ಬೆಳಗಾವಿ: ಇಲ್ಲಿನ ಮೊದೆಕೊಪ್ಪ ಗ್ರಾಮದ 35ಕ್ಕೂ ಅಧಿಕ ಯಾತ್ರಾರ್ಥಿಗಳು ವಿಷಾಹಾರ (Food Poisoning) ಸೇವಿಸಿ ಅಸ್ವಸ್ಥರಾಗಿರುವ ಘಟನೆ ನಡೆದಿದೆ. ಭರತ ಹುಣ್ಣಿಮೆ ನಿಮಿತ್ತ ಸವದತ್ತಿಯ ರೇಣುಕಾದೇವಿ (Savadatti RenukaDevi) ಜಾತ್ರೆಗೆ ಯಾತ್ರಾರ್ಥಿಗಳು ಹೋಗಿದ್ದರು. ಈ ವೇಳೆ ಆಹಾರ ಸೇವಿಸಿದ್ದಾಗ ಸಮಸ್ಯೆಯಾಗಿದೆ.
ಖಾನಾಪುರ ತಾಲೂಕಿನ ಮೊದೆಕೊಪ್ಪ ಗ್ರಾಮಸ್ಥರು ಒಂದೇ ವಾಹನದಲ್ಲಿ ಜಾತ್ರೆಗೆ ಹೋಗಿದ್ದವರು, ಜಾತ್ರೆಯಲ್ಲಿ ಆಹಾರ ಸೇವಿಸಿದ್ದಾರೆ. ಜಾತ್ರೆ ಮುಗಿಸಿ ಮರಳಿ ಬರುವಾಗ ಯಾತ್ರಾರ್ಥಿಗಳಲ್ಲಿ ಒಬ್ಬರ ಹಿಂದೆ ಒಬ್ಬರಂತೆ ವಾಂತಿ-ಭೇದಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: CWG- 2022 | ಆಸೀಸ್ ಬಳಗವನ್ನು ಮಣಿಸಲು ಭಾರತೀಯ ವನಿತೆಯರು ತಯಾರು
ತಕ್ಷಣವೇ ಅಸ್ವಸ್ಥಗೊಂಡವರನ್ನು ಖಾನಾಪುರ ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಶಾಸಕಿ ಅಂಜಲಿ ನಿಂಬಾಳ್ಕರ್ ಭೇಟಿ ನೀಡಿ ಯಾತ್ರಾರ್ಥಿಗಳ ಆರೋಗ್ಯ ವಿಚಾರಿಸಿದ್ದಾರೆ. ಸದ್ಯ ಎಲ್ಲರ ಆರೋಗ್ಯವೂ ಸುಧಾರಿಸುತ್ತಿದೆ ಎಂದು ಆಸ್ಪತ್ರೆಯ ಟಿಎಚ್ಓ ಮಾಹಿತಿ ನೀಡಿದ್ದಾರೆ.