Site icon Vistara News

ದತ್ತ ಪೀಠದ ಪೂಜಾ ಸ್ಥಳದಲ್ಲಿ ಮುಸ್ಲಿಮರಿಂದ ಅಪವಿತ್ರ ಆಗೋದು ಬೇಡ; ಪ್ರಮೋದ್ ಮುತಾಲಿಕ್‌ ಖಡಕ್‌ ನುಡಿ

ಪ್ರಮೋದ್‌ ಮುತಾಲಿಕ್

ಧಾರವಾಡ: ಬಾಬಾ ಬುಡನ್‌ಗಿರಿಯ ದತ್ತ ಪೀಠದಲ್ಲಿ ಹಿಂದೂ ಅರ್ಚಕರ ನೇಮಕ ಆಗಬೇಕು. ತ್ರಿಕಾಲ ಪೂಜೆ ನಡೆಯಬೇಕು ಎಂಬ ಬೇಡಿಕೆ ಬಹಳ ವರ್ಷಗಳಿಂದ ಇತ್ತು. ಈ ನಿಟ್ಟಿನಲ್ಲಿ ಪೂಜಾ ಕೈಂಕರ್ಯಗಳನ್ನು ನೆರವೇರಿಸುವುದಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿರುವುದನ್ನು ಸ್ವಾಗತಿಸುತ್ತೇವೆ. ಆದರೆ, ಪೂಜಾ ಸ್ಥಳದಲ್ಲಿ ಮುಸ್ಲಿಮರು ಪ್ರವೇಶ ಮಾಡಿ ಅಪವಿತ್ರ ಮಾಡುವುದು ಬೇಡ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.

ದತ್ತಾತ್ರೇಯ ಪೀಠದ ‌ಪಾದುಕೆ ಪೂಜೆ ಹಾಗೂ ನಿರಂತರ ತ್ರಿಕಾಲ ಪೂಜೆಯಾದರೆ ಸರ್ವರಿಗೂ ಶಾಂತಿ – ನೆಮ್ಮದಿ ಸಿಗಲಿದೆ ಎಂಬ ನಂಬಿಕೆ ಇದೆ. ಇಲ್ಲಿಯವರೆಗೆ ಆಗದೆ ಇರುವ ತ್ರಿಕಾಲ ಪೂಜೆಯು ಇನ್ನು ಮುಂದೆ ಆಗಬೇಕು. ಮುಸ್ಲಿಮರು ಬೇಕಿದ್ದಲ್ಲಿ ಅಲ್ಲಿನ ನಾಗೇನಹಳ್ಳಿ ದರ್ಗಾದಲ್ಲಿ ಅವರ ಧಾರ್ಮಿಕ ಆಚರಣೆಗಳನ್ನು ಮಾಡಿಕೊಳ್ಳಬಹುದು ಎಂದು ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.

ದತ್ತಪೀಠಕ್ಕೆ ಮುಸ್ಲಿಮರ ಮುಜಾವರ್ ಬಂದು ಅಪವಿತ್ರ ಮಾಡುವುದು ಬೇಡ. ಅವರು ಗೋಮಾಂಸ ತಿನ್ನುತ್ತಾರೆ, ದೇವರನ್ನು ನಂಬಲ್ಲ, ನಾಸ್ತಿಕವಾದಿಗಳು. ಅಲ್ಲಾ ಒಬ್ಬನೇ ದೇವರು, ಉಳಿದವರು ಕಾಫಿರರು ಎನ್ನುವವರಿಗೆ ಅಲ್ಲಿ ಪ್ರವೇಶ ಬೇಡ. ಅಲ್ಲಿ ಅವರು ಪ್ರವೇಶ ಮಾಡಿದರೆ ಅಪವಿತ್ರ ಆಗಲಿದೆ. ಪೂಜೆಗೆ ಸಂಬಂಧಪಟ್ಟಂತೆ ಕೋರ್ಟ್ ಮೂಲಕವೇ ವ್ಯವಸ್ಥೆ ಆಗಬೇಕು ಎಂದರು.

ಇದನ್ನೂ ಓದಿ | ನೂಪುರ್, ಚಕ್ರತೀರ್ಥ, ಕಾಶ್ಮೀರ ಹಿಂದೂಗಳಿಗೆ ನಮ್ಮ ಬೆಂಬಲ: ಪ್ರಮೋದ್‌ ಮುತಾಲಿಕ್

Exit mobile version