Site icon Vistara News

ದಾವಣಗೆರೆಯಲ್ಲಿ ಪೊಲೀಸ್ ವಾಹನದಿಂದ ಜಿಗಿದು ಮೃತಪಟ್ಟ ಆರ್​ಟಿಐ ಕಾರ್ಯಕರ್ತ

RTI Activist Harish Halli Died

ದಾವಣಗೆರೆ: ಕೋಟ್ಯಂತರ ರೂಪಾಯಿ ಭೂ ಅಕ್ರಮದ ಆರೋಪಿಯಾಗಿದ್ದ ಹರೀಶ್​ ಹಳ್ಳಿ (Harish Halli) ಎಂಬಾತ ಪೊಲೀಸ್ ಕಾರಿ (Police Vehicle)ನಿಂದ ಜಿಗಿದು ಮೃತಪಟ್ಟಿದ್ದಾನೆ. ತನ್ನ ಪತಿಯನ್ನು ಪೊಲೀಸರು ಹತ್ಯೆ ಮಾಡಿದ್ದಾರೆ ಎಂದು ಆತನ ಪತ್ನಿ ಆರೋಪಿಸಿದ್ದಾರೆ. ಈ ಘಟನೆ ನಡೆದಿದ್ದು ದಾವಣಗೆರೆಯಲ್ಲಿ (Davanagere News).

ಈ ಹರೀಶ್ ಹಳ್ಳಿ ಆರ್​ಟಿಐ ಕಾರ್ಯಕರ್ತನಾಗಿದ್ದು, ಒಟ್ಟು 2 ಕೋಟಿ ರೂ.ಬೆಲೆಯ ಮೂರು ನಿವೇಶನಗಳನ್ನು ಅಕ್ರಮವಾಗಿ ನೋಂದಣಿ ಮಾಡಿಸಿಕೊಂಡ ಆರೋಪ ಎದುರಿಸುತ್ತಿದ್ದ. ಈ ಭೂ ಅಕ್ರಮ ಕೇಸ್​​ನಡಿ ಹರೀಶ್ ಹಳ್ಳಿ, ಸಬ್​ ರಿಜಿಸ್ಟ್ರಾರ್ ಆರ್.ಎಲ್.ವೀಣಾ ಸೇರಿ ಒಟ್ಟು ಐವರ ವಿರುದ್ಧ ಎಫ್​ಐಆರ್ ದಾಖಲಾಗಿತ್ತು. ಈತ ಸೈಟ್​ನ್ನು ತನ್ನದಾಗಿಸಿಕೊಳ್ಳಲು ನಕಲಿ ಮಾಲೀಕರನ್ನೇ ಸೃಷ್ಟಿಸಿದ್ದ. ನಕಲಿ ಆಧಾರ್​ ಕಾರ್ಡ್​ ಮಾಡಿಸಿಕೊಂಡಿದ್ದ ಎಂದೂ ಪೊಲೀಸರು ಹೇಳಿದ್ದಾರೆ.

ಭೂ ಅಕ್ರಮದ ಕೇಸ್​​ನಲ್ಲಿ ಎ 1 ಆರೋಪಿಯಾದ ಹರೀಶ್​ನನ್ನು ಮೇ 27ರ ಮಧ್ಯರಾತ್ರಿ 12 ಗಂಟೆ ಹೊತ್ತಿಗೆ ಪೊಲೀಸರು ಬಂಧಿಸಿ, ವಿಚಾರಣೆಗೆಂದು ಕರೆದುಕೊಂಡು ಬರುವಾಗ ಆತ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಫ್ಲೈಓವರ್​ ಮೇಲೆ ಪೋಲೀಸ್ ವಾಹನ ಹೋಗುತ್ತಿದ್ದಾಗ ಈತ ಜಿಗಿದಿದ್ದಾನೆ. ತೀವ್ರವಾಗಿ ಪೆಟ್ಟು ಬಿದ್ದು ಗಾಯಗೊಂಡಿದ್ದ ಅವನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಆದರೆ ಆತನ ಪತ್ನಿ ಕಿಡಿಕಾರಿದ್ದಾರೆ. ನನ್ನ ಪತಿಯನ್ನು ಪೊಲೀಸರು ಮಧ್ಯರಾತ್ರಿ ಕರೆದುಕೊಂಡು ಹೋಗಿ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಹರಿಶ್​ ಹಳ್ಳಿಯನ್ನು ಕರೆದುಕೊಂಡು ಹೋದ ಗಾಂಧಿನಗರ ಪೊಲೀಸ್​ ಠಾಣೆ ಪಿಎಸ್​ಐ ಮತ್ತು ಚಾಲಕನ ವಿರುದ್ಧ ದೂರು ನೀಡಿದ್ದಾರೆ.

ಅಪ್ಪ ಹೇಳೋದೇನು?
ಪೊಲೀಸರೇ ನನ್ನ ಮಗನನ್ನು ಕೊಲೆ ಮಾಡಿದ್ದಾರೆ. ಮುಂಜಾನೆ ನಮಗೆ ಫೋನ್​ ಮಾಡಿ ವಿಷಯ ತಿಳಿಸಿದ್ದಾರೆ. ಪೊಲೀಸರೇ ಕೊಲೆ ಮಾಡಿ ಆಸ್ಪತ್ರೆಗೆ ತಂದು ಹಾಕಿದ್ದಾರೆ. ಈಗ ಜಂಪ್​ ಮಾಡಿದ, ಅದೂ ಇದು ಎಂದು ಕಥೆ ಕಟ್ಟುತ್ತಿದ್ದಾರೆ ಎಂದು ಮೃತ ಹರೀಶ್ ಹಳ್ಳಿ ತಂದೆ ಆರೋಪಿಸಿದ್ದಾರೆ. ವಾಹನದಲ್ಲಿ ಅವನ ಅಕ್ಕ-ಪಕ್ಕ ಪೊಲೀಸರೇ ಕುಳಿತಿದ್ದರು. ಅಂದಮೇಲೆ ಅವನು ಹೇಗೆ ಕಾರಿನಿಂದ ಜಂಪ್​ ಮಾಡಿದ ಎಂದೂ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:Illegal Mining | ಕೊಪ್ಪಳದಲ್ಲಿ ನೀರಾವರಿ ಭೂಮಿಯಲ್ಲಿ ಅಕ್ರಮ ಗಣಿಗಾರಿಕೆ, ಸಚಿವರಿಂದ ಕ್ರಮ ಕೈಗೊಳ್ಳುವ ಭರವಸೆ

Exit mobile version