ಸಾಗರ: ಕುವೆಂಪು ವಿಶ್ವವಿದ್ಯಾಲಯದ ಎಲ್ಲ ಸ್ನಾತಕ ವಿದ್ಯಾರ್ಥಿಗಳಿಗೆ ಏಕರೂಪ ಪರೀಕ್ಷಾ ವೇಳಾಪಟ್ಟಿ ಜಾರಿಗೊಳಿಬೇಕು ಮತ್ತು ಹೆಚ್ಚಿಸಿರುವ ಪರೀಕ್ಷಾ ಶುಲ್ಕವನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿ ಸೋಮವಾರ (ಜ.16) ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‍ನಿಂದ ಪ್ರತಿಭಟನೆ ನಡೆಸಿ ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕುವೆಂಪು ವಿಶ್ವವಿದ್ಯಾಲಯ ಹೊರಡಿಸಿರುವ ಪರೀಕ್ಷಾ ವೇಳಾಪಟ್ಟಿ ಅವೈಜ್ಞಾನಿಕವಾಗಿದ್ದು, ಕೊಠಡಿಗಳ ಕೊರತೆ, ಪಾಠ ಮುಗಿಯದಿರುವುದು ಮತ್ತು ಅಧ್ಯಾಪಕರು ಪರೀಕ್ಷಾ ಕಾರ್ಯದಲ್ಲಿ, ಮೌಲ್ಯಮಾಪನದಲ್ಲಿ ತೊಡಗಿಕೊಳ್ಳುವುದರಿಂದ ವಿಶ್ವವಿದ್ಯಾಲಯ ಹೊರಡಿಸಿರುವ ವೇಳಾಪಟ್ಟಿಯಲ್ಲಿ ಪರೀಕ್ಷೆ ನಡೆಸಲು ತೊಂದರೆ ಉಂಟು ಮಾಡುತ್ತಿದೆ. ಮಂಗಳೂರು ದಾವಣಗೆರೆ ವಿಶ್ವವಿದ್ಯಾಲಯ ಮಾದರಿಯಲ್ಲಿ ಏಕರೂಪ ವೇಳಾಪಟ್ಟಿಯನ್ನು ಜಾರಿಗೊಳಿಸುವ ಮೂಲಕ ಸ್ನಾತಕ ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಇದನ್ನೂ ಓದಿ | Robin Uthappa | ದುಬೈ ಟಿ20 ಲೀಗ್ನಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ರಾಬಿನ್ ಉತ್ತಪ್ಪ!
ಕುವೆಂಪು ವಿಶ್ವವಿದ್ಯಾಲಯದ ಎನ್.ಇ.ಪಿ. ಬ್ಯಾಚ್‍ನ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕವನ್ನು ಹೆಚ್ಚಿಸಿರುವ ನೀತಿ ಖಂಡನೀಯ. ದಿನಾಂಕ 30-03-202೨ ರಂದು ವಿವಿಧ ಕೋರ್ಸ್‍ಗಳ ಪರೀಕ್ಷಾ ಶುಲ್ಕವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಳ ಮಾಡಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿತ್ತು. ಇದಕ್ಕೆ ಸ್ಪಂದಿಸಿದ ವಿ.ವಿ. ಬಿ.ಕಾಂ. ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕವನ್ನು 300 ರೂ. ಕಡಿಮೆ ಮಾಡಿತ್ತು. ಇತರೆ ಕೋರ್ಸ್‍ಗಳ ಪರೀಕ್ಷಾ ಶುಲ್ಕ ಈತನಕ ಕಡಿಮೆ ಮಾಡಿಲ್ಲ. ಎನ್.ಇ.ಪಿ. ಬ್ಯಾಚ್‍ನ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕವು ಮಾರ್ಕ್ಸ್ ಕಾರ್ಡ್ ಶುಲ್ಕ ಸೇರಿದಂತೆ 1,000 ರೂ. ಆಸುಪಾಸು ಪಾವತಿ ಮಾಡಬೇಕಾಗಿದೆ. ಆದ್ದರಿಂದ ಎಲ್ಲ ಕೋರ್ಸ್‍ಗಳ ಪರೀಕ್ಷಾ ಶುಲ್ಕವನ್ನು ಕಡಿಮೆ ಮಾಡಬೇಕು ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಒತ್ತಾಯಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಅಭಿಷೇಕ್ ಎಂ. ಶೆಟ್ಟಿ, ಅಕ್ಷಯ್ ಮಾತನಾಡಿದರು. ಪ್ರತಿಭಟನೆಯಲ್ಲಿ ಅನುಷಾ, ದೇವೇಂದ್ರ, ನಂದನ್, ಶಿರಿಷ್, ಸಾತ್ವಿಕ್, ನಿಸರ್ಗ, ಕುಸುಮ, ಭರತ್, ರೋಷನ್ ಹಾಜರಿದ್ದರು.
ಇದನ್ನೂ ಓದಿ | ನನ್ನ ದೇಶ ನನ್ನ ದನಿ | ಭಾರತೀಯ ಇತಿಹಾಸದ ಧ್ರುವನಕ್ಷತ್ರ ಅಹಲ್ಯಾಬಾಯಿ ಹೋಳ್ಕರ್