Site icon Vistara News

Sagara News | ಅತ್ತೆ ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ಅಳಿಯ ನಿಧನ

sagara news ಹೃದಯಾಘಾತದಿಂದ ಅತ್ತೆ ಅಳಿಯ ಸಾವು

ಸಾಗರ (ಶಿವಮೊಗ್ಗ): ಅತ್ತೆ ಸಾವಿನ ಸುದ್ದಿ ಕೇಳಿ ಆಘಾತಕ್ಕೆ ಒಳಗಾದ ಅಳಿಯ ಹೃದಯಾಘಾತದಿಂದ ಮೃತಪಟ್ಟ ಘಟನೆ ತಾಲೂಕಿನ ಲಿಂಗನಮಕ್ಕಿಯಲ್ಲಿ (Sagara News) ನಡೆದಿದೆ. ಗುಲ್ಫತ್‌ ಸಿಂಗ್‌ ಮೃತ ದುರ್ದೈವಿಯಾಗಿದ್ದಾರೆ.

ಅಳಿಯ ಗುಲ್ಫತ್‌ ಸಿಂಗ್‌ ತನ್ನ ಸೋದರತ್ತೆ ಲಕ್ಷ್ಮಮ್ಮ ಎಂಬುವವರನ್ನು ಲಿಂಗನಮಕ್ಕಿಯಿಂದ ಬೆಂಗಳೂರಿಗೆ ಹೊರಡುವ ಕೆಎಸ್ಆರ್‌ಟಿಸಿ ಬಸ್ಸಿನಲ್ಲಿ ಕಳಿಸಿಕೊಟ್ಟಿದ್ದರು. ಆ ಬಸ್ಸು ಆನಂದಪುರ ಸಮೀಪ ಹೋಗುತ್ತಿದ್ದಾಗ ಅತ್ತೆ ಲಕ್ಷ್ಮಮ್ಮರಿಗೆ ಹೃದಯಾಘಾತವಾಗಿದೆ.

ಬಸ್ಸಿನಲ್ಲಿದ್ದ ನಿರ್ವಾಹಕರು ಲಕ್ಷ್ಮಮ್ಮ ಅವರ ಮೊಬೈಲ್‌ನಿಂದ ಸಂಬಂಧಿಕರಿಗೆ ಕರೆ ಮಾಡಿ ಮೃತಪಟ್ಟ ಸುದ್ದಿಯನ್ನು ತಿಳಿಸಿದ್ದಾರೆ. ಅಳಿಯ ಗುಲ್ಫತ್ ಸಿಂಗ್ ಅತ್ತೆ ಸಾವಿನ ಸುದ್ದಿ ಗೊತ್ತಾಗುತ್ತಿದ್ದಂತೆ ಶಾಕ್ ಆಗಿದ್ದಾರೆ. ಈ ವೇಳೆ ಲಿಂಗನಮಕ್ಕಿಯಿಂದ ಮನೆಗೆ ನಡೆದುಕೊಂಡು ಬರುತ್ತಿದ್ದರು. ಮಾರ್ಗ ಮಧ್ಯೆಯಲ್ಲಿಯೇ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಇದನ್ನೂ ಓದಿ | Murder Case | ಹಣಕಾಸಿನ ವಿಚಾರಕ್ಕೆ ಜಗಳ; ಕಲ್ಲಿನಿಂದ ಜಜ್ಜಿ ಸ್ನೇಹಿತನನ್ನೇ ಕೊಂದರು

Exit mobile version