ಸಾಗರ: ಸಾಗರ ಉಪ ವಿಭಾಗದ ಉಪ ವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಪಲ್ಲವಿ ಸಾತೇನಹಳ್ಳಿ ಅವರು 2023ನೇ ಸಾಲಿನ ರಾಜ್ಯ ಮಟ್ಟದ ಬೆಸ್ಟ್ ಎಲೆಕ್ಟೋರಲ್ ರಿಜಿಸ್ಟ್ರೇಶನ್ ಆಫೀಸರ್ (ಮತದಾರರ ನೋಂದಣಿ ಅಧಿಕಾರಿ) ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಚುನಾವಣಾ ಆಯೋಗವು ಚುನಾವಣಾ ಸಂಬಂಧಿತ ಕಾರ್ಯ ಚಟುವಟಕೆಯಲ್ಲಿ ರಾಜ್ಯದಲ್ಲಿ ಉತ್ತಮ ನಿರ್ವಹಣೆ ತೋರಿದ ತಲಾ ಒಬ್ಬರು ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್ ಗ್ರೇಡ್ನ ಅಧಿಕಾರಿಗಳನ್ನು ಆಯ್ಕೆ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಇವರ ಆಯ್ಕೆ ಆಗಿದೆ.
ರಾಜ್ಯದ ಹಲವು ಉಪ ವಿಭಾಗಾಧಿಕಾರಿಗಳ ಪೈಕಿ ಶಿವಮೊಗ್ಗ ಜಿಲ್ಲೆಗೆ ಬೆಸ್ಟ್ ಎಲೆಕ್ಟೋರಲ್ ರಿಜಿಸ್ಟ್ರೇಶನ್ ಆಫೀಸರ್ ಪ್ರಶಸ್ತಿ ಇವರಿಗೆ ಲಭ್ಯವಾಗಿದೆ. ಜ.25ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಯೋಜಿಸಲಾಗಿದೆ.