ಸಾಗರ: ಪದವಿ ವಿದ್ಯಾರ್ಥಿಗಳ ಪಾಠದ ಅವಧಿಯನ್ನು ಕಡಿತಗೊಳಿಸಿರುವ ನೀತಿಯನ್ನು ಖಂಡಿಸಿ ಸೋಮವಾರ (ಫೆ.೨೦) ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‍ನಿಂದ ಉಪ ವಿಭಾಗಾಧಿಕಾರಿಗಳ ಕಚೇರಿಗೆ ಮನವಿ (memorandum) ಸಲ್ಲಿಸಲಾಯಿತು.
ಪದವಿ ವಿದ್ಯಾರ್ಥಿಗಳ ವರ್ಕಿಂಗ್ ದಿನಗಳು ಹಿಂದೆ ನಾಲ್ಕು ತಿಂಗಳು ಇತ್ತು. ವಿಶ್ವವಿದ್ಯಾಲಯ ನಾಲ್ಕು ತಿಂಗಳ ಅವಧಿಯಲ್ಲಿ ಒಂದು ತಿಂಗಳು ಕಡಿತಗೊಳಿಸಿದ್ದು ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ. ಖಾಸಗಿ ಕಾಲೇಜಿನಲ್ಲಿ ಪಾಠ ಮುಗಿದಿರುತ್ತದೆ. ಆದರೆ. ಸರ್ಕಾರಿ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆ ಸೇರಿದಂತೆ ಬೇರೆ ಬೇರೆ ಕಾರಣದಿಂದ ಪಾಠ ಪೂರ್ಣ ಮುಗಿದಿಲ್ಲ. ಬಹುತೇಕ ಸರ್ಕಾರಿ ಕಾಲೇಜಿನಲ್ಲಿ ಶೇ. 50ರಷ್ಟು ಮಾತ್ರ ಪಾಠ ಮುಗಿದಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ: Wipro : ವಿಪ್ರೊದಲ್ಲಿ ನೇಮಕಾತಿ ವಿಳಂಬ, ವಾರ್ಷಿಕ ಸಂಬಳದ ಆಫರ್ 6.5 ಲಕ್ಷ ರೂ.ಗಳಿಂದ 3.5 ಲಕ್ಷಕ್ಕೆ ಕಡಿತ
ಏಕಾಏಕಿ ವಿದ್ಯಾರ್ಥಿಗಳ ಸಲಹೆಯನ್ನು ಸಹ ಕೇಳದೆ ಅವಧಿಯನ್ನು ಕಡಿತಗೊಳಿಸಿರುವ ಕ್ರಮ ಅವೈಜ್ಞಾನಿಕವಾಗಿದೆ. ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ಮಾಡುತ್ತಿರುವುದು ಸರಿಯಲ್ಲ. ಆದ್ದರಿಂದ ಹಿಂದೆ ಇರುವಂತೆ ನಾಲ್ಕು ತಿಂಗಳು ವರ್ಕಿಂಗ್ ದಿನ ಮುಂದುವರಿಸಿಕೊಂಡು ಹೋಗಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯನ್ನು ಅಭಿಷೇಕ್ ಎಂ. ಶೆಟ್ಟಿ, ಅನುಷಾ, ಅಕ್ಷಯ್, ದೇವೇಂದ್ರ ವ್ಯಾಸ, ಸುಮಂತ್, ಚಂದನ್ ಇನ್ನಿತರರು ಹಾಜರಿದ್ದರು.
ಇದನ್ನೂ ಓದಿ: SK Bhagavan : ಆತ್ಮಕತೆ ಬರೆಯುತ್ತಿದ್ದ ಭಗವಾನ್; ಪ್ರಕಟಣೆಗೆ ಮುನ್ನವೇ ಇನ್ನಿಲ್ಲವಾದರು