Site icon Vistara News

Savarkar Issue | ಚಿಕ್ಕಮಗಳೂರು ಪ್ರಮುಖ ರಸ್ತೆಯಲ್ಲಿ ರಾತ್ರೋರಾತ್ರಿ ತಲೆಎತ್ತಿದ ಸಾವರ್ಕರ್ ಮಹಾದ್ವಾರ!

Savarkar Issue

ಚಿಕ್ಕಮಗಳೂರು: ನಗರದ ಬಸವನಹಳ್ಳಿ ಮುಖ್ಯ ರಸ್ತೆಯ ಹನುಮಂತಪ್ಪ ಸರ್ಕಲ್ ಬಳಿ ಶುಕ್ರವಾರ ತಡರಾತ್ರಿ ವೇಳೆಗೆ ಸಾವರ್ಕರ್ (Savarkar Issue) ಹೆಸರಿನಲ್ಲಿ ಮಹಾದ್ವಾರ ನಿರ್ಮಾಣ ಮಾಡಲಾಗಿದ್ದು, ಶನಿವಾರ (ಆ.೩) ಬೆಳಗ್ಗೆ ವಿಷಯ ಗೊತ್ತಾಗಿದೆ.

ಹಿಂದುಪರ ಸಂಘಟನೆಗಳ ಕಾರ್ಯಕರ್ತರಿಂದ ಮಹಾದ್ವಾರ ನಿರ್ಮಾಣ ಆಗಿದೆ ಎನ್ನಲಾಗಿದೆ. ಆದರೆ, ಇದು ಪ್ರತಿ ವರ್ಷದಂತೆ ನಡೆದಿದೆ ಎಂದೂ ಹೇಳಲಾಗುತ್ತಿದೆ. ಹಿಂದು ಮಹಾಸಭಾದಿಂದ ಗಣಪತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ವೀರ ಸಾವರ್ಕರ್‌ ಅವರ ಫೋಟೊವುಳ್ಳ ಕೇಸರಿ ಬಣ್ಣದ ಸ್ವಾಗತ ಕಮಾನನ್ನು ನಿರ್ಮಾಣ ಮಾಡಲಾಗಿದೆ.

ಈ ಪ್ರವೇಶ ದ್ವಾರಕ್ಕೆ ವೀರ ವಿನಾಯಕ ದಾಮೋದರ ಸಾವರ್ಕರ್‌ ಎಂದು ಹೆಸರು ಬರೆಯಲಾಗಿದೆ. ಇದು ಪ್ರತಿ ವರ್ಷ ಗಣೇಶೋತ್ಸವದ ಸಂದರ್ಭದಲ್ಲಿಯೂ ತಪ್ಪದೇ ನಡೆದುಕೊಂಡು ಬಂದ ಪದ್ಧತಿ ಎಂದೂ ಹೇಳಲಾಗುತ್ತದೆ.

ಇದನ್ನೂ ಓದಿ | ತುಮಕೂರಿನಲ್ಲೂ ಫ್ಲೆಕ್ಸ್‌ ವಿವಾದ: ವೀರ ಸಾವರ್ಕರ್‌ ಚಿತ್ರವಿರುವ ಬ್ಯಾನರ್‌ ಹರಿದ ಕಿಡಿಗೇಡಿಗಳು

Exit mobile version