ಬೆಂಗಳೂರು: ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಗುಣಮಟ್ಟ ಅಭಿವೃದ್ಧಿ ಚಿಂತನ ಜಂಟಿ ಸಮಿತಿ ವತಿಯಿಂದ ಜು.16 ರಂದು ಮಂಗಳವಾರ ಬೆಳಿಗ್ಗೆ 10 ಗಂಟೆಗೆ ನಗರದ ಶಾಸಕರ ಭವನ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಗುಣಮಟ್ಟ ಸುಧಾರಿಸಲು “ದುಂಡು ಮೇಜಿನ ಸಭೆ” (Round table meeting) ಏರ್ಪಡಿಸಲಾಗಿದೆ.
ಇದನ್ನೂ ಓದಿ: Tata Motors: ಟಾಟಾ ಮೋಟರ್ಸ್‌ನಿಂದ ‘ಆಟೋಮೋಟಿವ್ ಸ್ಕಿಲ್ ಲ್ಯಾಬ್ಸ್’ ಮೂಲಕ 4000 ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ
ಕರ್ನಾಟಕ ವಿಧಾನ ಪರಿಷತ್‌ನ ಸಭಾಪತಿ ಬಸವರಾಜ್ ಶಿವಲಿಂಗಪ್ಪ ಹೊರಟ್ಟಿ ಸಭೆಯನ್ನು ಉದ್ಘಾಟಿಸುವರು. ಗೌರವ ಮುಖ್ಯ ಅತಿಥಿಯಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಪಾಲ್ಗೊಳ್ಳುವರು. ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಅಧ್ಯಕ್ಷತೆ ವಹಿಸುವರು.
ಇದನ್ನೂ ಓದಿ: Grassroot Boxing: ಬೆಂಗಳೂರಿನಲ್ಲಿ ರೋಮಾಂಚನಗೊಳಿಸಿದ ಬಾಕ್ಸಿಂಗ್ ಪಂದ್ಯ
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಶಶಿಲ್ ಜಿ. ನಮೋಶಿ, ಎಸ್.ಎಲ್. ಭೋಜೇಗೌಡ, ಡಾ.ಚಂದ್ರಶೇಖರ್ ಬಸವರಾಜ ಪಾಟೀಲ್, ಎಸ್.ವಿ.ಸಂಕನೂರ, ಹನುಮಂತ್ ನಿರಾಣಿ, ಪ್ರಕಾಶ್ ಹುಕ್ಕೇರಿ, ಚಿದಾನಂದ್ ಎಂ.ಗೌಡ, ಮಧು ಜಿ. ಮಾದೇಗೌಡ, ಡಿ.ಟಿ. ಶ್ರೀನಿವಾಸ್, ರಾಮೋಜಿಗೌಡ, ಡಾ. ಧನಂಜಯ ಸರ್ಜಿ, ವಿವೇಕಾನಂದ ಹಾಗೂ ಶಿಕ್ಷಣ ತಜ್ಞ ಪ್ರೊ. ಗಣೇಶ್ ಭಟ್, ಪ್ರೊ. ಬಿ.ರಮೇಶ್ ಪಾಲ್ಗೊಳ್ಳಲಿದ್ದಾರೆ ಎಂದು ಕೆ.ಪಿ.ಎಂ.ಟಿ.ಸಿ.ಸಿ. ಸಂಚಾಲಕ ಡಿ.ಶಶಿಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.