Site icon Vistara News

Sagara News: ವಾರದಿಂದ ಕುಡಿಯುವ ನೀರು ಬಿಡದ ನಗರ ಸಭೆ; ರಸ್ತೆ ತಡೆದು ಪ್ರತಿಭಟಿಸಿದ ಕಾಂಗ್ರೆಸ್‌

Water problem sagara protest Gopalakrishna Belur

#image_title

ಸಾಗರ: ನಗರ ವ್ಯಾಪ್ತಿಯ ಬಹುತೇಕ ವಾರ್ಡ್‍ಗಳಲ್ಲಿ ಒಂದು ವಾರದಿಂದ ಕುಡಿಯುವ ನೀರು ಬಿಡದ ನಗರ ಸಭೆ (Sagara News) ಆಡಳಿತದ ವಿರುದ್ಧ ಕಾಂಗ್ರೆಸ್ ವತಿಯಿಂದ ಜೋಸೆಫ್ ನಗರದಲ್ಲಿ ಸೋಮವಾರ (ಜ.೩೦) ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು, ನಗರ ವ್ಯಾಪ್ತಿಯಲ್ಲಿ ಸಮರ್ಪಕ ನೀರು ಬಿಡದೆ ಇರುವುದರಿಂದ ಜನರು ಬೀದಿಗಿಳಿದು ಪ್ರತಿಭಟನೆ ಮಾಡುವ ಅನಿವಾರ್ಯ ಸ್ಥಿತಿಯನ್ನು ಶಾಸಕರು ಹಾಗೂ ನಗರ ಸಭೆ ಆಡಳಿತ ತಂದಿಟ್ಟಿದೆ. ಕಳೆದ ಹತ್ತು ಹದಿನೈದು ದಿನಗಳಿಂದ ನಗರದ ಬಹುತೇಕ ವಾರ್ಡ್‍ಗಳಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ವಾರ್ಡ್‍ಗಳಿಗೆ ಬಿಡಬೇಕಾದ ನೀರನ್ನು ಕೆರೆ ಹಬ್ಬ ಆಚರಿಸಲು ಗಣಪತಿ ಕೆರೆ ತುಂಬಿಸುತ್ತಿರುವುದು ಶಾಸಕರ ಕ್ರಮ ಖಂಡನೀಯ. ಮೊದಲು ನಗರ ವ್ಯಾಪ್ತಿಯ ಜನರಿಗೆ ಕುಡಿಯುವ ನೀರು ಕೊಟ್ಟು ನಂತರ ಗಣಪತಿ ಕೆರೆ ತುಂಬಿಸಿ ಕೆರೆ ಹಬ್ಬ ಮಾಡಲಿ ಎಂದು ಸಲಹೆ ನೀಡಿದರು.

ಇದನ್ನೂ ಓದಿ | Kiccha Sudeep : ಕಿಚ್ಚ ಸಿನಿ ಜರ್ನಿಗೆ 27 ವರ್ಷ; ಭಾವುಕ ಸಂದೇಶ ಹಂಚಿಕೊಂಡ ಅಭಿನಯ ಚಕ್ರವರ್ತಿ

ನಾನು ಶಾಸಕನಾಗಿದ್ದ ಅವಧಿಯಲ್ಲಿ ನಗರದ ಜನರಿಗೆ ಸಮರ್ಪಕ ಕುಡಿಯುವ ನೀರು ಕೊಡಬೇಕು ಎಂದು ಶರಾವತಿ ಹಿನ್ನೀರಿನಿಂದ ನಗರಕ್ಕೆ ಕುಡಿಯುವ ನೀರು ತರಲಾಗಿತ್ತು. ಇದೀಗ ಶಾಸಕರು ಕೆರೆ ಹಬ್ಬದ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳಲು ನೀರನ್ನು ಕೆರೆಗೆ ಬಿಟ್ಟು ಜನರಿಗೆ ಮೋಸ ಮಾಡುತ್ತಿದ್ದಾರೆ. ಜನರಿಗೆ ಕನಿಷ್ಠ ನೀರು ಕೊಡುವ ಯೋಗ್ಯತೆ ಶಾಸಕರಿಗೆ, ನಗರಸಭೆ ಆಡಳಿತಕ್ಕೆ ಇಲ್ಲವಾಗಿದೆ. ಜನರ ಕುಡಿಯುವ ನೀರು ಸಮಸ್ಯೆ ಬಗೆಹರಿಸದೆ ಹೋದಲ್ಲಿ ಕಾಂಗ್ರೆಸ್ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.

ಐ.ಎನ್.ಸುರೇಶ ಬಾಬು, ಎನ್.ಲಲಿತಮ್ಮ, ಮಧು ಮಾಲತಿ, ಗಣಪತಿ ಮಂಡಗಳಲೆ, ಮಕ್ಬೂಲ್ ಅಹ್ಮದ್, ಡಿ.ದಿನೇಶ್, ಅನ್ವರ್ ಭಾಷಾ, ಚಿಂಟೂ ಸಾಗರ್, ಕುಮಾರ ಶೆಟ್ಟಿ, ಮಹ್ಮದ್ ಜಕ್ರಿಯ, ಕಿರಣ್ ದೊಡ್ಮನೆ, ಸಬೀನಾ ತನ್ವೀರ್, ಡಿ.ದಿನೇಶ್, ಇಂದೂಮತಿ, ಸೌಮ್ಯ, ರೂಪ, ಫಾತಿಮಾ ಇನ್ನಿತರರು ಹಾಜರಿದ್ದರು.

ಇದನ್ನೂ ಓದಿ | Video blackmail : ಬೆತ್ತಲೆ ವಿಡಿಯೊ ಮಾಡಿಕೊಂಡು ಬ್ಲ್ಯಾಕ್‌ಮೇಲ್‌; ಹಣ ಹೊಂದಿಸಲಾಗದೆ ಯುವಕ ಆತ್ಮಹತ್ಯೆ

Exit mobile version