Site icon Vistara News

Sagara News: ಫೆ.4ರಂದು 390 ರೈತರಿಗೆ ಬಗರ್‌ ಹುಕುಂ ಹಕ್ಕುಪತ್ರ ವಿತರಣೆ: ಶಾಸಕ ಹಾಲಪ್ಪ

MLA Halappa sagara

#image_title

ಸಾಗರ: ಕಂದಾಯ ಇಲಾಖೆಯ ವತಿಯಿಂದ ಧ್ವಜಸ್ತಂಭ ಪಕ್ಕದ ಆವರಣದಲ್ಲಿ ಶನಿವಾರ (ಫೆ.4) ಮಧ್ಯಾಹ್ನ 3 ಗಂಟೆಗೆ 390 ರೈತರಿಗೆ ಬಗರ್‌ ಹುಕುಂ ಹಕ್ಕುಪತ್ರ ನೀಡಲಾಗುತ್ತದೆ ಎಂದು ಶಾಸಕ ಎಚ್. ಹಾಲಪ್ಪ ಹರತಾಳು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ (ಫೆ.೩) ಮಾತನಾಡಿದ ಅವರು, ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ಚುನಾಯಿತ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.

ಇದನ್ನೂ ಓದಿ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಈ ಬಜೆಟ್‌ನಲ್ಲಿ 25 ಕೋಟಿ ಮೀಸಲಿಡಿ: ಸಿಎಂಗೆ ನಾಡೋಜ ಡಾ. ಮಹೇಶ ಜೋಶಿ ಮನವಿ

ತಾಲೂಕಿನಲ್ಲಿ ಬಗರ್‌ ಹುಕುಂ ಅಡಿ ಸಾವಿರಾರು ಅರ್ಜಿಗಳು ಬಂದಿದ್ದರೂ, ಅವುಗಳ ಪೈಕಿ ಮೊದಲ ಹಂತದಲ್ಲಿ 390 ರೈತರಿಗೆ ಹಕ್ಕುಪತ್ರ ನೀಡಲಾಗುತ್ತಿದೆ. ಇನ್ನು ಒಂದಷ್ಟು ಹಕ್ಕುಪತ್ರವನ್ನು ಸದ್ಯದಲ್ಲಿಯೇ ನೀಡಲಾಗುತ್ತದೆ. ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ನೀಡುವ ಸಂಬಂಧ ಬೆಂಗಳೂರಿನಲ್ಲಿ ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಮತ್ತೊಂದು ಸುತ್ತಿನ ಮಹತ್ವದ ಸಭೆ ನಡೆಸಲಾಗಿದೆ. ರೈತರ ಸ್ವಾಧೀನದಲ್ಲಿರುವ 9190 ಎಕರೆ ಜಮೀನಿಗೆ ಸಂಬಂಧಪಟ್ಟ ಕಡತವನ್ನು ತಕ್ಷಣ ದೆಹಲಿಗೆ ಕಳಿಸಿ ಮಂಜೂರಾತಿಗೆ ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಫೆ. 4 ಮತ್ತು 5ರಂದು ಕೆರೆ ಹಬ್ಬ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಡೆಸುವ ಸಂಬಂಧ ಅಗತ್ಯ ಸಿದ್ಧತೆ ನಡೆಸಲಾಗಿದೆ. ಪರಿಸರ ಉಳಿಸುವ ಜೊತೆಗೆ ಜಲದ ಬಗ್ಗೆ ಗೌರವಾಧಾರ ಮೂಡಿಸುವ ಸಾಗರಾರತಿ ಕಾರ್ಯಕ್ರಮ ಫೆ. 4ರಂದು ಸಂಜೆ 6ಕ್ಕೆ ಗಣಪತಿ ಕೆರೆ ಅಂಗಳದಲ್ಲಿ ಹಮ್ಮಿಕೊಳ್ಳಲಾಗಿದೆ. ಫೆ. 4 ಮತ್ತು 5ರಂದು ನಡೆಯುವ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಕೆ.ಎಸ್.ಗುರುಮೂರ್ತಿ, ಸಚಿವ ಸುನೀಲ್ ಕುಮಾರ್ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ. ವಿಶೇಷವಾಗಿ ಇಂದಿರಾ ಗಾಂಧಿ ಕಾಲೇಜಿನ 150ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ವೈವಿಧ್ಯಮಯ ನೃತ್ಯ ಪ್ರದರ್ಶನ ನೀಡಲಿದ್ದು, ಪ್ರಥಮ ದರ್ಜೆ ಕಾಲೇಜಿನ ತಂಡದಿಂದ ಕಂಸಾಳೆ ನೃತ್ಯ ಸೇರಿದಂತೆ ವಿವಿಧ ಕಾರ್ಯಕ್ರಮ ನಡೆಯಲಿದೆ ಎಂದರು.

ಇದನ್ನೂ ಓದಿ: Dattatreya Ramachandra Bendre: ಬೇಂದ್ರೆ ಕನ್ನಡ ನಾಡಿಗೆ ಸದಾ ಚೇತೋಹಾರಿ: ನಾಡೋಜ ಡಾ. ಮಹೇಶ ಜೋಶಿ

ಬಿಜೆಪಿ ನಗರ ಘಟಕದ ಅಧ್ಯಕ್ಷ ಕೆ.ಆರ್.ಗಣೇಶ ಪ್ರಸಾದ್ ಮಾತನಾಡಿ, ಫೆ. 4ರಂದು ಬೆಳಗ್ಗೆ 6.30ಕ್ಕೆ ಗಣಪತಿ ಕೆರೆ ಸ್ವಚ್ಛತಾ ಕಾರ್ಯಕ್ರಮ ನಡೆಯಲಿದೆ. ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಜೆ 5ಕ್ಕೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಮ್ಯಾಟ್ ಅಂಕಣದಲ್ಲಿ ಪುರುಷರು, ಮಹಿಳೆಯರಿಗೆ ಪ್ರತ್ಯೇಕವಾಗಿ ನಡೆಯಲಿರುವ ಪ್ರೊ ಕಬಡ್ಡಿ ಪಂದ್ಯಾವಳಿಯನ್ನು ಚಿತ್ರನಟ ವಿಜಯ ರಾಘವೇಂದ್ರ ಉದ್ಘಾಟಿಸಲಿದ್ದಾರೆ. ನಂತರ ವಿಶೇಷವಾದ ಆಹಾರ ಮೇಳಕ್ಕೆ ಚಾಲನೆ ಸಿಗಲಿದ್ದು, ಸಂಜೆ 6ಕ್ಕೆ ಸಾಗರಾರತಿ ಕಾರ್ಯಕ್ರಮ ನಡೆಯಲಿದೆ ಎಂದರು.

ಸಂಜೆ 6.30ರಿಂದ ಝೀ ಕನ್ನಡ ಖ್ಯಾತಿಯ ಹೇಮಂತ್ ಮತ್ತು ತಂಡದಿಂದ ಗಾಯನ ನಡೆಯಲಿದೆ. ಫೆ. 5ರಂದು ಕೆರೆ ಸ್ವಚ್ಛತೆ, ಪ್ರೊ ಕಬಡ್ಡಿ, ಆಹಾರ ಮೇಳ ಸಾಂಸ್ಕೃತಿಕ ಕಾರ್ಯಕ್ರಮ ಮುಂದುವರಿಯಲಿದ್ದು, ಸಂಜೆ 5.30ಕ್ಕೆ ದಿಯಾ ಹೆಗಡೆ ಮತ್ತ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ, ಡಿಕೆಡಿ ವಿಜೇತ ತಂಡದಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ ಎಂದರು. ನ

ಇದನ್ನೂ ಓದಿ: Kannada New Movie : ಬೆಳ್ಳಿತೆರೆಗೆ ಬರಲಿದೆ ಶ್ರೀ ವಾದಿರಾಜ ಸ್ವಾಮಿಗಳ ಜೀವನಾಧಾರಿತ ಕಥೆ

ಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್ ಮಾತನಾಡಿದರು. ಗೋಷ್ಠಿಯಲ್ಲಿ ದೇವೇಂದ್ರಪ್ಪ, ವಿನಾಯಕ ರಾವ್, ರಾಜೇಂದ್ರ ಆವಿನಹಳ್ಳಿ, ಸತೀಶ್ ಕೆ. ಹಾಜರಿದ್ದರು.

Exit mobile version