Site icon Vistara News

Sadanandotsava : ಸರಳ ಸಜ್ಜನ ರಾಜಕಾರಣಿ ಸದಾನಂದ ಗೌಡ; ಸಿಎಂ ಬಸವರಾಜ ಬೊಮ್ಮಾಯಿ ಬಣ್ಣನೆ

sadanandotsava

#image_title

ಬೆಂಗಳೂರು: ನಾಡಿನ ಸರಳ ಸಜ್ಜನ ರಾಜಕಾರಣಿ ಹಾಗೂ ನಾಡಿನ ಬಗ್ಗೆ ಅಪಾರ ಕಾಳಜಿಯಿರುವ ಚಾಣಾಕ್ಷ ರಾಜಕಾರಣಿ ಡಿ.ವಿ. ಸದಾನಂದ ಗೌಡ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣಿಸಿದ್ದಾರೆ. ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾಲಿ ಸಂಸದರಾದ ಡಿ.ವಿ. ಸದಾನಂದ ಗೌಡ ಅವರ 70ನೇ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸದಾನಂದೋತ್ಸವ (Sadanandotsava) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ʻʻಅವರಂತೆ ಸದಾ ಆನಂದವಾಗಿರುವುದು ಕಷ್ಟದ ಕೆಲಸ. ಕ್ಲೇಶ, ದ್ವೇಷ ಇಲ್ಲದ ಸ್ವಚ್ಛ ಹೃದಯದವರು ಮಾತ್ರ ಆನಂದದಿಂದಿರಲು ಸಾಧ್ಯ. ಸದಾ ಆನಂದವಾಗಿರುವುದೇ ದೊಡ್ಡ ಸಾಧನೆ. ಅದು ಅವರಿಗೆ ದೇವರ ಆಶೀರ್ವಾದʼʼ ಎಂದರು ಬೊಮ್ಮಾಯಿ.

ಡಿ.ವಿ. ಸದಾನಂದ ಗೌಡರ 70ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಸಿಎಂ ಅಭಿನಂದನೆ

ಇತಿಹಾಸದಲ್ಲಿ ಉಳಿದಿದ್ದಾರೆ ಸದಾನಂದ ಗೌಡರು

ʻʻಉತ್ಸಾಹದಿಂದ ಕೆಲಸ ಮಾಡುವ ಅವರು ವಾಸ್ತವಾಂಶದ ಮೇಲೆ ಆಡಳಿತ ಮಾಡಿದವರು. ಕೃಷ್ಣಾ ಮೇಲ್ದಂಡೆ ಯೋಜನೆಯ 3 ನೇ ಹಂತದ ಅನುಮೋದನೆ ನೀಡುವ ಮಹತ್ವದ ಘಟ್ಟ. ಅದನ್ನು ಕೇಂದ್ರ ಸಚಿವ ಸಂಪುಟದಲ್ಲಿ ಅನುಮೋದನೆ ಮಾಡಿಸಿ ಇತಿಹಾಸದಲ್ಲಿ ಉಳಿದಿದ್ದಾರೆʼʼ ಎಂದು ಬೊಮ್ಮಾಯಿ ಹೇಳಿದರು.

ಜನಪ್ರಿಯ ಸಂಸದರು, ಪಾದರಸದಂತೆ ಓಡಾಡುವವರು

ʻʻಉತ್ತರ ಕರ್ನಾಟಕದ ಜನ ಸದಾ ಸದಾನಂದಗೌಡರನ್ನು ನೆನಸುತ್ತಾರೆ. ಅವರ ಸ್ನೇಹ ಸಂಪರ್ಕಕ್ಕೆ ಬಂದವರು ಸದಾ ಕಾಲ ಅವರೊಂದಿಗಿರುತ್ತಾರೆ. ಪಾದರಸದಂತೆ ಓಡಾಡಿ ಎಲ್ಲೆಡೆ ಸುತ್ತಿ ಜನಪ್ರಿಯ ಲೋಕಸಭಾ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಕೇಂದ್ರ ಸಚಿವರಾಗಿ ಕೋವಿಡ್ ಸಂದರ್ಭದಲ್ಲಿ ಔಷಧಿ, ಲಸಿಕೆ ಕೊರತೆ ಇದ್ದಾಗ ಕೂಡಲೇ 24 ಗಂಟೆಗಳಲ್ಲಿ ವ್ಯವಸ್ಥೆ ಮಾಡಿದರು. ರೈತರಿಗೆ ಯೂರಿಯಾ ಸಮಸ್ಯೆ ಎದುರಾದಾಗ ಕೊರತೆಯಾಗದಂತೆ ಸರಬರಾಜು ಮಾಡಿದರು. ಬೆಂಗಳೂರು ಅಭಿವೃದ್ಧಿಗೆ ಕಂಕಣ ಬದ್ಧರಾಗಿ ಕೆಲಸ ಮಾಡುತ್ತಿದ್ದಾರೆ. ನೂರು ವರ್ಷ ಬಾಳಲಿʼʼ ಎಂದು ಶುಭಾಶಯಗಳನ್ನು ತಿಳಿಸಿ ಅವರ ಮಾರ್ಗದರ್ಶನ ಸದಾ ನಮಗೆ ಸಿಗಲಿ ಎಂದರು ಮುಖ್ಯಮಂತ್ರಿ.

ಇದನ್ನೂ ಓದಿ : Science gallery : ಮೆದುಳಿನ ಸಾಮರ್ಥ್ಯದ ಗರಿಷ್ಠ ಬಳಕೆಗೆ ಸಂಶೋಧನೆ ನಡೆಯಲಿ ಎಂದ ಸಿಎಂ ಬಸವರಾಜ ಬೊಮ್ಮಾಯಿ

Exit mobile version