Site icon Vistara News

ಕವಿ ಸಮ್ಮೇಳನ | ಅ.21ರಿಂದ ಬಳ್ಳಾರಿಯಲ್ಲಿ ಸಂಗಂ ವಿಶ್ವ ಕವಿ ಸಮ್ಮೇಳನ, 17 ದೇಶಗಳ ಕವಿಗಳು ಭಾಗಿ, ಸಂಗಂ ಪುರಸ್ಕಾರ ಪ್ರದಾನ

poetry

ಬಳ್ಳಾರಿ: ಅರಿವು ಸಂಸ್ಥೆಯಿದ ಅ. 21ರಿಂದ ಮೂರು ದಿನಗಳ`ʻಸಂಗಂ ವಿಶ್ವ ಕವಿ ಸಮ್ಮೇಳನ’ವನ್ನು ನಗರದ ಬಿಐಟಿಎಂ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ವಿವಿಧ ದೇಶಗಳ ಅನೇಕ ಕವಿಗಳು ಭಾಗವಹಿಸಲಿದ್ದಾರೆ ಎಂದು ಸಂಗ ವಿಶ್ವಕವು ಸಮ್ಮೇಳನದ ಸ್ವಾಗತ ಸಮಿತಿಯ ಮುಖ್ಯಸ್ಥರಾದ ಡಾ.ಅರವಿಂದ ಪಾಟೀಲ್ ಹಾಗೂ ಸಿರಿಗೇರಿ ಪನ್ನರಾಜ್ತಿ ಳಿಸಿದರು.

ಆಮಂತ್ರಣ ಪತ್ರಿಕೆ

ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ದೇಶ-ವಿದೇಶಗಳ ಕವಿಗಳು ಹಾಗೂ ಸ್ಥಳೀಯ ಕವಿಗಳು ಸೇರಿದಂತೆ ಒಟ್ಟು 400 ಜನರು ಸಮ್ಮೇಳನದಲ್ಲಿ ಪಾಲ್ಗೊಳ್ಳುವರು. ಸಮ್ಮೇಳವನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಅವರು ಅ.21ರಂದು ಉದ್ಘಾಟಿಸಲಿದ್ದು, ಅ.22ರಂದು ಜರುಗುವ ಸಂಗ ಸಾಹಿತ್ಯ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಾಲ್ಗೊಳ್ಳುವರು. ಅ.23ರಂದು ನಡೆಯುವ ಸಮಾರೋಪದಲ್ಲಿ ಹಿರಿಯ ಲೇಖಕ ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಮೂರು ದಿನಗಳ ಕಾರ್ಯಕ್ರಮದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ವಿವಿಧ ದೇಶಗಳ 17 ಕವಿಗಳು, ಭಾರತದ ವಿವಿಧ ರಾಜ್ಯಗಳ 21 ಕವಿಗಳು, ಕರ್ನಾಟಕದ ವಿವಿಧ ಜಿಲ್ಲೆಗಳ 19 ಕವಿಗಳು ಹಾಗೂ ಬಳ್ಳಾರಿ ಜಿಲ್ಲೆಯ 11 ಕವಿಗಳು ಸಮ್ಮೇಳದಲ್ಲಿ ಕಾವ್ಯವಾಚನ ಮಾಡಲಿದ್ದಾರೆ. ಬೇರೆ ದೇಶಗಳ ಕವಿಗಳ ಕಾವ್ಯವನ್ನು ಕನ್ನಡಕ್ಕೆ ಅನುವಾದ ಮಾಡಲಾಗಿದ್ದು, ವೇದಿಕೆಯ ಎಲ್‌ಇಡಿ ಸ್ಕ್ರೀನ್‌ ಮೇಲೆ ಅನುವಾದ ಮೂಡಿ ಬರಲಿದೆ. ಸಮ್ಮೇಳನದಲ್ಲಿ ಪಾಲ್ಗೊಂಡು ಕಾವ್ಯ ವಾಚನ ಮಾಡುವ ಎಲ್ಲ ಕವಿಗಳ ಕಾವ್ಯಗಳ ಅನುವಾದದ ಪುಸ್ತಕವನ್ನು ಸಹ ಮುದ್ರಿಸಲಾಗಿದ್ದು, ಸಮ್ಮೇಳನದಲ್ಲಿ ನೀಡಲಾಗುವುದು ಎಂದು ತಿಳಿಸಿದರು.

ಸಂಗಂ ಪುರಸ್ಕಾರ
ಸಮ್ಮೇಳನದಲ್ಲಿ ಸಾಹಿತ್ಯ ಕೃತಿಯೊಂದಕ್ಕೆ `ʻಸಂಗಂ’ ಪುರಸ್ಕಾರ ನೀಡಲಾಗುವುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುರಸ್ಕಾರ ನೀಡುವರು. ಪುರಸ್ಕೃತ ಕೃತಿಗೆ 25 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ನೀಡಲಾಗುವುದು. ಕೃತಿ ಆಯ್ಕೆಯಾಗಿ ಹಿರಿಯ ಕವಿಗಳ ಸಮಿತಿ ರಚಿಸಲಾಗಿದೆ. ಪ್ರಶಸ್ತಿಗೆ 146 ಕೃತಿಗಳು ಬಂದಿವೆ. ಕೃತಿ ಆಯ್ಕೆ ಪ್ರಕ್ರಿಯೆ ನಡೆದಿದೆ ಎಂದು ತಿಳಿಸಿದರು.

ಸಮ್ಮೇಳನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಪ್ರವಾಸೋದ್ಯಮ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರವಿದೆ. ಜಿಂದಾಲ್‌ನಲ್ಲಿ ಹೊರ ದೇಶ ಹಾಗೂ ರಾಜ್ಯಗಳ ಕವಿಗಳಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಲೇಖಕ ಶಿವಲಿಂಗಪ್ಪ ಹಂದ್ಯಾಳು, ಅಜಯ್ಬ ಬಣಕಾರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಿಷ್ಠಿ ರುದ್ರಪ್ಪ ಇದ್ದರು.

Exit mobile version