Site icon Vistara News

Sagara News: ಸಂತೆ ಮೈದಾನ ಲೋಕಾರ್ಪಣೆ ಸಹಿಸದೆ ಅನಗತ್ಯ ಗೊಂದಲ ಸೃಷ್ಟಿ: ಶಾಸಕ ಹಾಲಪ್ಪ ಆರೋಪ

MLA Halappa sagara

#image_title

ಸಾಗರ: “ಸಂತೆ ಮೈದಾನ (Santhe Maidan) ಲೋಕಾರ್ಪಣೆಯನ್ನು ಸಹಿಸದ ಕೆಲವರು ಅನಗತ್ಯ ಗೊಂದಲ ಮಾಡಿದ್ದಾರೆ. ಯಾರು ಏನೇ ಪ್ರಯತ್ನ ನಡೆಸಿದರೂ ಅಭಿವೃದ್ಧಿ ವೇಗವನ್ನು ತಗ್ಗಿಸಲು ಸಾಧ್ಯವಿಲ್ಲ” ಎಂದು ಶಾಸಕ ಎಚ್. ಹರತಾಳು ಹಾಲಪ್ಪ ತಿಳಿಸಿದರು.

ಇಲ್ಲಿನ ಶ್ರೀಮತಿ ಇಂದಿರಾ ಗಾಂಧಿ ಮಹಿಳಾ ಕಾಲೇಜು ಪಕ್ಕದಲ್ಲಿ ನೂತನವಾಗಿ ನಿರ್ಮಿಸಿರುವ ಸುಸಜ್ಜಿತ ಸಂತೆ ಮಾರುಕಟ್ಟೆಯನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡುತ್ತಿದ್ದರು.

“ಎರಡು ಮೂರು ವರ್ಷದಲ್ಲಿ ಸುಸಜ್ಜಿತ ಸಂತೆ ಮೈದಾನ ನಿರ್ಮಿಸಿ ಕೊಡುತ್ತೇವೆ ಎಂದು ಭರವಸೆ ನೀಡಲಾಗಿತ್ತು. ಅದನ್ನು ಈಡೇರಿಸಿದ್ದು, ಇನ್ನೂ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಇನ್ನಷ್ಟು ಮೂಲಭೂತ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ. ಸಂತೆ ಮಾರುಕಟ್ಟೆ ಸೇರಿದಂತೆ ಎಲ್ಲ ಅಭಿವೃದ್ಧಿ ಕೆಲಸಗಳಿಗೆ ಸರ್ಕಾರ ಮತ್ತು ಸ್ಥಳೀಯ ಆಡಳಿತ ಹೆಚ್ಚಿನ ಅನುದಾನ ನೀಡುತ್ತದೆ. ಕೆಲವರು ಮಾಡಿರುವ ಗೊಂದಲಕ್ಕೆ ಯಾರೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಸಣ್ಣಪುಟ್ಟ ನೂನ್ಯತೆಗಳನ್ನು ಸರಿಪಡಿಸಲಾಗುತ್ತದೆ” ಎಂದು ಹೇಳಿದರು.

ಇದನ್ನೂ ಓದಿ: NHM Workers Protest: 48 ಗಂಟೆಯೊಳಗೆ ಕೆಲಸಕ್ಕೆ ಹಾಜರಾಗಿ; ಎನ್‌ಎಚ್‌ಎಂ ಒಳಗುತ್ತಿಗೆ ನೌಕರರಿಗೆ ಸರ್ಕಾರ ಎಚ್ಚರಿಕೆ

ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್ ಮಾತನಾಡಿ, “ಸಂತೆ ಮಾರುಕಟ್ಟೆಗೆ ಎಲ್ಲ ರೀತಿಯ ಮೂಲಭೂತ ಸೌಲಭ್ಯ ಕಲ್ಪಿಸಲಾಗುತ್ತದೆ. ವ್ಯಾಪಾರಸ್ಥರು ಮತ್ತು ಗ್ರಾಹಕರಿಗೆ ಯಾವುದೇ ಅನಾನುಕೂಲ ಆಗದಂತೆ ನಿಗಾ ವಹಿಸಲಾಗುತ್ತದೆ. ಯಾವುದೇ ರೀತಿಯ ಸಮಸ್ಯೆ ಇದ್ದರೂ ನಗರಸಭೆ ಆಡಳಿತ ಮತ್ತು ಅಧಿಕಾರಿಗಳ ಗಮನಕ್ಕೆ ತನ್ನಿ. ಸುಸಜ್ಜಿತ ಹಾಗೂ ಸ್ವಚ್ಛ ಸಂತೆ ಮಾರುಕಟ್ಟೆ ನಿರ್ಮಾಣ ನಗರಸಭೆ ಗುರಿಯಾಗಿದೆ” ಎಂದು ಹೇಳಿದರು.

ಇದನ್ನೂ ಓದಿ: Viral Video : ಸಿಂಹದ ಬೋನಿನೊಳಗೇ ಬೆರಳಿಟ್ಟ ವ್ಯಕ್ತಿ! ಮುಂದೇನಾಯ್ತು? ವಿಡಿಯೊ ನೋಡಿ

ನಗರಸಭೆ ಉಪಾಧ್ಯಕ್ಷ ವಿ.ಮಹೇಶ್, ಸ್ಥಾಯಿ ಸಮಿತಿಯ ಅಧ್ಯಕ್ಷ ಅರವಿಂದ ರಾಯ್ಕರ್, ಸದಸ್ಯರಾದ ಗಣೇಶ ಪ್ರಸಾದ್, ಆರ್.ಶ್ರೀನಿವಾಸ್, ಸೈಯದ್ ಜಾಕೀರ್, ಬಿ.ಎಚ್.ಲಿಂಗರಾಜ್, ಸವಿತಾ ವಾಸು, ಭಾವನಾ ಸಂತೋಷ್, ಮೈತ್ರಿ ಪಾಟೀಲ್, ನಾಗರಾಜ ಪೈ, ಲೋಕನಾಥ ಬಿಳಿಸಿರಿ, ಪೌರಾಯುಕ್ತ ಸಿ. ಚಂದ್ರಪ್ಪ, ಸಹಾಯಕ ಕಾರ್ಯಪಾಲಕ ಅಭಿಯಂತರ ಎಚ್.ಕೆ.ನಾಗಪ್ಪ ಇನ್ನಿತರರು ಹಾಜರಿದ್ದರು.

ಇದನ್ನೂ ಓದಿ: Bangalore Karaga : ಕರಗವನ್ನು ನಾಟಕ ಎಂದಿದ್ದ ಹ್ಯಾರಿಸ್‌, ತಿಗಳರ ಪೇಟೆ ದೇವಳಕ್ಕೆ ಬಂದು ಕ್ಷಮೆಯಾಚನೆ

Exit mobile version