Site icon Vistara News

Sagara News: ಬಂಟರ ಯಾನೆ ನಾಡವರ ಸಮುದಾಯದ ಜನ ಶ್ರಮ ಜೀವಿಗಳು: ಶಾಸಕ ಎಚ್. ಹರತಾಳು ಹಾಲಪ್ಪ

Bantara Yane Nadavara MLA H Haratalu Halappa sagara

#image_title

ಸಾಗರ: ಬಂಟರ ಯಾನೆ ನಾಡವರು (Bantara Yane Nadavara) ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ವಾಸ ಮಾಡುತ್ತಿದ್ದಾರೆ. ಶ್ರಮ ಜೀವಿಗಳಾಗಿರುವ ಈ ಸಮಾಜದವರು ಎಲ್ಲ ಜನಾಂಗದ ಜತೆ ಸಾಮರಸ್ಯ ಸಂಬಂಧವನ್ನು ಹೊಂದಿದ್ದಾರೆ ಎಂದು ಶಾಸಕ ಎಚ್. ಹರತಾಳು ಹಾಲಪ್ಪ ತಿಳಿಸಿದರು.

ಇಲ್ಲಿನ ಶಿವಪ್ಪ ನಾಯಕ ನಗರದಲ್ಲಿ ಭಾನುವಾರ (ಫೆ.೨೬) ಬಂಟರ ಯಾನೆ ನಾಡವರ ಸಮಾಜದ ಕಾರ್ಯಕ್ರಮದಲ್ಲಿ ಅವರು ಅಭಿನಂದನೆ ಸ್ವೀಕರಿಸಿ ಮಾತನಾಡಿ, ಹೋಟೆಲ್ ಸೇರಿದಂತೆ ಬೇರೆ ಬೇರೆ ಉದ್ಯಮಗಳಲ್ಲಿ ತೊಡಗಿಸಿಕೊಂಡಿರುವ ಸಮುದಾಯವು ಶ್ರಮಿಕ ವರ್ಗಕ್ಕೆ ಮತ್ತೊಂದು ಉದಾಹರಣೆಯಾಗಿದೆ. ಸಾಗರ ಕ್ಷೇತ್ರ ವ್ಯಾಪ್ತಿಯಲ್ಲಿ ಸಮುದಾಯದ ಅಭಿವೃದ್ಧಿಗೆ ಸಹಕಾರ ನೀಡುವ ಕೆಲಸವನ್ನು ಮಾಡಿಕೊಂಡು ಬರುತ್ತಿದೆ. ಸಮುದಾಯ ನಿರ್ಮಿಸುತ್ತಿರುವ ಸಮುದಾಯ ಭವನಕ್ಕೆ ಸರ್ಕಾರದಿಂದ 30 ಲಕ್ಷ ರೂ. ಅನುದಾನ ನೀಡಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ಕಲ್ಪಿಸುತ್ತೇವೆ ಎಂದು ಭರವಸೆ ನೀಡಿದರು.

ಇದನ್ನೂ ಓದಿ: BMTC Recruitment 2023 : ಬಿಎಂಟಿಸಿಯಲ್ಲಿ 636 ಶಿಶಿಕ್ಷುಗಳ ನೇಮಕ; ಪರೀಕ್ಷೆ ಇಲ್ಲದೆ ಅಭ್ಯರ್ಥಿಗಳ ಆಯ್ಕೆ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, “ಸುಮಾರು 2.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸಮುದಾಯ ಭವನಕ್ಕೆ ಬೇರೆ ಬೇರೆ ಮೂಲಗಳಿಂದ 80 ಲಕ್ಷ ರೂ. ಅನುದಾನ ಬಂದಿದ್ದು, ಈ ಪೈಕಿ ಶಾಸಕರು 30 ಲಕ್ಷ ರೂಪಾಯಿ ನೀಡುವ ಮೂಲಕ ಜನಾಂಗದ ಮನವಿಗೆ ಸ್ಪಂದಿಸಿದ್ದಾರೆ. ಗಣಪತಿ ಕೆರೆ ಅಭಿವೃದ್ಧಿ, ಶಾಶ್ವತ ಧ್ವಜಸ್ತಂಭದಂತಹ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಶಾಸಕ ಹರತಾಳು ಹಾಲಪ್ಪ ಅವರು ಮಾದರಿಯಾಗಿ ಕೆಲಸ ಮಾಡಿದ್ದಾರೆ” ಎಂದರು.

ಕಾರ್ಯಕ್ರಮದಲ್ಲಿ ಟಿ.ಬಿ.ಮಂಜುನಾಥ ಶೆಟ್ಟಿ, ಜಯಶೀಲ ಶೆಟ್ಟಿ, ಕೆ.ಟಿ.ಶೆಟ್ಟಿ, ಮಹೇಂದ್ರ ಶೆಟ್ಟಿ, ರಘುಪತಿ ಶೆಟ್ಟಿ, ನಿತ್ಯಾನಂದ ಶೆಟ್ಟಿ, ನಾಗರಾಜ್, ವಸಂತಿ ಶೆಟ್ಟಿ, ಸುನಂದಾ ಶೆಟ್ಟಿ, ಶ್ರೀಧರ್ ಶೆಟ್ಟಿ ಹಾಜರಿದ್ದರು. ಪುಷ್ಪ ಶೆಟ್ಟಿ ಸ್ವಾಗತಿಸಿದರು. ಶ್ರೀನಿವಾಸ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಪ್ರಕಾಶ್ ಶೆಟ್ಟಿ ವಂದಿಸಿ, ಮಂಜುನಾಥ್ ಶೆಟ್ಟಿ ನಿರೂಪಿಸಿದರು.

ಇದನ್ನೂ ಓದಿ: Modi at Belagavi : 10.7 ಕಿ.ಮೀ. ಮೆಗಾ ಮೋದಿ ಶೋಗೆ ರೆಡಿಯಾಗಿದೆ ಬೆಳಗಾವಿ, ಸೇರಿದ್ದಾರೆ ಲಕ್ಷಾಂತರ ಅಭಿಮಾನಿಗಳು

Exit mobile version