Site icon Vistara News

Sagara News: ಸ್ವಸ್ಥ ಸಮಾಜ ನಿರ್ಮಾಣ ಜಾಗೃತಿಗಾಗಿ ದೇಶಿ ಸೇವಾ ಪ್ರತಿಷ್ಠಾನದಿಂದ ಮಿಸ್ಡ್ ಕಾಲ್ ಅಭಿಯಾನ

Missed Call Campaign Corruption-free Desi Seva Pratishthana

#image_title

ಸಾಗರ: ಸ್ವಸ್ಥ ಸಮಾಜ ನಿರ್ಮಾಣ ಜಾಗೃತಿಗಾಗಿ ದೇಶಿ ಸೇವಾ ಪ್ರತಿಷ್ಠಾನದಿಂದ ಮಿಸ್ಡ್ ಕಾಲ್ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಮುಂದಿನ ಚುನಾವಣೆಯಲ್ಲಿ ಪಾರದರ್ಶಕ ವ್ಯಕ್ತಿತ್ವವುಳ್ಳ ಜನಪ್ರತಿನಿಧಿಯನ್ನು ಆಯ್ಕೆ ಮಾಡಲು ಮೊ. 8217361423ಗೆ ಮಿಸ್ಡ್ ಕಾಲ್ ಕೊಡಬೇಕು ಎಂದು ಪ್ರತಿಷ್ಠಾನದ ಅಧ್ಯಕ್ಷ ಶ್ರೀಧರ ಮೂರ್ತಿ ತಿಳಿಸಿದರು.

ಬುಧವಾರ (ಫೆ.೧) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ವಿಧಾನಸಭಾ ಚುನಾವಣೆ ದೃಷ್ಟಿಯಲ್ಲಿರಿಸಿಕೊಂಡು ಸಾಗರ-ಹೊಸನಗರ ವ್ಯಾಪ್ತಿಯನ್ನು ಒಳಗೊಂಡಂತೆ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಅಭಿಯಾನದ ಮೂಲಕ ಬಂದ ಕರೆಗಳನ್ನು ಆಧರಿಸಿ ಚುನಾವಣೆಗೆ ಸ್ಪರ್ಧೆ ಮಾಡುವ ಅಭ್ಯರ್ಥಿ ಪಾರದರ್ಶಕವಾಗಿ ಆಡಳಿತ ನಡೆಸಬೇಕು. ಇಲ್ಲವಾದಲ್ಲಿ ಮೂರು ಅಥವಾ ನಾಲ್ಕು ವರ್ಷಕ್ಕೆ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂಬ ಹಕ್ಕೊತ್ತಾಯ ಮಂಡಿಸಲಾಗುತ್ತದೆ ಎಂದರು.

ಇದನ್ನೂ ಓದಿ | Union Budget 2023: ಬಜೆಟ್​ನಲ್ಲಿ ಘೋಷಿಸಲಾದ ಆದಾಯ ತೆರಿಗೆ ವಿನಾಯಿತಿ ಏನೇನು?

ಪ್ರಮುಖವಾಗಿ ಲಂಚ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತ, ಜಾತ್ಯತೀತ ಮನೋಭಾವ, ಎಲ್ಲ ವರ್ಗದವರಿಗೂ ನ್ಯಾಯ ಸಮ್ಮತ ಸೇವೆ, ಸರ್ವಧರ್ಮ ಸಮನ್ವಯತೆ, ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸುವುದು, ವಿದ್ಯಾರ್ಥಿ ಯುವ ಜನರಿಗೆ ಆದರ್ಶ ವ್ಯಕ್ತಿತ್ವ ರೂಪಿಸುವುದು, ಉದ್ಯೋಗ ಕಲ್ಪಿಸುವುದು, ಗ್ರಾಮೀಣ ಅಭಿವೃದ್ಧಿ, ಶರಾವತಿ ಮುಳುಗಡೆ ಸಂತ್ರಸ್ತರಿಗೆ ಪುನರ್ವಸತಿ, ಗ್ರಾಮ ಪಂಚಾಯಿತಿಗೆ ಹೆಚ್ಚಿನ ಅನುದಾನ, ಲಂಚ ಮುಕ್ತ ಸರ್ಕಾರಿ ಕಚೇರಿ, ಮಹಿಳಾ ಸಬಲೀಕರಣ ಸೇರಿದಂತೆ 18 ಅಂಶಗಳ ಬೇಡಿಕೆಯನ್ನು ಜನರ ಮುಂದಿಟ್ಟು, ಅದರ ಆಧಾರದ ಮೇಲೆ ಮಿಸ್ಡ್ ಕಾಲ್ ಅಭಿಯಾನ ನಡೆಸಲಾಗುತ್ತಿದ್ದು, ಸಾರ್ವಜನಿಕರು ಮಿಸ್ಡ್ ಕಾಲ್ ಮಾಡುವ ಮೂಲಕ ಅಭಿಯಾನದ ಯಶಸ್ಸಿಗೆ ಸಹಕಾರ ನೀಡಬೇಕು ಎಂದು ಹೇಳಿದರು.

ನಿವೃತ್ತ ಪೊಲೀಸ್ ಅಧಿಕಾರಿ ಜೆ.ಎಂ.ರಾಮಕೃಷ್ಣಪ್ಪ ಮಾತನಾಡಿ, ಪ್ರಸ್ತುತ ರಾಜಕಾರಣಕ್ಕೆ ಶುದ್ಧಹಸ್ತರ ಅಗತ್ಯ ಹೆಚ್ಚಿದೆ. ಮತದಾರರು ಸಹ ಹಣ, ಹೆಂಡ ಇನ್ನಿತರೆ‌ ವಿಷಯಗಳಿಗೆ ಮನಸೋಲದೆ ಅರ್ಹ ಅಭ್ಯರ್ಥಿಯನ್ನು ಬೆಂಬಲಿಸಬೇಕು. ಪ್ರಾಮಾಣಿಕ ವ್ಯಕ್ತಿ ರಾಜಕೀಯಕ್ಕೆ ಬಂದರೆ ರಾಜಕಾರಣ ವ್ಯವಸ್ಥೆ ಸುಧಾರಿಸುತ್ತದೆ. ಈ ನಿಟ್ಟಿನಲ್ಲಿ ಸ್ವಾಸ್ಥ್ಯ ಸಮಾಜ ನಿರ್ಮಾಣ ಜಾಗೃತಿ ಅಭಿಯಾನ ಅತ್ಯಂತ ಅಗತ್ಯವಾಗಿದೆ ಎಂದರು.

ಇದನ್ನೂ ಓದಿ | Hadapada Reservation: ಹಡಪದ ಸಮುದಾಯಕ್ಕೆ ಎಸ್‌ಸಿ ಮೀಸಲಾತಿ ನೀಡಿ: ಸಿಎಂ ಬೊಮ್ಮಾಯಿಗೆ ಮನವಿ

ಸುದ್ದಿಗೋಷ್ಠಿಯಲ್ಲಿ ದೇವರಾಜ ಕುರುವರಿ, ಲಿಂಗರಾಜ್ ಆರೋಡಿ, ಚಂದ್ರಕಾಂತ್ ಆರೋಡಿ, ಚಂದ್ರಶೇಖರ ಸೂರಗುಪ್ಪೆ, ಮಹಾಬಲೇಶ್, ರಕ್ಷಿತಾ, ಶಿಲ್ಪ, ಪ್ರತಿಕಾ ಇನ್ನಿತರರು ಹಾಜರಿದ್ದರು.

Exit mobile version