Site icon Vistara News

ಕರ್ನಾಟಕ ಪಬ್ಲಿಕ್ ಶಾಲೆ ಸೀಲಿಂಗ್‌ ಕುಸಿತ; ಇಬ್ಬರು ಮಕ್ಕಳ ತಲೆಗೆ ಗಾಯ

ಚಾವಣಿ

ರಾಯಚೂರು: ಜಿಲ್ಲೆಯ ‌ಮಸ್ಕಿ ತಾಲೂಕಿನ ಪಿಡಬ್ಲ್ಯುಡಿ ಕ್ಯಾಂಪ್‌ನ ಕರ್ನಾಟಕ ಪಬ್ಲಿಕ್ ಶಾಲೆಯ ಸೀಲಿಂಗ್‌ ಕುಸಿದು ಇಬ್ಬರು ವಿದ್ಯಾರ್ಥಿಗಳ ತಲೆಗೆ ಗಾಯಗಳಾಗಿವೆ.

ಅಪ್ಪಾಜಿ (7) ಮತ್ತು ನಮನ್ (8) ಗಾಯಗೊಂಡ ವಿದ್ಯಾರ್ಥಿಗಳು. ಸುಮಾರು 6 ವರ್ಷಗಳ ಹಿಂದೆ ಶಾಲಾ‌ ಕೊಠಡಿ ನಿರ್ಮಿಸಲಾಗಿತ್ತು. ಆದರೆ, ಅದು ಇದ್ದಕ್ಕಿದ್ದಂತೆ ಕುಸಿತ ಕಂಡಿದೆ. ಮಳೆಯಿಂದ ತೇವಾಂಶ ಹೆಚ್ಚಾಗಿ ಸೀಲಿಂಗ್‌ ಕುಸಿದಿರಬಹುದು ಎಂದು ಅಂದಾಜಿಸಲಾಗಿದೆ. ತರಗತಿ ಕೊಠಡಿಯ ಬಾಗಿಲ ಬಳಿ ಸೀಲಿಂಗ್‌ ಕುಸಿದಿದ್ದರಿಂದ ಮೊದಲ ಸಾಲಿನಲ್ಲಿ ‌ಕುಳಿತಿದ್ದ ಇಬ್ಬರು ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ. ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ಇದನ್ನೂ ಓದಿ | Chain snatching | ಗಮನ ಬೇರೆಡೆ ಸೆಳೆದು ಕಳ್ಳತನಕ್ಕೆ ಯತ್ನಿಸಿದ ಸರಗಳ್ಳರ ಕೈಯಿಂದ ಮಾಂಗಲ್ಯ ಉಳಿಸಿಕೊಂಡ ಮಹಿಳೆ

Exit mobile version