ್ರಶಸ್ತಿ ಪತ್ರ ನೀಡಲಾಯಿತು. ಸ್ಕೇಟ್ ಪಟುಗಳ ವತಿಯಿಂದ ಅವರ ಪಾಲಕರು ಸ್ಕೇಟಿಂಗ್ ಕ್ಲಬ್ ಸಂಸ್ಥಾಪಕ ದಿಲೀಪ್ ಹಣಬರ ಅವರನ್ನು ಸನ್ಮಾನಿಸಿ ಗೌರವಿಸಿದರು.

ಇದನ್ನೂ ಓದಿ | Designer Wedding Fashion : ಡ್ರೀಮ್‌ ಡಿಸೈನರ್‌ವೇರನ್ನು ತಾವೇ ವಿನ್ಯಾಸ ಮಾಡಿ ಮದುವೆಯಲ್ಲಿ ಧರಿಸಿದ ಖ್ಯಾತ ಡಿಸೈನರ್‌ ಮಸಾಬಾ ಗುಪ್ತಾ

Exit mobile version