Site icon Vistara News

Shivamogga News: ಹಿಂದು, ಹಿಂದುತ್ವ ದೇಶಕ್ಕೆ ಅನಿವಾರ್ಯ: ಆರ್‌ಎಸ್‌ಎಸ್‌ ಜ್ಯೇಷ್ಠ ಪ್ರಚಾರಕ ಸು.ರಾಮಣ್ಣ

Shivamogga News

#image_title

ಶಿವಮೊಗ್ಗ: ನಗರದ (Shivamogga News) ಕರ್ನಾಟಕ ಸಂಘದಲ್ಲಿ ಭಾನುವಾರ ವಿಕ್ರಮ ವಾರಪತ್ರಿಕೆಯಿಂದ ಸುಂದರ ಮಲೆನಾಡಿನ ಧೀಮಂತ ಅರಸರು ಕಾಫಿ ಟೇಬಲ್ ಬುಕ್‌ ಲೋಕಾರ್ಪಣೆ ಮತ್ತು ಮಲೆನಾಡಿನ ಅರಸು ಮನೆತನಗಳ ಕುರಿತು ರಾಜ್ಯಮಟ್ಟದ ವಿಚಾರ ಸಂಕಿರಣ ನಡೆಯಿತು.

ಸಾಗರದ ಹಿರಿಯ ಇತಿಹಾಸ ತಜ್ಞ ಡಾ.ಕೆಳದಿ ಗುಂಡಾ ಜೋಯಿಸ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಸಮಾರೋಪದಲ್ಲಿ ಕಾಫಿ ಬುಕ್‌ ಟೇಬಲ್‌ ಅನ್ನು ವಿಧಾನ ಪರಿಷತ್‌ ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರು ಲೋಕಾರ್ಪಣೆಗೊಳಿಸಿದರು. ಮಲೆನಾಡಿನ ಧೀಮಂತ ಅರಸರು ಡಿಜಿಟಲ್ ಟೀಸರ್ ಅನ್ನು ಸಂಸದ ಬಿ.ವೈ.ರಾಘವೇಂದ್ರ ಬಿಡುಗಡೆ ಮಾಡಿದರು. ಬೆಳಗ್ಗೆ 11 ಗಂಟೆಯಿಂದ ಸಂಜೆ 4.15ರವರೆಗೆ ವಿವಿಧ ಚಿಂತನಾ ಗೋಷ್ಠಿಗಳು ನಡೆದವು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಶಾಸನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ರಮೇಶ ಯತಗಲ್ ವಿಚಾರ ಸಂಕಿರಣದ ಸರ್ವಾಧ್ಯಕ್ಷತೆ ವಹಿಸಿದ್ದರು.

ಆರ್‌ಎಸ್‌ಎಸ್‌ ಜ್ಯೇಷ್ಠ ಪ್ರಚಾರಕ ಸು.ರಾಮಣ್ಣ ಮಾತನಾಡಿ, ಆದಿ ಶಂಕಚಾರ್ಯರನ್ನು ಮಲೆನಾಡಿನ ಶೃಂಗೇರಿ ಸೆಳೆದಿತ್ತು. ಇದೀಗ ಮಲೆನಾಡು ತನ್ನದೇ ಆದ ವೈಶಿಷ್ಟ್ಯಗಳಿಂದ ಇಡೀ ನಾಡಿನ ಗಮನ ಸೆಳೆದಿದ್ದು, ಹಿಂದುತ್ವದ ಭದ್ರಕೋಟೆಯಲ್ಲಿ ಶಿವಮೊಗ್ಗ ಬೆಳೆಯುತ್ತಿದೆ. ಮಾಧ್ಯಮ ಉದ್ಯಮಕ್ಕಾಗಿ ಬಳಕೆ ಆಗಿದ್ದಲ್ಲ, ವಾಲ್ಮೀಕಿ ರಾಮಾಯಣ ಬರೆದದ್ದು ಉದ್ಯಮಕ್ಕಾಗಿ ಅಲ್ಲ. ಮಹಾಭಾರತ ಕರ್ತೃ ಉದ್ದೇಶ ಉದ್ಯಮವಾಗಿರಲಿಲ್ಲ. ಕಾಲದ ವ್ಯಾಮೋಹಕ್ಕೆ ಒಳಗಾಗದೆ ಇರುವ ಮಾಧ್ಯಮ ಬೇಕು. ಹಿಂದು, ಹಿಂದುತ್ವ ದೇಶಕ್ಕೆ ಅನಿವಾರ್ಯ. ಜಗತ್ತು ನಮ್ಮ ದೇಶದ ಹಿಂದುತ್ವ ನೋಡುತ್ತಿದೆ ಎಂದು ಹೇಳಿದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಮಲೆನಾಡಿನ ಒಂದೊಂದು ಕಲ್ಲು ಶಾಸನ ಹೇಳುತ್ತದೆ. ಬಿದನೂರು ಕೋಟೆ ಅಭಿವೃದ್ಧಿಗೆ 2 ಕೋಟಿ ರೂ ಬಿಡುಗಡೆಯಾಗಿದೆ. ಎಲ್ಲ ಶಾಸನಗಳ ಸಂರಕ್ಷಣೆಗೆ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ | Karnataka Election 2023: ಒಬ್ಬ ಸಿದ್ದರಾಮಯ್ಯರನ್ನು ಹತ್ಯೆ ಮಾಡಿ ಕಾಂಗ್ರೆಸ್ಸನ್ನು ತಡೆಯೋಕೆ ಆಗಲ್ಲ, ತಾಕತ್ತಿದ್ದರೆ ಬಂದು ಕೊಲ್ಲಿ: ಸುರ್ಜೇವಾಲಾ

ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ ಮಾತನಾಡಿ, ಹಲವರಿಗೆ ತಮ್ಮತನದ ಬಗ್ಗೆಯೇ ಗೊತ್ತಿಲ್ಲ. ನಮ್ಮತನದ ಬಗ್ಗೆ ಕೀಳರಿಮೆ ಇರುತ್ತದೆ ಎಂದು ಹೇಳಿದರು. ಕೆಳದಿ ಅರಸು ಮನೆತನ ಕುರಿತು ಸಾಗರದ ಹಿರಿಯ ಇತಿಹಾಸ ಸಂಶೋಧಕ ಡಾ.ಕೆಳದಿ ವೆಂಕಟೇಶ ಜೋಯಿಸ್ ಮಾತನಾಡಿದರು. ಹಿರಿಯ ಸಾಹಿತಿ ನಾ.ಡಿಸೋಜಾ, ವಿಕ್ರಮ ಸಂಪಾದಕ ನಾಗರಾಜ್, ಎಂಎಲ್‌ಸಿ ಡಿ.ಎಸ್. ಅರುಣ್ ಉಪಸ್ಥಿತರಿದ್ದರು.

Exit mobile version